ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸಂಖ್ಯೆ ಏರಿಕೆ; ಕುಟುಂಬ ಯೋಜನೆ ಸಂಬಂಧ ಮೂರು ಕಾನೂನು ರದ್ದುಗೊಳಿಸಿದ ಚೀನಾ

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 27: ಕುಟುಂಬ ಯೋಜನೆ ನೀತಿಗೆ ಸಂಬಂಧಿಸಿದಂತೆ ಚೀನಾ ಮೂರು ಕಾನೂನುಗಳನ್ನು ರದ್ದುಗೊಳಿಸಿದೆ. ಕುಟುಂಬ ಯೋಜನೆ ಕಾನೂನು, ವಲಸಿಗ ಜನಸಂಖ್ಯೆಯ ಸಾಮಾಜಿಕ ನಿರ್ವಹಣೆ ಹಾಗೂ ಕುಟುಂಬ ಯೋಜನೆಯ ತಾಂತ್ರಿಕ ಸೇವೆಗಳಿಗೆ ಸಂಬಂಧಿಸಿದಂತೆ ಮೂರು ಕಾನೂನುಗಳನ್ನು ರದ್ದುಮಾಡಿದೆ.

ದೇಶದ ಜನಸಂಖ್ಯೆ, ಆರ್ಥಿಕ, ಸಾಮಾಜಿಕ ಅಭಿವೃದ್ಧಿ, ಸಮತೋಲಿತ ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಈ ಮೂರು ಕಾನೂನುಗಳನ್ನು ರದ್ದುಗೊಳಿಸಿರುವುದಾಗಿ ಅಧಿಕಾರಿಗಳು ಗ್ಲೋಬಲ್ ಟೈಮ್ಸ್‌ ವರದಿ ಮಾಡಿದೆ.

ಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ

ಕುಟುಂಬ ಯೋಜನೆ ತಾಂತ್ರಿಕ ಸೇವೆಗಳ ಆಡಳಿತ ನಿಯಂತ್ರಣ ಕಾನೂನು (2001ರಲ್ಲಿ ಜಾರಿಗೊಳಿಸಿ, 2004ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು), ಸಾಮಾಜಿಕ ನಿರ್ವಹಣಾ ಶುಲ್ಕ ಸಂಗ್ರಹ ಸಂಬಂಧ ಆಡಳಿತ ಕ್ರಮಗಳು (2002ರಲ್ಲಿ ಜಾರಿಗೊಳಿಸಲಾಗಿದೆ) ಹಾಗೂ ಕುಟುಂಬ ಯೋಜನೆ ತಾಂತ್ರಿಕ ಸೇವೆಗಳ ಆಡಳಿತದ ನಿಯಂತ್ರಣ (2009ರಲ್ಲಿ ಜಾರಿಗೊಳಿಸಲಾಗಿದೆ) ಈ ಮೂರು ಕಾನೂನುಗಳನ್ನು ರದ್ದುಗೊಳಿಸಲಾಗಿದೆ.

China Discards 3 Laws On Family Planning Over Population Growth

ಈ ಎಲ್ಲಾ ನಿಯಮಾವಳಿಗಳನ್ನು ಚೀನಾ ಸರ್ಕಾರ 'ಒಂದು ಮಗು' ನೀತಿ ಅವಧಿಯಲ್ಲಿ ಜಾರಿಗೊಳಿಸಿತ್ತು. ಚೀನಾದ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ಸ್ಥಾಯಿ ಸಮಿತಿಯು ಜನಸಂಖ್ಯೆ ಹಾಗೂ ಕುಟುಂಬ ಯೋಜನೆ ಕಾನೂನಿಗೆ ತಿದ್ದುಪಡಿ ಮಾಡಿ, ದಂಪತಿಗೆ ಒಂದು ಮಗು ಬದಲು ಮೂರು ಮಕ್ಕಳನ್ನು ಹೊಂದುವ ಅವಕಾಶ ನೀಡಿತ್ತು. ಈ ಹೊಸ ನೀತಿಗೆ ಬೆಂಬಲವಾಗಿ ಈ ಕಾನೂನುಗಳನ್ನು ಚೀನಾ ರದ್ದುಗೊಳಿಸಿದೆ ಎಂದು ಗ್ಲೋಬಲ್ ಟೈಮ್ಸ್‌ ತಿಳಿಸಿದೆ.

ಈ ನಿಯಮಾವಳಿಗಳ ರದ್ದುಗೊಳಿಸುವಿಕೆ ಕುಟುಂಬ ಯೋಜನಾ ಕಾನೂನಿನ ಆಗಸ್ಟ್‌ ಪರಿಷ್ಕರಣೆಗೆ ಪೂರಕ ಬದಲಾವಣೆ ಎಂದು ತಜ್ಞರು ತಿಳಿಸಿದ್ದಾರೆ. ಹಳೆಯ ನಿಯಮಾವಳಿಗಳು ಹೊಸ ಕಾನೂನಿನ ನಿಬಂಧನೆಗಳಿಗೆ ಪೂರಕವಾಗಿರಲಿಲ್ಲ. ಆದ್ದರಿಂದ ಅವುಗಳನ್ನು ಮಾರ್ಪಡಿಸಲು ಇಲ್ಲವೇ ರದ್ದುಗೊಳಿಸಲು ಚಿಂತನೆ ನಡೆಸಲಾಯಿತು ಎಂದು ತಜ್ಞರು ಹೇಳಿದ್ದಾರೆ.

ಚೀನಾದಲ್ಲಿ 3 ಮಕ್ಕಳ ನೀತಿಗೆ ಅಧಿಕೃತ ಅನುಮೋದನೆಚೀನಾದಲ್ಲಿ 3 ಮಕ್ಕಳ ನೀತಿಗೆ ಅಧಿಕೃತ ಅನುಮೋದನೆ

ದಶಕಗಳಿಂದಲೂ, ಜನಸಂಖ್ಯೆ ನಿಯಂತ್ರಣದ ಸಲುವಾಗಿ ಪರಿಚಯಿಸಲಾದ ಚೀನಾದ ಕುಟುಂಬ ಯೋಜನಾ ನಿರ್ಬಂಧಗಳು ನೂರಾರು ಮಿಲಿಯನ್ ಚೀನಾ ಮಹಿಳೆಯರು ಗರ್ಭಪಾತಕ್ಕೆ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮಾಡಿತ್ತು. 40 ವರ್ಷಗಳಿಂದ ಚೀನಾದಲ್ಲಿ ಒಂದು ಮಗು ನೀತಿ ಚಲಾವಣೆಯಲ್ಲಿತ್ತು. ಈ ನೀತಿ ಜಾರಿ ನಂತರ ವೇಗವಾಗಿ ಜನಸಂಖ್ಯೆ ಕುಸಿದಿತ್ತು. ಇದರಿಂದ ಬಡತನದ ನಿವಾರಣೆಯೂ ಸಾಧ್ಯವಾಗಿತ್ತು.

China Discards 3 Laws On Family Planning Over Population Growth

ಇದೇ ಆಗಸ್ಟ್‌ ತಿಂಗಳಿನಲ್ಲಿ ಚೀನಾದಲ್ಲಿ 3 ಮಕ್ಕಳ ನೀತಿಗೆ ಅಧಿಕೃತವಾಗಿ ಅನುಮೋದನೆ ದೊರೆತಿದೆ. ಚೀನಾದಲ್ಲಿ ದಂಪತಿ ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡುವ ಪರಿಷ್ಕೃತ ಜನಸಂಖ್ಯಾ ಮತ್ತು ಕುಟುಂಬ ಯೋಜನಾ ಕಾನೂನಿಗೆ ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾಯಿ ಸಮಿತಿ ಅನುಮೋದನೆ ನೀಡಿತ್ತು.

ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಕ್ರಮಗಳೊಂದಿಗೆ ತಿದ್ದುಪಡಿ ಕಾನೂನನ್ನು ಅಂಗೀಕರಿಸಲಾಗಿತ್ತು. ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ಕ್ಷೀಣತೆ ತಡೆಗಟ್ಟುವ ಗುರಿಯೊಂದಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಪ್ರಸ್ತಾಪಿತ ಮೂರು ಮಕ್ಕಳ ನೀತಿಯನ್ನು ಚೀನಾದ ರಾಷ್ಟ್ರೀಯ ಶಾಸಕಾಂಗ ಅಧಿಕೃತವಾಗಿ ಅನುಮೋದನೆ ನೀಡಿತ್ತು.

ಜನಸಂಖ್ಯೆ ಅಧಿಕವಾಗಿ, 1980ರ ದಶಕದಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿದ್ದ ಚೀನಾದಲ್ಲಿ ಜನಸಂಖ್ಯೆ ಕೊರತೆ ಭೀತಿ ಎದುರಾಗಿತ್ತು. ಹೀಗಾಗಿ 5 ವರ್ಷಗಳ ಹಿಂದೆ ಚೀನಾದಲ್ಲಿ ದಂಪತಿಗೆ 2 ಮಗು ಹೊಂದಲು ಅವಕಾಶ ಕಲ್ಪಿಸಲಾಗಿತ್ತು. ಇದೇ ಆಗಸ್ಟ್‌ ತಿಂಗಳಿನಲ್ಲಿ ಆ ಮಿತಿಯನ್ನು ಮೂರಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. 2016ರಲ್ಲಿ ಎರಡು ಮಕ್ಕಳನ್ನು ಹೊಂದಲು ಚೀನಾ ಅವಕಾಶ ನೀಡಿತ್ತು.

15-59 ವಯಸ್ಸಿನ ವ್ಯಕ್ತಿಗಳ ಸಂಖ್ಯೆ 10 ವರ್ಷದಲ್ಲಿ ಶೇ.70ರಿಂದ 63ಕ್ಕೆ ಇಳಿಕೆಯಾಗಿದ್ದು, 65 ವರ್ಷ ಮೇಲ್ಪಟ್ಟವರ ಜನಸಂಖ್ಯೆ 10 ವರ್ಷದಲ್ಲಿ ಶೇ.8.9ರಿಂದ ಶೇ.13.5ಕ್ಕೆ ಹೆಚ್ಚಳವಾಗಿದೆ. ಯುವಕರ ಸಂಖ್ಯೆ ಕುಸಿಯುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಚೀನಾದಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸಲಾಗಿತ್ತು.

English summary
Worried about the population growth rate, China discards 3 laws on family planning
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X