ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ವಾರದಲ್ಲಿ ಬೃಹತ್ ಕ್ವಾರೆಂಟೈನ್ ಕೇಂದ್ರ ನಿರ್ಮಿಸಿದ ಚೀನಾ

|
Google Oneindia Kannada News

ಬೀಜಿಂಗ್, ಜನವರಿ 20: ನಾಲ್ಕು ಸಾವಿರಕ್ಕೂ ಅಧಿಕ ಜನರು ಒಟ್ಟಿಗೆ ನೆಲೆಸಬಹುದಾದ ಬೃಹತ್ ಕ್ವಾರೆಂಟೈನ್ ಶಿಬಿರವನ್ನು ಸ್ಥಾಪಿಸಲು ಚೀನಾ ಮುಂದಾಗಿದೆ. ಚೀನಾದಲ್ಲಿ ಕಡಿಮೆಯಾಗಿದ್ದ ಕೊರೊನಾ ವೈರಸ್ ಪ್ರಕರಣಗಳು ಏಕಾಏಕಿ ಹೆಚ್ಚಳವಾಗುತ್ತಿದ್ದು, ಲಕ್ಷಾಂತರ ಜನರನ್ನು ಮತ್ತೆ ಕಠಿಣ ಲಾಕ್‌ಡೌನ್‌ಗೆ ಒಳಪಡಿಸಲಾಗಿದೆ. ಅದರ ಬೆನ್ನಲ್ಲೇ ಚೀನಾ ಸರ್ಕಾರ ತರಾತುರಿಯಲ್ಲಿ ಕ್ವಾರೆಂಟೈನ್ ಕೇಂದ್ರ ನಿರ್ಮಾಣಕ್ಕೆ ಕೈ ಹಾಕಿದೆ.

ರಾಷ್ಟ್ರದ ರಾಜಧಾನಿ ಬೀಜಿಂಗ್ ಸುತ್ತಮುತ್ತಲಿನ ಹೆಬಿ ಪ್ರಾಂತ್ಯದ ರಾಜಧಾನಿ ಶಿಜಿಯಾಜುವಾಂಗ್‌ನ ಹೊರವಲಯದಲ್ಲಿ ಈ ಕ್ವಾರೆಂಟೈನ್ ಶಿಬಿರವಿದೆ. ಕೊರೊನಾ ವೈರಸ್ ಸೋಂಕು ಹರಡಲು ಆರಂಭಿಸಿದ ಸಂದರ್ಭದಲ್ಲಿ ಹತ್ತೇ ದಿನದಲ್ಲಿ ಬೃಹತ್ ಆಸ್ಪತ್ರೆಯನ್ನೇ ಚೀನಾ ನಿರ್ಮಿಸಿತ್ತು.

ಚೀನಾದ ಐಸ್‌ಕ್ರೀಂನಲ್ಲಿ ಕೊರೊನಾವೈರಸ್ ಪತ್ತೆ: ಸಾವಿರ ಮಂದಿ ಕ್ವಾರಂಟೈನ್ಚೀನಾದ ಐಸ್‌ಕ್ರೀಂನಲ್ಲಿ ಕೊರೊನಾವೈರಸ್ ಪತ್ತೆ: ಸಾವಿರ ಮಂದಿ ಕ್ವಾರಂಟೈನ್

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆಯುಳ್ಳ ಚೀನಾ, ತನ್ನ ಇತರೆ ಭಾಗಗಳಿಗೆ ವೈರಸ್ ಹರಡುವುದನ್ನು ಯಶಸ್ವಿಯಾಗಿ ನಿಯಂತ್ರಿಸಿತ್ತು. ದೇಶ ಹೆಚ್ಚೂ ಕಡಿಮೆ ಸಹಜ ಸ್ಥಿತಿಗೆ ಮರಳಿತ್ತು. ಆದರೆ ಬೀಜಿಂಗ್ ಸುತ್ತಮುತ್ತಲಿನ ಪ್ರದೇಶ, ಹಳ್ಳಿಗಳಲ್ಲಿ ಹಠಾತ್ತಾಗಿ ಪ್ರಕರಣಗಳು ಏರಿಕೆಯಾಗಿರುವುದು ಸರ್ಕಾರಕ್ಕೆ ಆತಂಕ ಮೂಡಿಸಿದೆ. ಚೀನಾದ ಅತ್ಯಂತ ಪ್ರಮುಖ ವಾರ್ಷಿಕ ಹಬ್ಬ ಚಾಂದ್ರಮಾನ ಹೊಸ ವರ್ಷ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ತಮ್ಮ ಕುಟುಂಬದವರನ್ನು ಭೇಟಿ ಮಾಡಲು ತೆರಳುತ್ತಾರೆ. ಹೀಗಾಗಿ ಹಬ್ಬದ ವೇಳೆ ವೈರಸ್ ವ್ಯಾಪಕವಾಗಿ ಹರಡುವ ಅಪಾಯವಿದ್ದು, ಅದಕ್ಕೂ ಮೊದಲೇ ಲಾಕ್‌ಡೌನ್ ಜಾರಿಗೆ ತರಲಾಗಿದೆ.

China Builds Massive Quarantine Camp To House More Than 4000 People Amid Covid Outbreak

ನಾಲ್ಕು ಸಾವಿರಕ್ಕೂ ಅಧಿಕ ಕಟ್ಟಡ ನಿರ್ಮಾಣ ಕೆಲಸಗಾರರು ಆರು ದಿನಗಳಲ್ಲಿ ಹಗಲು-ರಾತ್ರಿ ಕೆಲಸ ಮಾಡಿದ್ದು, ಸುಮಾರು 4,160 ಮಂದಿ ಇದರಲ್ಲಿ ಇರಬಹುದಾಗಿದೆ. ಕೋವಿಡ್-19 ಸೋಂಕು ದೃಢಪಟ್ಟ ರೋಗಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಈ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗುತ್ತದೆ. ಸಂಪರ್ಕಿತರನ್ನು ಹುಡುಕಲು ಮತ್ತು ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಚೀನಾದಲ್ಲಿ 8 ತಿಂಗಳ ಬಳಿಕ ಕೊರೊನಾ ಸೋಂಕಿಗೆ ಮೊದಲ ಬಲಿಚೀನಾದಲ್ಲಿ 8 ತಿಂಗಳ ಬಳಿಕ ಕೊರೊನಾ ಸೋಂಕಿಗೆ ಮೊದಲ ಬಲಿ

ಜನವರಿ 13ರಂದು ಕೇಂದ್ರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಅದರ ಮೊದಲ ಹಂತ ಈಗಾಗಲೇ ಬಳಕೆಗೆ ಲಭ್ಯವಾಗಿದೆ. ಎರಡನೆಯ ಹಂತದ ಕಾಮಗಾರಿ ಕೂಡ ನಡೆಯುತ್ತಿದೆ. ಈ ಕೇಂದ್ರವು ವಿಶೇಷ ಸ್ನಾನದ ಕೊಠಡಿ, ಪೀಠೋಪಕರಣಗಳು, ಹಾಸಿಗೆ, ವೈಫೈ, ಟೆಲಿವಿಷನ್ ಮುಂತಾದವು ಇರಲಿದೆ.

English summary
China has build a massive quarantine camp in Shijiazhuang that can house around 4,160 people after an outbreak of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X