ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣಾಚಲ ಪ್ರದೇಶಕ್ಕೆ ಮಾನ್ಯತೆಯೇ ಇಲ್ಲ: ಅದು ಟಿಬೆಟ್‌ನಲ್ಲಿನ ನಮ್ಮ ಭಾಗ ಎಂದ ಚೀನಾ

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 5: ಗಡಿ ವಿವಾದ ತೀವ್ರವಾಗಿರುವ ನಡುವೆಯೇ ಚೀನಾವು ಭಾರತವನ್ನು ಮತ್ತೆ ಕೆರಳಿಸಿದೆ. ತಾನು ಎಂದಿಗೂ ಅರುಣಾಚಲ ಪ್ರದೇಶವನ್ನು ಪರಿಗಣಿಸಿಯೇ ಇಲ್ಲ. ಅದು ಚೀನಾದ ದಕ್ಷಿಣ ಟಿಬೆಟ್ ಪ್ರದೇಶದ ಭಾಗ ಎಂದು ಹೇಳುವ ಮೂಲಕ ಉಭಯ ದೇಶಗಳ ನಡುವಿನ ಬೆಂಕಿಗೆ ತುಪ್ಪ ಸುರಿದಿದೆ.

Recommended Video

ಭಾರತೀಯರನ್ನು ಅಪಹರಿಸಿದ China ಸೇನೆ , Arunachal pradeshದಲ್ಲಿ ಘಟನೆ | Oneindia Kannada

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಹೇಳಿಕೆಯನ್ನು ಉಲ್ಲೇಖಿಸಿರುವ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್, 'ಅರುಣಾಚಲ ಪ್ರದೇಶ ಎಂದು ಕರೆಯಲಾಗುವ ಜಾಗಕ್ಕೆ ಚೀನಾ ಎಂದಿಗೂ ಮಾನ್ಯತೆಯನ್ನೇ ನೀಡಿಲ್ಲ. ಅದು ಚೀನಾದ ದಕ್ಷಿಣ ಟಿಬೆಟ್‌ ಪ್ರದೇಶ' ಎಂದು ಪ್ರಕಟಿಸಿದೆ.

ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..! ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!

ಅರುಣಾಚಲ ಪ್ರದೇಶದಿಂದ ಚೀನಾ ಸೇನೆಯು ಐವರನ್ನು ಅಪಹರಣ ಮಾಡಿದೆ ಎಂಬ ಆರೋಪದ ಕುರಿತು ವಿವರ ನೀಡಲು ಅವರು ನಿರಾಕರಿಸಿದ್ದಾರೆ. 'ಪ್ರದೇಶದಿಂದ ಐವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಪಿಎಲ್‌ಗೆ ಭಾರತೀಯ ಸೇನೆ ಕಳುಹಿಸಿರುವ ಸಂದೇಶದ ಪ್ರಶ್ನೆಯ ಕುರಿತು ನಮಗೆ ಬಿಡುಗಡೆ ಮಾಡಲು ಯಾವುದೇ ವಿವರವೇ ಇಲ್ಲ' ಎಂದಿದ್ದಾರೆ.

China Claims It Has Never Recognised Arunacha Pradesh

'ಅರುಣಾಚಲ ಪ್ರದೇಶದಿಂದ ಐವರು ಯುವಕರನ್ನು ಅಪಹರಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಗಡಿ ಭಾಗದಲ್ಲಿರುವ ಪಿಎಲ್‌ಎದ ವಿಭಾಗಕ್ಕೆ ಭಾರತೀಯ ಸೇನೆಯು ಈಗಾಗಲೇ ಹಾಟ್‌ಲೈನ್ ಸಂದೇಶ ರವಾನಿಸಿದೆ' ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದರು.

English summary
China said, it has never recognized so called Arunachal Pradesh and it is China's South Tibet region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X