ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ ಎಚ್ಚರ: ಚೀನಾದಲ್ಲಿ ಮತ್ತೆ ಸ್ಫೋಟಗೊಂಡಿದೆ ಕೊರೊನಾವೈರಸ್ 3ನೇ ಅಲೆ!

|
Google Oneindia Kannada News

ಬೀಜಿಂಗ್, ಅಕ್ಟೋಬರ್ 25: ಇಡೀ ಜಗತ್ತಿಗೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಪರಿಚಯಿಸಿದ ಚೀನಾದಲ್ಲಿ ಮತ್ತೊಮ್ಮೆ ಕೊವಿಡ್-19 ಅಪಾಯ ಹೆಚ್ಚಾಗುವ ಭೀತಿಯಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂಬರುವ ದಿನಗಳ ಬಗ್ಗೆ ಜಾಗೃತಿ ವಹಿಸುವಂತೆ ಸೂಚನೆ ನೀಡಿದ್ದಾರೆ.

ಚೀನಾದಲ್ಲಿ ಕೊವಿಡ್-19 ಸೋಂಕಿನ ಮೂರನೇ ಅಲೆಯ ಸ್ಫೋಟಕ್ಕೆ ಸಾಗರೋತ್ತರದಿಂದ ಹರಡಿರುವ ಡೆಲ್ಟಾ ರೂಪಾಂತರ ವೈರಸ್ ಕಾರಣ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಅಧಿಕಾರಿ ವು ಲಿಯಾಂಗ್ಯೂ ಭಾನುವಾರ ತಿಳಿಸಿದ್ದಾರೆ.

ಕೊರೊನಾ ಅಂತ್ಯ ಯಾವಾಗ, ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?ಕೊರೊನಾ ಅಂತ್ಯ ಯಾವಾಗ, ವಿಶ್ವ ಆರೋಗ್ಯ ಸಂಸ್ಥೆ ಹೇಳುವುದೇನು?

ಕೊರೊನಾವೈರಸ್ ಮೂರನೇ ಅಲೆಯು ಕಳೆದ ಅಕ್ಟೋಬರ್ 17ರಿಂದ ಈವರೆಗೂ 11 ಪ್ರದೇಶಗಳಲ್ಲಿ ಡೆಲ್ಟಾ ರೂಪಾಂತರ ವೈರಸ್ ಹರಡಿಕೊಂಡಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಹೇಳಿದರು. ಈ ಸೋಂಕಿತರ ಪೈಕಿ ಹಲವರು ಪ್ರಯಾಣದ ಹಿನ್ನೆಲೆಯನ್ನು ಹೊಂದಿರುವುದು ಗೊತ್ತಾಗಿದೆ. ಹೀಗಾಗಿ ಸಾಂಕ್ರಾಮಿಕ ಪಿಡುಗಿನ ಪ್ರಮಾಣ ಹೆಚ್ಚಿದ ಪ್ರದೇಶಗಳಲ್ಲಿ ತುರ್ತು ಕ್ರಮಗಳನ್ನು ಜಾರಿಗೊಳಿಸುವಂತೆ ಫೆಂಗ್ ತಿಳಿಸಿದ್ದಾರೆ.

ಚೀನಾದ ಕೆಲವೆಡೆ ಪ್ರಯಾಣ ನಿರ್ಬಂಧ

ಚೀನಾದ ಕೆಲವೆಡೆ ಪ್ರಯಾಣ ನಿರ್ಬಂಧ

ಚೀನಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ಹಿನ್ನೆಲೆ ಗನ್ಸು ಪ್ರಾಂತ್ಯದ ರಾಜಧಾನಿ ಲ್ಯಾನ್‌ಝೌ ಸೇರಿದಂತೆ ಕೆಲವು ನಗರಗಳು ಮತ್ತು ಮಂಗೋಲಿಯಾದಲ್ಲಿ ಬಸ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ಸಾರಿಗೆ ಸಚಿವಾಲಯದ ಅಧಿಕಾರಿ ಝೌ ಮಿನ್ ಹೇಳಿದ್ದಾರೆ.

ಇನ್ನರ್ ಮಂಗೋಲಿಯಾದ ಪಶ್ಚಿಮ ಭಾಗದಲ್ಲಿರುವ ಎಜಿನಾದಲ್ಲಿ ಕೊರೊನಾವೈರಸ್ ಹರಡುವಿಕೆ ಅಪಾಯದಿಂದಾಗಿ ಸೋಮವಾರದಿಂದ ಎಲ್ಲ ನಿವಾಸಿಗಳು ಹಾಗೂ ಪ್ರಯಾಣಿಕರು ಮನೆಗಳಿಂದ ಹೊರಗೆ ಬಾರದಂತೆ ಹಾಗೂ ಪ್ರಯಾಣಿಸದಂತೆ ಸ್ಥಳೀಯ ಸರ್ಕಾರದ ಹೇಳಿಕೆಯಲ್ಲಿ ಕೋರಲಾಗಿದೆ.

ಚೀನಾದಲ್ಲಿ ಶನಿವಾರ 26 ಕೊರೊನಾವೈರಸ್ ಪ್ರಕರಣ ವರದಿ

ಚೀನಾದಲ್ಲಿ ಶನಿವಾರ 26 ಕೊರೊನಾವೈರಸ್ ಪ್ರಕರಣ ವರದಿ

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಶನಿವಾರ ದೇಶದಲ್ಲಿ 26 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಮಂಗೋಲಿಯಾದಲ್ಲಿ 7, ಗನ್ಸುವಿನಲ್ಲಿ 6, ನಿಂಕ್ಸಿಯಾದಲ್ಲಿ 6, ಬೀಜಿಂಗ್‌ನಲ್ಲಿ 4, ಹೆಬೆ, ಹುನಾನ್‌ ಮತ್ತು ಶಾನ್ಕ್ಸಿಯಲ್ಲಿ 1 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಹುನಾನ್ ಮತ್ತು ಯುನ್ನಾನ್ ನಲ್ಲಿ ಲಕ್ಷಣವಿಲ್ಲದ ನಾಲ್ಕು ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾವೈರಸ್ 3ನೇ ಅಲೆಯ ಆಪತ್ತು, ಆರ್ಥಿಕತೆಗೆ ಕುತ್ತು

ಕೊರೊನಾವೈರಸ್ 3ನೇ ಅಲೆಯ ಆಪತ್ತು, ಆರ್ಥಿಕತೆಗೆ ಕುತ್ತು

ಏಷಿಯನ್ ರಾಷ್ಟ್ರಗಳಲ್ಲಿ ಆರ್ಥಿಕತೆಗೆ ತೆರೆದುಕೊಳ್ಳುತ್ತಿರುವ ರಾಷ್ಟ್ರಗಳ ಪಾಲಿಗೆ ಕೊರೊನಾವೈರಸ್ ಮೂರನೇ ಅಲೆಯು ಆಪತ್ತು ತಂದೊಡ್ಡಿದೆ. ಕಳೆದ ಶನಿವಾರವಷ್ಟೇ ಕೊರೊನಾವೈರಸ್ ಎರಡೂ ಡೋಸ್ ಲಸಿಕೆ ಪಡೆದ ಅಥವಾ 270 ದಿನಗಳ ಹಿಂದೆಯೇ ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ ಉದ್ಯೋಗಿಗಳು ಜನವರಿ 1ರಿಂದ ಸಿಂಗಾಪುರಕ್ಕೆ ಆಗಮಿಸಬಹುದು ಎಂದು ಶನಿವಾರವಷ್ಟೇ ಅಲ್ಲಿನ ಸರ್ಕಾರ ಆದೇಶ ಹೊರಡಿಸಿತ್ತು.

ಭಾರತದ ಜೊತೆಗೆ ದಕ್ಷಿಣ ಏಷ್ಯಾದ ಐದು ರಾಷ್ಟ್ರಗಳನ್ನು ಪ್ರಯಾಣ ನಿರ್ಬಂಧಿಸಿದ ರಾಷ್ಟ್ರಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಕೆಲವು ನಿರ್ಬಂಧಗಳನ್ನು ಮುಂದುವರಿಸಿತ್ತು."ಭಾರತ, ಬಾಂಗ್ಲಾದೇಶ ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗೆ 14 ದಿನಗಳ ಪ್ರಯಾಣದ ಇತಿಹಾಸ ಹೊಂದಿರುವ ಎಲ್ಲ ಪ್ರಯಾಣಿಕರು ಬುಧವಾರದಿಂದ ಸಿಂಗಾಪುರ ಪ್ರವೇಶಿಸಲು ಅಥವಾ ಸಿಂಗಾಪುರ ಮೂಲಕ ಪ್ರಯಾಣಿಸುವುಕ್ಕೆ ಅವಕಾಶವಿದೆ," ಎಂದು ಆರೋಗ್ಯ ಸಚಿವಾಲಯ ತಿಳಿಸಿತ್ತು.

ಚೀನಾದಲ್ಲಿ ವ್ಯಾಪಿಸಿಕೊಂಡಿರುವ ಕೊರೊನಾವೈರಸ್

ಚೀನಾದಲ್ಲಿ ವ್ಯಾಪಿಸಿಕೊಂಡಿರುವ ಕೊರೊನಾವೈರಸ್

ಕೊರೊನಾವೈರಸ್ ಸಾಂಕ್ರಾಮಿಕ ರೋಗವು ವೈಜ್ಞಾನಿಕ ಕೇಂದ್ರವಾಗಿರುವ ಹೈಡಿಯನ್ ಸೇರಿದಂತೆ ಮೂರು ಜಿಲ್ಲೆಗಳಿಗೆ ವಿಸ್ತರಿಸಿದೆ ಎಂದು ಬೀಜಿಂಗ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್‌ನ ಉಪಾಧ್ಯಕ್ಷ ಪಾಂಗ್ ಕ್ಸಿಂಗುವೊ ಭಾನುವಾರ ಹೇಳಿದ್ದಾರೆ. ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನ 3ರ ನಡುವೆ ಐದು ಹೊಸ ಕೊವಿಡ್-19 ಪ್ರಕರಣಗಳು ಮತ್ತು ಲಕ್ಷಣರಹಿತ ಪ್ರಕರಣಗಳು ವರದಿಯಾಗಿವೆ ಎಂದು ಪಾಂಗ್ ತಿಳಿಸಿದ್ದಾರೆ.

ವೈರಸ್‌ನಿಂದಾಗಿ ಬೀಜಿಂಗ್ ಮೂಲತಃ ಅಕ್ಟೋಬರ್ 31 ರಂದು ನಿಗದಿಯಾಗಿದ್ದ ಮ್ಯಾರಥಾನ್ ಅನ್ನು ರದ್ದುಗೊಳಿಸಲಾಗಿದೆ ಎಂದು ಬೀಜಿಂಗ್ ಡೈಲಿ ವರದಿ ಮಾಡಿದೆ. ಅಲ್ಲದೇ ಕೊವಿಡ್-19 ಸೋಂಕು ಪತ್ತೆಯಾದ ನಗರಗಳಲ್ಲಿನ ಜನರು ಪ್ರಸ್ತುತ ರಾಜಧಾನಿಗೆ ಭೇಟಿ ನೀಡುವುದನ್ನು ಅಥವಾ ಹಿಂದಿರುಗುವುದನ್ನು ನಿಷೇಧಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

Recommended Video

ಪೊಲೀಸರು ನೆಡದಿದ್ದೆ ದಾರಿನಾ? | Oneindia Kannada

English summary
China Covid Outbreak: The current outbreak in China is caused by the delta variant from overseas, official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X