ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನ ನೌಕಾ ಬಲ ದುಪ್ಪಟ್ಟು ಮಾಡಲು ಸಿದ್ಧಗೊಳ್ಳುತ್ತಿದೆ ಅತ್ಯಾಧುನಿಕ ಯುದ್ಧ ನೌಕೆ

|
Google Oneindia Kannada News

ಬೀಜಿಂಗ್ (ಚೀನಾ), ಜನವರಿ 2: ಹಿಂದೂ ಮಹಾಸಾಗರದ ಮೇಲೆ ಆಧಿಪತ್ಯ ಸಾಧಿಸುವ ಚೀನಾ ಪ್ರಯತ್ನದ ಮುಂದುವರಿದ ಭಾಗ ಇಲ್ಲಿದೆ. ತನ್ನ 'ಸರ್ವ ಋತು' ಮಿತ್ರ ದೇಶ ಪಾಕಿಸ್ತಾನಕ್ಕಾಗಿ ಚೀನಾವು ಅತ್ಯಾಧುನಿಕ ಯುದ್ಧ ನೌಕೆಯನ್ನು ಸಿದ್ಧಪಡಿಸುತ್ತಿದೆ. ಇಂಥ ಒಟ್ಟು ನಾಲ್ಕು ಯುದ್ಧ ನೌಕೆ ತಯಾರಿಗೆ ಒಡಂಬಡಿಕೆ ಆಗಿದೆ. ಆ ಪೈಕಿ ಇದು ಮೊದಲನೆಯದು ಎಂದು ಚೀನಾದ ಸರಕಾರಿ ಮಾಧ್ಯಮ ವರದಿ ಮಾಡಿದೆ.

ಈ ಯುದ್ಧ ನೌಕೆಯಲ್ಲಿ ಅತ್ಯಾಧುನಿಕವಾದ ಶೋಧನೆ ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆ ಇರುತ್ತದೆ. ಹಡಗು, ಸಬ್ ಮರೀನ್ ಮತ್ತು ಯಾವುದೇ ವಾಯು ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಬಗ್ಗೆ ಚೀನಾ ಸರಕಾರದ ಮಾಲೀಕತ್ವ ಹೊಂದಿರುವ ರಕ್ಷಣಾ ಗುತ್ತಿಗೆದಾರ ಕಂಪನಿ ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾರ್ಪೊರೇಷನ್ ಹೇಳಿಕೆಯನ್ನೇ ಮಾಧ್ಯಮ ವರದಿಯಲ್ಲಿ ಉದಾಹರಿಸಲಾಗಿದೆ.

ಪಾಕಿಸ್ತಾನೀಯರಿಗೆ ಕಸ ಗುಡಿಸಲೂ ಬರಲ್ವಾ, ಅದಕ್ಕೂ ಚೀನಾದಿಂದ ಬರ್ತಾರೆ! ಪಾಕಿಸ್ತಾನೀಯರಿಗೆ ಕಸ ಗುಡಿಸಲೂ ಬರಲ್ವಾ, ಅದಕ್ಕೂ ಚೀನಾದಿಂದ ಬರ್ತಾರೆ!

ಯುದ್ಧ ನೌಕೆಯು ನಿರ್ಮಾಣ ಹಂತದಲ್ಲಿದೆ. ಚೀನಾದ ನೌಕಾ ಪಡೆಯ ಅತ್ಯಾಧುನಿಕ ಮಾದರಿ ಕ್ಷಿಪಣಿ ವ್ಯವಸ್ಥೆ ಹೊಂದಿರಲಿದೆ. ಅದು ಯಾವ ಬಗೆಯ ನೌಕೆ ಎಂಬುದನ್ನು ನಿರ್ಮಾಣ ಕಂಪನಿ ಖಚಿತಪಡಿಸಿಲ್ಲ. ಆದರೆ ಶಾಂಘೈನಲ್ಲಿರುವ ಹ್ಯುಡಾಂಗ್ ಝೋಂಗುವಾ ಶಿಪ್ ಯಾರ್ಡ್ ನಲ್ಲಿ ನಿರ್ಮಾಣ ಆಗುತ್ತಿರುವುದಾಗಿ ಮಾತ್ರ ಮಾಹಿತಿ ನೀಡಿದೆ.

ಪಾಕ್ ನ ಅತಿ ದೊಡ್ಡ ಶಸ್ತ್ರಾಸ್ತ್ರ ಪೂರೈಸುವ ದೇಶ

ಪಾಕ್ ನ ಅತಿ ದೊಡ್ಡ ಶಸ್ತ್ರಾಸ್ತ್ರ ಪೂರೈಸುವ ದೇಶ

ಪಾಕಿಸ್ತಾನಕ್ಕೆ ಅತಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆಯಾಗುವುದು ಚೀನಾದಿಂದ. ಎರಡೂ ದೇಶಗಳು ಜಂಟಿಯಾಗಿ ಜೆಎಫ್-ಥಂಡರ್ ಸಿಂಗಲ್ ಎಂಜಿನ್ ಮಲ್ಟಿ ರೋಲ್ ಕಂಬ್ಯಾಟ್ ವಿಮಾನವನ್ನು ಸಿದ್ಧಪಡಿಸಿವೆ. ಇನ್ನು ಈಗ ಸಿದ್ಧಗೊಳ್ಳುತ್ತಿರುವ ಯುದ್ಧ ನೌಕೆ ಮಾದರಿಯಲ್ಲೇ ನಾಲ್ಕು ನೌಕೆಯನ್ನು ಪಾಕ್ ಖರೀದಿ ಮಾಡಲಿದೆ ಎಂದು ಆ ದೇಶ ತಿಳಿಸಿತ್ತು. ಒಮ್ಮೆ ಈ ಯುದ್ಧ ನೌಕೆ ಸಿದ್ಧವಾದರೆ ಅದು ಪಾಕಿಸ್ತಾನದ ನೌಕಾ ಸೇನೆಯ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ. ಜತೆಗೆ ಇಷ್ಟೊಂದು ಆಧುನಿಕ ತಂತ್ರಜ್ಞಾನ ಹೊಂದಿರುವ ಬೇರೆ ಯಾವ ಯುದ್ಧ ನೌಕೆ ಕೂಡ ಪಾಕಿಸ್ತಾನದ ಬಳಿ ಇಲ್ಲ. ಇದರಿಂದ ಭವಿಷ್ಯದ ಸವಾಲುಗಳನ್ನು ಎದುರಿಸಲು ಅನುಕೂಲ ಆಗುತ್ತದೆ. ಹಿಂದೂ ಮಹಾಸಾಗರದಲ್ಲಿ ಶಾಂತಿ ಸ್ಥಾಪನೆ, ಸ್ಥಿರತೆ ಹಾಗೂ ಅಧಿಕಾರದ ಸಮತೋಲನ ಸಾಧ್ಯವಾಗುತ್ತದೆ ಎಂದು ವರದಿ ಹೇಳಿದೆ.

ಸಿಪೆಕ್ ಕಾರಿಡಾರ್ ಯೋಜನೆಗೆ ಭಾರತದ ಪ್ರತಿರೋಧ

ಸಿಪೆಕ್ ಕಾರಿಡಾರ್ ಯೋಜನೆಗೆ ಭಾರತದ ಪ್ರತಿರೋಧ

ಚೀನಾ-ಪಾಕಿಸ್ತಾನ ಎಕನಾಮಿಕ ಕಾರಿಡಾರ್ ಅಥವಾ ಸಿಪೆಕ್ ಯೋಜನೆ ಅಡಿ ಈಗಾಗಲೇ ಚೀನಾವು ಗ್ವದಾರ್ ಬಂದರು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇನ್ನು ಶ್ರೀಲಂಕಾದಲ್ಲಿ ಡಿಜಿಬೌಟಿ ಹಾಗೂ ಹಂಬನ್ ಟೋಟಾ ಬಂದರನ್ನು ತನ್ನ ಸೇನಾ ನೆಲೆಯ ಸರಕು ಇಳಿಸಲು ತಾಣವಾಗಿ ಮಾಡಿಕೊಂಡಿರುವ ಚೀನಾ, ತಾನು ನೀಡಿದ ಸಾಲದ ಬದಲಿಗೆ ಈ ರೀತಿ ತೊಂಬತ್ತೊಂಬತ್ತು ವರ್ಷದ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಪಾಕಿಸ್ತಾನಕ್ಕಾಗಿ ಅತ್ಯಾಧುನಿಕ ಯುದ್ಧ ವಿಮಾನವನ್ನು 'ಸಿಪೆಕ್' ಅಡಿಯಲ್ಲೇ ಚೀನಾ ಸಿದ್ಧಪಡಿಸುತ್ತಿದೆ ಎಂಬ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿಯನ್ನು ಆ ದೇಶ ಅಲ್ಲಗಳೆದಿತ್ತು. ಇತ್ತ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಸಾಗುವ 'ಸಿಪೆಕ್'ಗೆ ಭಾರತ ತನ್ನ ಪ್ರತಿಭಟನೆ ಕೂಡ ದಾಖಲಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ದ್ವಿಗುಣಗೊಳ್ಳಲಿದೆ ಪಾಕ್ ನೌಕೆ ಸೇನಾ ಬಲ

ದ್ವಿಗುಣಗೊಳ್ಳಲಿದೆ ಪಾಕ್ ನೌಕೆ ಸೇನಾ ಬಲ

ಚೀನಾ ಸಿದ್ಧಪಡಿಸಿರುವ ಬೈಡೌ ಸ್ಯಾಟಲೈಟ್ ನೇವಿಗೇಷನ್ ಸಿಸ್ಟಮ್ ಬಳಕೆ ಆರಂಭಿಸಿದ ಮೊದಲ ದೇಶ ಪಾಕಿಸ್ತಾನ. ಇದನ್ನು ಅಭಿವೃದ್ಧಿ ಪಡಿಸಿರುವುದು ಅಮೆರಿಕದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್)ಗೆ ಸ್ಪರ್ಧೆ ಎಂಬ ದೃಷ್ಟಿಯಿಂದಲೇ. ಸೈನ್ಯದ ಅಪ್ಲಿಕೇಷನ್ ಆಗಿ ಇದನ್ನು ಬಳಕೆ ಮಾಡುವ ಸಾಧ್ಯತೆ ಇದೆ. ಈಗ ಸಿದ್ಧಗೊಳ್ಳುತ್ತಿರುವ ಯುದ್ಧ ನೌಕೆಯಿಂದ ಪಾಕಿಸ್ತಾನದ ನೌಕಾ ಸೇನೆ ಬಲ ದ್ವಿಗುಣಗೊಳ್ಳಲಿದೆ. ನೌಕೆಯಲ್ಲಿ ವಾಯು ದಾಳಿಯನ್ನು ಎದುರಿಸಬಲ್ಲ ಕ್ಷಿಪಣಿಗಳು ಮತ್ತು ಇತರ ಕ್ಷಿಪಣಿಗಳು ಇರಲಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಪಾಕಿಸ್ತಾನಕ್ಕೆ ದೊರೆಯಬಹುದಾದ ಅತ್ಯಾಧುನಿಕ ಯುದ್ಧ ನೌಕೆಯಿದು ಎನ್ನಲಾಗಿದೆ.

ಅತ್ಯಾಧುನಿಕ ರಾಡಾರ್ ಗಳು, ಕ್ಷಿಪಣಿಗಳು

ಅತ್ಯಾಧುನಿಕ ರಾಡಾರ್ ಗಳು, ಕ್ಷಿಪಣಿಗಳು

ಇನ್ನು ಯುದ್ಧ ನೌಕೆಯಲ್ಲಿ ಅತ್ಯಾಧುನಿಕ ರಾಡಾರ್ ಗಳು ಹಾಗೂ ಕ್ಷಿಪಣಿಗಳಿರುತ್ತವೆ. ಮೂವತ್ತಕ್ಕೂ ಹೆಚ್ಚು ಬಗೆಯ 54A ಮಾದರಿಯ ಯುದ್ಧ ನೌಕೆಗಳು ಚೀನಾ ಬಳಿ ಇದ್ದು, ಈಗ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿರುವ ಯುದ್ಧ ನೌಕೆಯ ಈ ವರೆಗಿನ ಅತಿ ದೊಡ್ಡ ಹಾಗೂ ಶಕ್ತಿಶಾಲಿ ಯುದ್ಧ ನೌಕೆ ಎಂದು ಚೀನಾದ ಮಾಧ್ಯಮ ವರದಿ ಮಾಡಿದೆ. ಇನ್ನು ನೌಕೆಯನ್ನು ಪಾಶ್ಚಾತ್ಯ ನೌಕಾ ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಪಾಕ್ ನದೇ ಬೇಡಿಕೆಯಂತೆ ಒಳಗೊಂಡಿದೆ. ಏಕೆಂದರೆ ಇವುಗಳು ಚೀನಾಗಿಂತ ಉತ್ತಮ ತಂತ್ರಜ್ಞಾನ ಹೊಂದಿರುತ್ತವೆ. ಅದರೆ ಉಳಿದ ಶಸ್ತ್ರಾಸ್ತ್ರ ಹಾಗೂ ರಾಡಾರ್ ಗಳು ಚೀನಾದ್ದೇ ಎಂದು ತಿಳಿಸಲಾಗಿದೆ.

English summary
China is building the first of four "most advanced" naval warships for its "all-weather ally" Pakistan as part of a major bilateral arms deal to ensure among other things "balance of power" in the strategic Indian Ocean, state media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X