ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ 49 ಹೊಸ ಕೇಸ್, ಬೀಜಿಂಗ್‌ನ ಹತ್ತು ಪ್ರದೇಶ ಮತ್ತೆ ಲಾಕ್‌ಡೌನ್‌

|
Google Oneindia Kannada News

ಬೀಜಿಂಗ್, ಜೂನ್ 15: ಕೊರೊನಾ ವೈರಸ್ ಸೃಷ್ಟಿಸಿದ ಚೀನಾದಲ್ಲಿ ಎಲ್ಲವೂ ಮುಗಿದು ಹೋಯಿತು. ಮೊದಲಿನ ಸ್ಥಿತಿಯತ್ತ ಚೀನಾ ಮರುಳುತ್ತಿದೆ ಎನ್ನುವಾಗಲೇ ಸೋಮವಾರ ಹೊಸದಾಗಿ 49 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಆತಂಕಕ್ಕೆ ಒಳಗಾದ ಚೀನಾ ಈಗ ಮತ್ತೆ ಲಾಕ್‌ಡೌನ್‌ ಮೊರೆ ಹೋಗಿದೆ.

ಸೋಮವಾರ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ 49 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಬೀಜಿಂಗ್ನ ಹತ್ತು ಪ್ರದೇಶಗಳನ್ನು ಲಾಕ್‌ಡೌನ್ ಮಾಡಲು ಅಧಿಕಾರಿಗಳು ಪ್ರಕಟಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಳ: ಬೀಜಿಂಗ್‌ನಲ್ಲಿ ಮತ್ತೆ ಲಾಕ್‌ಡೌನ್ಕೊರೊನಾ ಸೋಂಕು ಹೆಚ್ಚಳ: ಬೀಜಿಂಗ್‌ನಲ್ಲಿ ಮತ್ತೆ ಲಾಕ್‌ಡೌನ್

ಈ ಕುರಿತು ಬೀಜಿಂಗ್ ಅಧಿಕಾರಿ ಲಿ ಜುಂಜಿ ಪತ್ರಿಕಾಗೋಷ್ಠಿಯ ನಡೆಸಿದ್ದು, 'ವಾಯುವ್ಯ ಹೈಡಿಯನ್ ಜಿಲ್ಲೆಯ ಎರಡನೇ ಸಗಟು ಮಾರುಕಟ್ಟೆಯಲ್ಲಿ ಹೊಸ ಪ್ರಕರಣಗಳು ಕಂಡುಬಂದಿವೆ. ಹಾಗಾಗಿ, ಮಾರುಕಟ್ಟೆ ಮತ್ತು ಹತ್ತಿರದ ಶಾಲೆಗಳನ್ನು ಮುಚ್ಚಲಾಗುವುದು. ಮುಂಜಾಗ್ರತೆ ದೃಷ್ಟಿಯಿಂದ ಅದರ ಸುತ್ತಲಿನ ಹತ್ತು ಪ್ರದೇಶಗಳನ್ನು ಲಾಕ್‌ಡೌನ್ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.

China capital city Beijing reports 49 new coronavirus case at monday

ಬೀಜಿಂಗ್‌ನಲ್ಲಿ ಲಾಕ್‌ಡೌನ್‌ ತೆರವುಗೊಳಿಸಿ ಈ ಮೊದಲಿನಂತೆ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಪರಿಣಾಮ ಮತ್ತೆ ಹೊಸ ಪ್ರಕರಣಗಳು ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

49 ಕೇಸ್‌ಗಳ ಪೈಕಿ 36 ಪ್ರಕರಣಗಳು ನಗರದ ಮಾಂಸ ಮತ್ತು ತರಕಾರಿಗಳನ್ನು ಪೂರೈಸುವ ಸಗಟು ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ. ಉಳಿದ ಹತ್ತು ಪ್ರಕರಣಗಳು ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿದವರು. ಮೂರು ಪ್ರಕರಣ ಬೀಜಿಂಗ್‌ನ ನೆರೆ ಪ್ರಾಂತ್ಯದಿಂದ ಬಂದವರು ಎಂದು ಮಾಹಿತಿ ನೀಡಿದ್ದಾರೆ.

ಜುಲೈ, ಆಗಸ್ಟ್ ಅಲ್ಲ ಭಾರತದಲ್ಲಿ ನವೆಂಬರ್‌ನಲ್ಲಿ ಕೊರೊನಾ ಸೋಂಕು ತಾರಕಕ್ಕೆ!ಜುಲೈ, ಆಗಸ್ಟ್ ಅಲ್ಲ ಭಾರತದಲ್ಲಿ ನವೆಂಬರ್‌ನಲ್ಲಿ ಕೊರೊನಾ ಸೋಂಕು ತಾರಕಕ್ಕೆ!

ಬೀಜಿಂಗ್‌ನಲ್ಲಿ ಹೊಸದಾಗಿ 49 ಪ್ರಕರಣ ದಾಖಲಾದ ಹಿನ್ನೆಲೆ, ಹತ್ತು ಪ್ರದೇಶಗಳಲ್ಲಿ ಸಾಮೂಹಿಕ ಪರೀಕ್ಷೆ ಮಾಡಲು ಮುಂದಾಗಿದೆ. ಈಗಾಗಲೇ 10 ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.

ಚೀನಾದಲ್ಲಿ ಪ್ರಸ್ತುತ 177 ಜನರ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಅದರಲ್ಲಿ 115 ಮಂದಿ ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. ಇನ್ನುಳಿದಂತೆ ಚೀನಾದಲ್ಲಿ ಈವರೆಗೂ 83,181 ಕೊರೊನಾ ವೈರಸ್ ಕೇಸ್ ದಾಖಲಾಗಿದೆ. ಅದರಲ್ಲಿ 4634 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

English summary
China capital city Beijing reports 49 new coronavirus case at monday, and Chinese govt locks 10 more neighborhood with beginning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X