ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಗ್ಗುಬಡಿಯಲು ಚೀನಾದಲ್ಲೇ ಸಿದ್ಧವಾದ ಹೊಸ 'ಅಸ್ತ್ರ' ಇದು!

|
Google Oneindia Kannada News

ಬೀಜಿಂಗ್, ಮಾರ್ಚ್ 30: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ವಿಶ್ವದಾದ್ಯಂತ 34 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಚೀನಾದ ವಿಜ್ಞಾನಿಗಳ ತಂಡವು ಕೋವಿಡ್-19 ಕಾಯಿಲೆಗೆ ಕಾರಣವಾಗುವ ಕೊರೊನಾ ವೈರಸ್ ಅನ್ನು ಬಗ್ಗುಬಡಿಯಲು ಒಂದು ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದಾರೆ.

ಔಷಧಿಯೂ ಅಲ್ಲದ ಲಸಿಕೆಯೂ ಅಲ್ಲದ 'ಹೊಸ ಅಸ್ತ್ರ'ವೊಂದನ್ನು ಚೀನಾ ಸಿದ್ಧಪಡಿಸಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಚೀನಾ ವಿಜ್ಞಾನಿಗಳು ಕೋವಿಡ್-19 ಸೋಂಕಿನೊಂದಿಗೆ ಸೆಣಸಲು ನ್ಯಾನೋ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

ಈ ಸಂಬಂಧ ನ್ಯಾನೋ ವಸ್ತುವೊಂದನ್ನು ಸಿದ್ಧಪಡಿಸಿರುವ ಚೀನಾ ವಿಜ್ಞಾನಿಗಳು ಸೋಂಕುಕಾರಕ ವೈರಾಣುಗಳನ್ನು ನಿಷ್ಕ್ರಿಯಗೊಳಿಸಿ, ಹೀರಿಕೊಳ್ಳುವ ನ್ಯಾನೋ ಸಾಧನವನ್ನು ಕಂಡುಹಿಡಿದಿದ್ದಾರೆ.

ಟ್ವೀಟ್ ಮಾಡಿರುವ ಗ್ಲೋಬಲ್ ಟೈಮ್ಸ್

''ಕೊರೊನಾ ವೈರಸ್ ಅನ್ನು ಎದುರಿಸಲು ಚೀನಾದ ವಿಜ್ಞಾನಿಗಳು ಹೊಸ ಅಸ್ತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ವೈರಾಣುವನ್ನು ನಿಷ್ಕ್ರಿಯಗೊಳಿಸಿ, ಹೀರಿಕೊಳ್ಳುವ ನ್ಯಾನೋ ಸಾಧನವನ್ನು ಕಂಡುಹಿಡಿದಿದ್ದು, ಅದು 96.5% ರಿಂದ 99.9% ದಕ್ಷತೆ ಹೊಂದಿದೆ'' ಎಂದು ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿದೆ.

ಉತ್ಪಾದನಾ ವಲಯದಲ್ಲಿ..

ಉತ್ಪಾದನಾ ವಲಯದಲ್ಲಿ..

ಬಣ್ಣಗಳು, ಫಿಲ್ಟರ್ ಗಳು, ಲೂಬ್ರಿಕೆಂಟ್ ಸೇರಿದಂತೆ ವಿವಿಧ ಉತ್ಪಾದನಾ ಪ್ರಕ್ರಿಯೆಗಳಲ್ಲಿ ನ್ಯಾನೋ ಸಾಧನಗಳನ್ನು ಬಳಸಲಾಗುತ್ತದೆ. ಆರೋಗ್ಯ ವಲಯದಲ್ಲಿ ನ್ಯಾನೋಝೈಮ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ನ್ಯಾನೋ ತಂತ್ರಜ್ಞಾನ

ನ್ಯಾನೋ ತಂತ್ರಜ್ಞಾನ

"ಕ್ಯಾನ್ಸರ್ ಕೋಶಗಳಂತಹ ದೇಹದ ನಿರ್ದಿಷ್ಟ ಅಂಗಗಳನ್ನು ಅಥವಾ ಕೋಶಗಳನ್ನು ಗುರಿಯಾಗಿಸಬಲ್ಲ ಪರಿಣಾಮಕಾರಿ ಚಿಕಿತ್ಸೆಗೆ ನ್ಯಾನೋ ತಂತ್ರಜ್ಞಾನ ಹೆಚ್ಚು ಉಪಕಾರಿ" ಎಂದು ಎನ್.ಐ.ಹೆಚ್ ತಿಳಿಸಿದೆ.

ಯಾವುದೇ ಔ‍ಷಧಿ ಇಲ್ಲ

ಯಾವುದೇ ಔ‍ಷಧಿ ಇಲ್ಲ

ನ್ಯಾನೋ ತಂತ್ರಜ್ಞಾನದಿಂದ ಕೊರೊನಾ ವೈರಸ್ ನ ಹೇಗೆ ತಡೆಗಟ್ಟಬಹುದು ಎಂಬುದರ ವಿವರ ಲಭ್ಯವಾಗಿಲ್ಲ. ಸದ್ಯಕ್ಕೆ ಕೋವಿಡ್-19 ಗೆ ಯಾವುದೇ ಔ‍ಷಧಿ ಅಥವಾ ಲಸಿಕೆ ಕಂಡುಹಿಡಿಯಲಾಗಿಲ್ಲ.

ಕಡೆಗೂ ಕೊರೊನಾಗೆ ಗುದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಮದ್ದು!ಕಡೆಗೂ ಕೊರೊನಾಗೆ ಗುದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಮದ್ದು!

English summary
China develops nanomaterial to combat covid 19 tweets Global Times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X