ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವ ಲಡಾಖ್​ ಗಡಿ ಸಮೀಪ ಚೀನಾದಿಂದ ಹೆದ್ದಾರಿ ನಿರ್ಮಾಣ: ಕ್ಷಿಪಣಿ, ರಾಕೆಟ್​ ರೆಜಿಮೆಂಟ್​ ನಿಯೋಜನೆ

|
Google Oneindia Kannada News

ನವದೆಹಲಿ, ನವೆಂಬರ್‌ 28: ಭಾರತ ಹಾಗೂ ಚೀನಾದ ನಡುವಿನ ಮಿಲಿಟರಿ ಸಂಘರ್ಷವು ಹೆಚ್ಚುತ್ತಲಿದೆ. ಆಗಾಗ ಘರ್ಷಣೆಗಳು ನಡೆಯುತ್ತಿದೆ. ಈ ನಡುವೆ ಪೂರ್ವ ಲಡಾಖ್‌ ಸಮೀಪದಲ್ಲಿಯೇ ಚೀನಾವು ಹೆದ್ದಾರಿ ಹಾಗೂ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭ ಮಾಡಿದೆ. ಇಷ್ಟು ಮಾತ್ರವಲ್ಲದೇ ಈ ಪ್ರದೇಶದಲ್ಲಿ ಕ್ಷಿಪಣಿ ಹಾಗೂ ರಾಕೆಟ್‌ ರೆಜಿಮೆಂಟ್‌ಗಳನ್ನು ನಿಯೋಜನೆ ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಚೀನಾವು ಪೂರ್ವ ಲಡಾಕ್‌ ವಲಯದ ಮುಂಭಾದಲ್ಲಿರುವ ಅಕ್ಸಾಯ್‌ ಚೀನಾದ ಪ್ರದೇಶದಲ್ಲಿ ಹೊಸದಾಗಿ ಹೆದ್ದಾರಿ ಹಾಗೂ ರಸ್ತೆಯನ್ನು ನಿರ್ಮಾಣ ಮಾಡುತ್ತಿದೆ. ಇನ್ನು ಈ ರಸ್ತೆ ಹಾಗೂ ಹೆದ್ದಾರಿಯು ಭಾರತ ಹಾಗೂ ಚೀನಾದ ನಡುವಿ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಸುಲಭವಾಗಿ ತಲುಪಲು ಸಾಧ್ಯವಾಗುವಂತೆ ನಿರ್ಮಾಣ ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಅರುಣಾಚಲ ಗಡಿಯಲ್ಲಿ 100 ಮನೆ ಕಟ್ಟಿದ ಚೀನಾ; ಏನು ಹೇಳುತ್ತೆ ಭಾರತ?ಅರುಣಾಚಲ ಗಡಿಯಲ್ಲಿ 100 ಮನೆ ಕಟ್ಟಿದ ಚೀನಾ; ಏನು ಹೇಳುತ್ತೆ ಭಾರತ?

ಪೂರ್ವ ಲಡಾಖ್‌ ಸಮೀಪದಲ್ಲಿಯೇ ಚೀನಾವು ಹೆದ್ದಾರಿ ಹಾಗೂ ರಸ್ತೆ ನಿರ್ಮಾಣವನ್ನು ಪ್ರಾರಂಭ ಮಾಡಿರುವುದು ಮಾತ್ರವಲ್ಲದೇ ಕ್ಷಿಪಣಿಗಳನ್ನು ಕೂಡಾ ಅಲ್ಲಿ ನಿಯೋಜಿಸಿದೆ. ಇನ್ನು ಈ ಪ್ರದೇಶದಲ್ಲೇ ಆಶ್ರಯ ತಾಣ ನಿರ್ಮಾಣ ಮಾಡಲಾಗಿದೆ. ಟಿಬೆಟ್‌ ಸ್ವಾಯತ್ತ ಪ್ರದೇಶದ ಹಿಂಭಾಗದಲ್ಲಿ ಚೀನಾದ ಹಲವಾರು ರಾಕೆಟ್‌ಗಳು ಹಾಗೂ ಕ್ಷಿಪಣಿ ರೆಜಿಮೆಂಟ್‌ಗಳನ್ನು ನಿಯೋಜಿಸಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

China Building New Highways Near Eastern Ladakh, Deploying Missile Regiments

ಟಿಬೆಟಿಯನ್ನರನ್ನು ಸೇನೆಗೆ ಸೇರ್ಪಡೆ ಮಾಡಿದ ಚೀನಾ

ಅಡಗಿ ಕುಳಿತುಕೊಳ್ಳುವ ಅನುಕೂಲವಾಗುವ ಆಶ್ರಯ ತಾಣಗಳನ್ನು ಕೂಡಾ ನಿರ್ಮಾಣ ಮಾಡಲಾಗಿದೆ. ಕಣ್ಗಾವಲು ಮಾಡುವ ನಿಟ್ಟಿನಲ್ಲಿ ಡ್ರೋನ್‌ಗಳ ಸಂಖ್ಯೆಯನ್ನು ಕೂಡಾ ಚೀನಾವು ಹೆಚ್ಚಳ ಮಾಡಿದೆ. ಕಶ್ಗರ್​, ಗರ್​ ಗುನ್ಸಾ ಮತ್ತು ಹೋಟಾನ್​​ಗಳನ್ನು ಮಾತ್ರವಲ್ಲದೇ ಹೆದ್ದಾರಿಗಳನ್ನು ಕೂಡಾ ಚೀನಾವು ವಿಸ್ತರಣೆ ಮಾಡುತ್ತಿದೆ. ಮೂಲ ಸೌಕರ್ಯಗಳ ನವೀಕರಣ ಮಾಡುತ್ತಿದೆ. ಚೀನಾ ಸೇನೆಯ ಗಡಿ ಪೋಸ್ಟ್‌ಗಳಿಗೆ ಅಧಿಕ ಸಂಖ್ಯೆಯಲ್ಲಿ ಟಿಬೆಟಿಯರನ್ನು ನೇಮಕ ಮಾಡುವ ಕಾರ್ಯವನ್ನು ಚೀನಾ ಮಾಡುತ್ತಿದೆ. ಚೀನಾದ ಸೇನೆಯಲ್ಲಿ ಇರುವ ಚೀನಾದ ಜನರಿಗೆ ಈ ಪ್ರದೇಶದಲ್ಲಿ ಜೀವಿಸುವುದು ಕಷ್ಟವಾಗುತ್ತದೆ. ಇಲ್ಲಿ ಚಳಿಯು ಹೆಚ್ಚಾಗಿ ಇರುವ ಕಾರಣದಿಂದಾಗಿ ಇಲ್ಲಿ ಜನರು ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಚೀನಾವು ಉಪಾಯ ಮಾಡಿ ಇಲ್ಲಿ ಟಿಬೆಟ್‌ ಜನರನ್ನೆ ಸೇನೆಗೆ ಸೇರ್ಪಡೆ ಮಾಡಿಕೊಂಡಿದೆ. ಚೀನಾವು ಹಲವಾರು ದೇಶಗಳ ಗಡಿ ಭಾಗವನ್ನು ಆಕ್ರಮಣ ಮಾಡುವ ಕಾರ್ಯವನ್ನು ಮಾಡುತ್ತಿದೆ.

ಗ್ರಾಮಗಳನ್ನು ನಿರ್ಮಾಣ ಮಾಡಿರುವ ಚೀನಾ

ಭಾರತದ ಅರುಣಾಚಲ ಗಡಿ ಭಾಗದಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಭೂತಾನ್‌ ಗಡಿಯಲ್ಲಿಯೂ ಕೂಡಾ ಚೀನಾ ದೇಶವು ಒಟ್ಟು ನಾಲ್ಕು ಗ್ರಾಮಗಳನ್ನು ನಿರ್ಮಾಣ ಮಾಡಿದೆ. ಹಾಗೆಯೇ ಚೀನಾದ ಗಡಿ ಭಾಗದಲ್ಲಿ ತನ್ನದೇ ಆದ ಗ್ರಾಮವನ್ನು ಚೀನಾ ನಿರ್ಮಾಣ ಮಾಡುತ್ತಿರುವುದನ್ನು ಮುಂದುವರಿಸಿದೆ. ಅರುಣಾಚಲ ಪ್ರದೇಶದ ಗಡಿಯಲ್ಲಿ 100 ಮನೆಗಳನ್ನು ನಿರ್ಮಿಸಿರುವ ಚೀನಾ, ಭೂತಾನ್ ಗಡಿ ಪ್ರಾಂತ್ಯದಲ್ಲಿ ನಾಲ್ಕು ಗ್ರಾಮಗಳನ್ನೇ ನಿರ್ಮಿಸಿರುವುದನ್ನು ಉಪಗ್ರಹ ಚಿತ್ರಗಳು ಸಾಕ್ಷೀಕರಿಸಿವೆ. ಉಪಗ್ರಹ ಚಿತ್ರಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಭೂತಾನ್ ಪ್ರದೇಶದಲ್ಲಿ ಚೀನಾ ಸೇನೆಯು ನಾಲ್ಕು ಗ್ರಾಮಗಳನ್ನು ನಿರ್ಮಿಸಿದೆ. ಸರಿಸುಮಾರು 100 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹಲವಾರು ಹೊಸ ಹಳ್ಳಿಗಳು ಹರಡಿಕೊಂಡಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಭಾರತದ ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದು ಬಾಹ್ಯಾಕಾಶದಲ್ಲಿ ಸೆರೆಯಾದ ಚಿತ್ರಗಳು ತೋರಿದ್ದವು. 101ಕ್ಕೂ ಹೆಚ್ಚು ಮನೆಗಳನ್ನು ಈ ಗ್ರಾಮದಲ್ಲಿ ಕಟ್ಟಿಕೊಳ್ಳಲಾಗಿದ್ದು, ನವೆಂಬರ್.01ರ 2020ರಲ್ಲಿ ಇದೇ ಚಿತ್ರಗಳ ಮೇಲೆ ವಿಮರ್ಶೆ ಮಾಡಲಾಗಿತ್ತು. ಅಂದು ಚೀನಾ ಸೇನೆಯು ಭಾರತದ ಗಡಿಗೆ ಸೇರಿದ ಸರಿ ಸುಮಾರು 4.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಚೀನಾ ಸೇನೆಯು ಪ್ರವೇಶಿಸುತ್ತಿದೆ ಎಂದು ಆರೋಪಿಸಲಾಗಿತ್ತು. ನವೆಂಬರ್.01, 2020 ಮತ್ತು 2019ರ ಆಗಸ್ಟ್.26ರ ಭಾವಚಿತ್ರಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಾಣುತ್ತಿವೆ. ಕಳೆದ 2019ರಲ್ಲಿ ಯಾವುದೇ ರೀತಿ ಕಾಮಗಾರಿಯಿಲ್ಲದೇ ಬಣಗುಡುತ್ತಿದ್ದ ಪ್ರದೇಶದ ಚಿತ್ರಣ ಇದೀಗ ಸಂಪೂರ್ಣ ಬದಲಾದಂತಿದೆ. ಅಂದರೆ ಒಂದು ವರ್ಷದಲ್ಲಿಯೇ ಚೀನಾ ಗಡಿಯಲ್ಲಿ ತನ್ನ ಕಾರ್ಯ ಸಾಧನೆ ಮಾಡಿಕೊಂಡಿದೆಯಾ ಎಂಬ ಅನುಮಾನಗಳನ್ನು ಇದೊಂದು ಚಿತ್ರವು ಹುಟ್ಟು ಹಾಕುತ್ತಿದೆ.

English summary
China Building New Highways Near Eastern Ladakh, Deploying Missile Regiments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X