ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ವರ್ಷದಲ್ಲೇ ಭಾರತದ ಗಡಿಯಲ್ಲಿ 2 ಪಟ್ಟಾಯ್ತು ಚೀನಾದ ಸೇನೆ!

|
Google Oneindia Kannada News

ನವದೆಹಲಿ, ಸಪ್ಟೆಂಬರ್.22: ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಕಳೆದ ಮೂರು ವರ್ಷಗಳಿಂದ ಈಚೆಗೆ ಉಭಯ ರಾಷ್ಟ್ರಗಳ ನಡುವೆ ಹಲವು ಬಾರಿ ಸಂಘರ್ಷಗಳು ನಡೆದಿರುವುದು ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಚಿತ್ರಣವನ್ನೇ ಬದಲಿಸಿ ಬಿಟ್ಟಿದೆ.

2017ರ ಡೋಕ್ಲಾಂ ಬಿಕ್ಕಟ್ಟು ಸಂಭವಿಸಿದ ದಿನದಿಂದ ಎರಡು ದೇಶಗಳ ನಡುವಿನ ಗಡಿ ಚಿತ್ರಣ ಬದಲಾಗಿದೆ. ಮೂರು ವರ್ಷಗಳಲ್ಲಿ ಭೂತಾನ್ ಮತ್ತು ಸಿಕ್ಕಿಂ ಗಡಿಯಲ್ಲಿ ಚೀನಾದ ವಾಯು ನೆಲೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಭಾರತೀಯ ಗಡಿ ಪ್ರದೇಶದ ಹತ್ತಿರದಲ್ಲೇ ಚೀನಾದ ಹೆಲಿಕಾಪ್ಟರ್ ಮತ್ತು ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಾಗಿದೆ.

ಚೀನಾ ಸೇನೆಯ 'ಉಪದ್ರವ'ದ ಚಿತ್ರಗಳು 'ಉಪಗ್ರಹ'ದಲ್ಲೂ ಸೆರೆ! ಚೀನಾ ಸೇನೆಯ 'ಉಪದ್ರವ'ದ ಚಿತ್ರಗಳು 'ಉಪಗ್ರಹ'ದಲ್ಲೂ ಸೆರೆ!

ಚೀನಾದ ರಾಜತಾಂತ್ರಿಕ ಲೆಕ್ಕಾಚಾರಕ್ಕೆ ಭಾರತ ಮತ್ತು ಚೀನಾದ ಗಡಿಯಲ್ಲಿ ಇತ್ತೀಚಿಗೆ ಕಂಡು ಬಂದ ಚಿತ್ರಣವೇ ಸಾಕ್ಷಿಯಾಗಿ ನಿಲ್ಲುತ್ತದೆ. ಮೂರು ವರ್ಷಗಳ ಹಿಂದಿನ ಚಿತ್ರಣ ಒಂದು ರೀತಿಯಾಗಿದ್ದರೆ ಲಡಾಖ್ ಪೂರ್ವ ಗಡಿಯಲ್ಲಿನ ಸಂಘರ್ಷದ ಬಳಿಕ ಗಡಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮೂರು ವರ್ಷಗಳಲ್ಲಿ ಭಾರತ-ಚೀನಾ ಗಡಿಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಒಂದು ವರದಿ ಇಲ್ಲಿದೆ.

ಗುಪ್ತಚರ ವರದಿಯಲ್ಲಿ ಚೀನಾ ಬಣ್ಣ ಬಯಲು

ಗುಪ್ತಚರ ವರದಿಯಲ್ಲಿ ಚೀನಾ ಬಣ್ಣ ಬಯಲು

ಜಾಗತಿಕ ಭೌಗೋಳಿಕ ರಾಜಕೀಯ ಗುಪ್ತಚರ ವೇದಿಕೆಯಾಗಿರುವ ಸ್ಟ್ರಾಟ್ ‌ಫೋರ್ ಇನ್ನೂ ಬಿಡುಗಡೆ ಮಾಡದ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಚೀನಾದ ವಿಸ್ತರಣಾವಾದದ ಬಗ್ಗೆ ಎನ್ ಡಿಟಿವಿ ತನ್ನ ವಿಸ್ತೃತ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದ ಭದ್ರತೆಗೆ ನೇರ ಪರಿಣಾಮ ಬೀರುವ ಮಿಲಿಟರಿ ಸೌಲಭ್ಯಗಳ ಉಪಗ್ರಹ ಚಿತ್ರಗಳ ವಿವರವಾದ ವಿಶ್ಲೇಷಣೆಯ ಮೂಲಕ ಚೀನಾದ ಮಿಲಿಟರಿ-ಮೂಲಸೌಕರ್ಯ ನಿರ್ಮಾಣದ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.

ಚೀನಾ ದುರುದ್ದೇಶಪೂರಿತ ಲಡಾಖ್ ಸಂಘರ್ಷ

ಚೀನಾ ದುರುದ್ದೇಶಪೂರಿತ ಲಡಾಖ್ ಸಂಘರ್ಷ

ಭಾರತ-ಚೀನಾ ಪೂರ್ವದಲ್ಲಿ ಇತ್ತೀಚಿಗೆ ಡ್ರ್ಯಾಗನ್ ರಾಷ್ಟ್ರವು ಹೆಚ್ಚು ಕಾಲ್ಕೆರೆದು ನಿಲ್ಲುತ್ತಿದೆ. ಲಡಾಖ್ ಸಂಘರ್ಷದ ಹಿಂದೆ ಚೀನಾದ ದುರುದ್ದೇಶ ಅಡಗಿದೆ ಎಂದು ಸ್ಟ್ರಾಟ್ ‌ಫೋರ್ ದ ಜಾಗತಿಕ ಮಟ್ಟದ ಹಿರಿಯ ವಿಶ್ಲೇಷಕ ಸಿಮ್ ಟ್ಯಾಕ್ ಹೇಳಿದ್ದಾರೆ. ಉಭಯ ರಾಷ್ಟ್ರಗಳ ಗಡಿಯಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣದಲ್ಲಿ ಚೀನಾ ಹಿಡಿತ ಸಾಧಿಸಬೇಕಿದೆ. ಈ ದುರುದ್ದೇಶದಿಂದಾಗಿ ಗಡಿಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿಕೊಂಡು ತನ್ನ ಕೆಲಸ ಸಾಧಿಸಿಕೊಳ್ಳುವುದಕ್ಕೆ ನೋಡುತ್ತಿದೆ ಎಂದು ದೂಷಿಸಿದ್ದಾರೆ.

ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!ಭಾರತ-ಚೀನಾ ಗಡಿ ಉದ್ವಿಗ್ನತೆ ಹಿಂದಿನ ರೋಚಕ ಇತಿಹಾಸ!

ತನ್ನ ಸೇನೆಯ ಚಟುವಟಿಕೆ ಬಗ್ಗೆ ಚೀನಾ ಹೇಳುವುದೇನು?

ತನ್ನ ಸೇನೆಯ ಚಟುವಟಿಕೆ ಬಗ್ಗೆ ಚೀನಾ ಹೇಳುವುದೇನು?

ಚೀನಾ ತನ್ನ ಸೇನೆಗೆ ನಿರ್ಮಿಸುತ್ತಿರುವ ಮೂಲಸೌಕರ್ಯಗಳ ನವೀಕರಣ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ. ಸೇನೆಗೆ ಅಗತ್ಯವಿರುವ ಮೂಲಸೌಕರ್ಯಗಳ ನಿರ್ಮಾಣ ಮತ್ತು ವಿಸ್ತರಣೆಗೆ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ಈ ಹಿನ್ನೆಲೆ ದೀರ್ಘಾವಧಿ ಉದ್ದೇಶವನ್ನು ಇಟ್ಟುಕೊಂಡು ಮಿಲಿಟರಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಮೂಲಸೌಕರ್ಯಗಳು ಪೂರ್ಣಗೊಂಡಿದ್ದಲ್ಲಿ ಚೀನಾದ ಪಾಲಿಗೆ ಮುಂದಿನ ದಿನಗಳಲ್ಲಿ ಹೆಚ್ಚು ಪ್ರಚೋದನಾತ್ಮಕ ಕಾರ್ಯಗಳಿಗೆ ಬೆಂಬಲ ಸಿಕ್ಕಂತೆ ಆಗುತ್ತದೆ ಎಂಬ ಸತ್ಯವು ಭಾರತಕ್ಕೂ ತಿಳಿದಿದೆ.

ಗಡಿಯಲ್ಲಿ 13 ಸೇನಾ ಶಿಬಿರ ನಿರ್ಮಿಸಲು ಚೀನಾ ಮುಂದು

ಗಡಿಯಲ್ಲಿ 13 ಸೇನಾ ಶಿಬಿರ ನಿರ್ಮಿಸಲು ಚೀನಾ ಮುಂದು

ವರದಿಯ ಪ್ರಕಾರ, ಭಾರತಕ್ಕೆ ಹೊಂದಿಕೊಂಡಂತಿರುವ ಗಡಿಯಲ್ಲಿ ಚೀನಾ ಸೇನೆಯು ತನ್ನ 13 ಶಿಬಿರಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಕಾಮಗಾರಿಯನ್ನು ಆರಂಭಿಸಿದೆ. ಇದರಲ್ಲಿ 3 ವಾಯುನೆಲೆ, 5 ಶಾಶ್ವತ ಭದ್ರತಾ ವಾಯುಸೇನಾ ಶಿಬಿರ ಮತ್ತು 5 ಹೆಲಿಕಾಪ್ಟರ್ ಶಿಬಿರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ನಾಲ್ಕು ಹೊಸ ವಾಯುನೆಲೆಗಳನ್ನು ಸ್ಥಾಪಿಸುವುದಕ್ಕೆ ಕಳೆದ ಮೇ ತಿಂಗಳನಲ್ಲಿ ಮುಂದಾಗಿದ್ದೇ ಲಡಾಖ್ ಗಡಿ ಸಂಘರ್ಷಕ್ಕೆ ಕಾರಣವಾಗಿತ್ತು.

ಅಮೆರಿಕಾ-ಭಾರತದ ನಂಟು ಚೀನಾವನ್ನು ಕೆರಳಿಸಿತಾ?

ಅಮೆರಿಕಾ-ಭಾರತದ ನಂಟು ಚೀನಾವನ್ನು ಕೆರಳಿಸಿತಾ?

ಏಷ್ಯಾ-ಪೆಸಿಫಿಕ್ ಪಟ್ಟಿಯಲ್ಲಿರುವ ಹಲವು ರಾಷ್ಟ್ರಗಳು ಈ ಪ್ರದೇಶ ತನ್ನ ವ್ಯಾಪ್ತಿಯಲ್ಲಿದೆ ಎಂಬ ಬೀಜಿಂಗ್ ಹೇಳಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದವು. ಈ ವರ್ಷದ ಮೇ ತಿಂಗಳಿನಲ್ಲಿ ಯುನೈಟೆಡ್ ಸ್ಟೇಟ್ಸ್‌ ಜೊತೆಗೆ ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಂಚರಿಸುವ ಸ್ವಾತಂತ್ರ್ಯವನ್ನು ಭಾರತವು ಸಾಧಿಸಲಿದೆ. ''ದಕ್ಷಿಣ ಚೀನಾ ಸಮುದ್ರವು ಜಾಗತಿಕ ಸಾಮಾನ್ಯ ಪ್ರದೇಶಗಳ ಒಂದು ಭಾಗವಾಗಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಬಗ್ಗೆ ಭಾರತವು ನಿರಂತರ ಆಸಕ್ತಿ ಹೊಂದಿರುತ್ತದೆ ಎಂದಿತ್ತು. ವಾಷಿಂಗ್ಟನ್‌ನೊಂದಿಗಿನ ಭಾರತದ ನಿಕಟ ಕಾರ್ಯತಂತ್ರದ ಸಹಭಾಗಿತ್ವದ ಬಗ್ಗೆ ಎಚ್ಚರದಿಂದ ಇರುವುದು ಬೀಜಿಂಗ್ ಕೆರಳುವಂತೆ ಮಾಡಿತು.

ಭಾರತದೊಂದಿಗೆ ಕಾಲ್ಕೆರೆದು ನಿಂತ ಚೀನಾ ಸೇನೆ

ಭಾರತದೊಂದಿಗೆ ಕಾಲ್ಕೆರೆದು ನಿಂತ ಚೀನಾ ಸೇನೆ

ದಕ್ಷಿಣ ಚೀನಾ ಸಮುದ್ರದ ನೀತಿಯನ್ನೇ ಚೀನಾ ಭಾರತದೊಂದಿಗೆ ತನ್ನ ಭೂಗಡಿ ಪ್ರದೇಶದಲ್ಲಿ ಅನುಸರಿಸಿತು. ಉಭಯ ರಾಷ್ಟ್ರಗಳ ಸೇನಾ ಸಂಘರ್ಷಗಳ ಮೂಲದ ತನ್ನ ಸಾಮರ್ಥ್ಯ ಮತ್ತು ಉದ್ದೇಶವನ್ನು ಸ್ಪಷ್ಟವಾಗಿ ಪ್ರದರ್ಶಿಸುವ ಕಾರ್ಯತಂತ್ರವನ್ನು ಹೂಡಲಾಯಿತು. ಇದರಿಂದ ಮುಂದಿನ ಗಡಿ ವಿವಾದದ ಸಂದರ್ಭಗಳಲ್ಲಿ ಭಾರತೀಯ ಸೇನೆಯ ಪ್ರತಿರೋಧ ಮತ್ತು ಮಿಲಿಟರಿ ಕ್ರಮಗಳನ್ನು ನಿರುತ್ಸಾಹಗೊಳಿಸುವ ಉದ್ದೇಶವನ್ನು ಚೀನಾ ಹಾಕಿಕೊಂಡಿತ್ತು ಎಂದು ತಿಳಿದು ಬಂದಿದೆ.

ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಸೇನೆ

ಪ್ಯಾಂಗಾಂಗ್ ಸರೋವರದ ಬಳಿ ಚೀನಾ ಸೇನೆ

ಕಳೆದ ಮೇ ತಿಂಗಳಿನಿಂದ ಪ್ಯಾಂಗಾಂಗ್ ತ್ಸೋ ಸರೋವರದ ಸುತ್ತಮುತ್ತಲಿನಲ್ಲಿ ಚೀನಾ ಸೇನೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಕೊಳ್ಳುತ್ತಲೇ ಇದೆ. ಟಿಬೆಟ್ ನ ನಗರಿ-ಗುಂನ್ಸಾ ವಿಮಾನ ನಿಲ್ದಾಣದ ಬಳಿ ಬೃಹತ್ ಕಾಮಗಾರಿಗಳನ್ನು ನಡೆಸುತ್ತಿರುವುದು ಸ್ಯಾಟ್ ಲೈಟ್ ಚಿತ್ರಗಳಲ್ಲಿ ಸೆರೆಯಾಗಿತ್ತು. ಪ್ಯಾಂಗಾಂಗ್ ತ್ಸೋ ಸರೋವರದಿಂದ 200 ಕಿಲೋ ಮೀಟರ್ ದೂರದಲ್ಲೇ ಈ ಕಾಮಗಾರಿ ನಡೆಯುತ್ತಿದ್ದು, ಚೀನಾ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿತ್ತು. ಚೀನಾ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಬೆಂಬಲಿಸುವ ನಿಟ್ಟಿನಲ್ಲಿ ಜೆ-11, ಜೆ-16 ಮತ್ತು ಸುಖೋಯ್-30 ಕೇಂದ್ರಗಳನ್ನು ತೆರೆಯಲು ಕಾಮಗಾರಿ ನಡೆಸಿರುವುದು ಗೊತ್ತಾಗುತ್ತದೆ.

English summary
China Doubled Its Air Bases, Air Defences And Heliports Along India Frontier In Last 3 Years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X