ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಲಸಮವಾದ ಮಸೀದಿ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿದ ಚೀನಾ

|
Google Oneindia Kannada News

ಬೀಜಿಂಗ್, ಆಗಸ್ಟ್ 19: ನೆಲಸಮವಾಗಿದ್ದ ಮಸೀದಿ ಸ್ಥಳದಲ್ಲಿ ಶೌಚಾಲಯವನ್ನು ನಿರ್ಮಿಸಿ ಚೀನಾ ಸರ್ಕಾರ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಿದೆ.

ವಾಯುವ್ಯ ಚೀನಾದ ಕ್ಸಿನ್‌ಜಿಯಾಂಗ್ ಉಯಿಘರ್ ಪ್ರಾಂತ್ಯದ ಅತುಶ್ ಎಂಬ ನಗರದಲ್ಲಿ ನೆಲಸಮವಾದ ಮಸೀದಿಯ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಚೀನಾದಲ್ಲಿ ಮುಸ್ಲಿಂಮರ ಮೇಲೆ, ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದ್ದರೂ ಪಾಕಿಸ್ತಾನ ಏನೂ ಹೇಳದೆ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದೆ.

ಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿಮಸೀದಿ ಮೇಲೆ ದಾಳಿ: ಪಾತಕಿಗೆ ಇತಿಹಾಸದ ಹೋರಾಟಗಳೇ ಸ್ಫೂರ್ತಿ

ಈ ಮೂಲಕ ಮುಮಸ್ಲಿಮರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಚೀನಾದ ಕಮ್ಯುನಿಸ್ಟ್‌ ಸರ್ಕಾರ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಪಾಕಿಸ್ತಾನ ಮಾತ್ರ ತನಗೇನೂ ಗೊತ್ತಿಲ್ಲ ಎಂಬಂತೆ ಸುಮ್ಮನಿದೆ.

China Constructs Public Toilet After Demolishing Mosque Sit In Xinjiang

ಇದೀಗ ಕೆಲವೇ ದಿನಗಳಲ್ಲಿ ಚೀನಾ ತನ್ನ ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಪಾಕಿಸ್ತಾನದಲ್ಲಿ ನಡೆಸಲು ಒಪ್ಪಂದ ಮಾಡಿಕೊಂಡಿದೆ.

2019ರಲ್ಲಿ ಚೀನಾ ಆಝ್ನಾ ಮಸೀದಿಯನ್ನು ಕೆಡವಿ ಇದೀಗ ಆ ಪ್ರದೇಶದಲ್ಲಿ ಮದ್ಯವನ್ನು ಮಾರಾಟ ಮಾಡುತ್ತಿದೆ. ಚೀನಾದಲ್ಲಿ ಸುಮಾರು 11 ಮಿಲಿಯನ್ ಉಯಿಘರ್‌ಗಳು ಸೇರಿ 22 ದಶಲಕ್ಷಕ್ಕೂ ಹೆಚ್ಚು ಮುಸ್ಲಿಮರು ನೆಲೆಸಿದ್ದಾರೆ.

ಚೀನಾದ 1966-76ರ ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಕ್ಸಿನ್‌ಜಿಯಾಂಗ್‌ನಲ್ಲಿನ ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳು ಹಾನಿಗೊಳಗಾಗಿದ್ದವು. ಇನ್ನು, 2016ರಲ್ಲಿ ಆರಂಭವಾದ ಮಸೀದಿ ತಿದ್ದುಪಡಿ ಅಭಿಯಾನದ ಭಾಗವಾಗಿ ಮುಸ್ಲಿಂ ಪ್ರಾರ್ಥನಾ ಸ್ಥಳಗಳನ್ನು ಸಾಮೂಹಿಕವಾಗಿ ನಾಶಮಾಡುವ ನಿರ್ದೇಶನ ಹೊರಡಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.

ಮಸೀದಿಯ ಸ್ಥಳದಲ್ಲಿ ಮನರಂಜನಾ ಕೇಂದ್ರ ತೆರೆಯುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಶೌಚಾಲಯದ ಕಾಮಗಾರಿ ಪೂರ್ಣಗೊಂಡಿದ್ದರೂ, ಸಾರ್ವಜನಿಕರ ಬಳಕೆಗೆ ಮಾತ್ರ ಅವಕಾಶ ನೀಡಿಲ್ಲ.

ಪಾಕಿಸ್ತಾನದ ಮೌನವನ್ನು ಖಂಡಿಸಿರುವ ಅಧಿಕಾರಿಯೊಬ್ಬರು, ಪಾಕಿಸ್ತಾನ ತನ್ನ ವಿದೇಶಾಂಗ ನೀತಿಯಲ್ಲಿ ವಿರೋಧಾಭಾಸವನ್ನು ಹೊಂದಿದೆ. ತನ್ನನ್ನು ಜಾಗತಿಕ ಇಸ್ಲಾಂ ಧರ್ಮದ ರಕ್ಷಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ, ಚೀನಾದಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಕುರಿತು ಏನೂ ಮಾತನಾಡುತ್ತಿಲ್ಲ.

English summary
A public toilet has been erected on the site of a demolished mosque in Atush (in Chinese, Atushi) city, in northwest China’s Xinjiang Uyghur Autonomous Region (XUAR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X