ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಅಂಗಳದಿಂದ ಶಿಲೆ, ಮಣ್ಣು ಹೊತ್ತು ತಂದ ಚೀನಾ

|
Google Oneindia Kannada News

ಚಂದ್ರನ ಮೇಲ್ಭಾಗದ ಶಿಲೆ, ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವ ಚೀನಾದ ಐತಿಹಾಸಿಕ ಯೋಜನೆ ಯಶಸ್ವಿಯಾಗಿದೆ. ಚೀನಾದ ಮಾನವ ರಹಿತ ಬಾಹ್ಯಾಕಾಶ ನೌಕೆ ''ಚಾಂಗಿ-5'' ಚಂದ್ರನ ಮೇಲಿನ ಶಿಲೆ, ಮಣ್ಣು ಸಂಗ್ರಹಿಸಿ ಆರ್ಬಿಟರ್‌ಗೆ ರವಾನಿಸಿತ್ತು. ಚಂದ್ರನ ಅಂಗಳದಿಂದ ಈ ಸ್ಯಾಂಪಲ್ ಹೊತ್ತು ಕಳೆದ ವಾರ ಭೂಮಿಯತ್ತ ಹೊರಟ್ಟಿದ್ದ ಗಗನನೌಕೆ ಈಗ ಭೂಮಿಯನ್ನು ಸುರಕ್ಷಿತವಾಗಿ ತಲುಪಿದೆ.

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತಾಧಿಕಾರಿ, ಚಂದ್ರನ ಶಿಲೆ, ಮಣ್ಣು ಸಂಗ್ರಹಿಸಿರುವ ಬಾಹ್ಯಾಕಾಶ ನೌಕೆ ''ಚಾಂಗಿ-5'' ಮಂಗೋಲಿಯಾದಲ್ಲಿ ಗುರುವಾರ ಬೆಳಗ್ಗೆ 1PM EST ದಂದು ಸುರಕ್ಷಿತವಾಗಿ ತಲುಪಿದೆ ಎಂದಿದ್ದಾರೆ.

ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ

ಚಂದ್ರನ ಶಿಲೆ ಸುಮಾರು 4.4 ಪೌಂಡ್ ಭಾರ ಇದೆ, ಅಗ್ನಿಪರ್ವತದ ಸ್ಯಾಂಪಲ್ (Mons Rumker) ಗಳನ್ನು ಹೊಂದಿದ್ದ ಸ್ಪೇಸ್ ಕ್ಯಾಪ್ಸುಲ್ ಅಟ್ಲಾಂಟಿಕ್ ಸಮುದ್ರಕ್ಕೂ 3,000 ಮೈಲಿಗಳ ದೂರವಿದ್ದಾಗ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟು, 6 ಮೈಲಿ ಎತ್ತರವಿದ್ದಾಗ ಪ್ಯಾರಚ್ಯೂಟ್ ಮೂಲಕ ಭೂ ಸ್ಪರ್ಶ ಮಾಡಲಾಗಿದೆ.

China brings Moon rocks, soil to Earth

ನವೆಂಬರ್ 24ರಂದು ಚೀನಾ ತನ್ನ 'ಚಾಂಗ್- 5 ಪ್ರೋಬ್' ನೌಕೆಯನ್ನು ಉಡಾವಣೆ ಮಾಡಿತ್ತು. ಈ ಮಾನವರಹಿತ ನೌಕೆಗೆ ಚೀನಾದ ಪೌರಾಣಿಕ ದೇವತೆಯ ಹೆಸರನ್ನು ಇಡಲಾಗಿತ್ತು. ಚಂದ್ರನ ಉಗಮದ ಕುರಿತಾದ ರಹಸ್ಯವನ್ನು ತಿಳಿಯಲು ವಿಜ್ಞಾನಿಗಳಿಗೆ ಅನುಕೂಲವಾಗುವಂತೆ ಈ ನೌಕೆಯು ಚಂದ್ರನ ಮೇಲ್ಭಾಗದಲ್ಲಿನ ವಸ್ತುಗಳನ್ನು ಸಂಗ್ರಹಿಸಿದೆ.

ಚಂದ್ರನ ಓಷನ್ ಆಫ್ ಸ್ಟಾರ್ಮ್ಸ್ ಎಂದು ಕರೆಯಲಾಗುವ ಅಪಾರ ಲಾವಾ ಕೇಂದ್ರಿತ ಪ್ರದೇಶಕ್ಕೆ ಇದುವರೆಗೂ ಯಾವ ನೌಕೆಯೂ ಕಾಲಿರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಚೀನಾದ ನೌಕೆ ಅಲ್ಲಿಗೆ ತೆರಳಿದ್ದು, ಸುಮಾರು 2 ಕೆಜಿಯಷ್ಟು ಕಲ್ಲು, ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ತರುತ್ತಿದೆ. ಈ ಮೂಲಕ ನಾಲ್ಕು ದಶಕಗಳ ಹಿಂದೆ ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ತಂದಿದ್ದ ಅಮೆರಿಕ ಮತ್ತು ಸೋವಿಯತ್ ರಷ್ಯಾ ಮಾಡಿದ ಸಾಧನೆಯನ್ನು ಸರಿಗಟ್ಟಿದ ಮೂರನೇ ದೇಶ ಚೀನಾ.

China brings Moon rocks, soil to Earth

ಚಂದ್ರನ ಮೇಲೆ ಇಳಿದ ಬಳಿಕ ಲ್ಯಾಂಡರ್ ವಾಹನವು ತನ್ನ ರೋಬೋಟಿಕ್ ಕೈಗಳಿಂದ ಚಂದ್ರನ ನೆಲವನ್ನು ಅಗೆದು, ಮಣ್ಣು ಮತ್ತು ಕಲ್ಲಿನ ಮಾದರಿಗಳನ್ನು ಏರಿಕೆ ವಾಹನಕ್ಕೆ ತುಂಬಿಸಿದೆ. ಅದು ಆರ್ಬಿಟಿಂಗ್ ಮಾಡ್ಯುಲ್‌ಗೆ ಸೇರಿಸಿದೆ. ಸುಮಾರು ಎರಡು ದಿನಗಳ ಕಾಲ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಗಗನನೌಕೆ ಬಳಿಕ ಚೀನಾದ ಮಂಗೋಲಿಯಾ ಪ್ರದೇಶಕ್ಕೆ ಮರಳಲಿದೆ ಎಂದು ಚೀನಾ ನ್ಯಾಷನಲ್‌ ಸ್ಪೇಸ್‌ ಅಡ್ಮಿನಿಸ್ಟ್ರೇಷನ್‌ (ಸಿಎನ್‌ಎಸ್‌ಎ) ಹೇಳಿದೆ.

ಈ ಹಿಂದೆ ಡಿಸೆಂಬರ್ 2013ರಲ್ಲಿ ಬಾಹ್ಯಾಕಾಶ ನೌಕೆ ಚಾಂಗ್ ಲಿ 3 ಚಂದ್ರನ ಮೇಲೆ ಇಳಿಸಲಾಗಿತ್ತು. 2019ರಲ್ಲಿ ಚಾಂಗ್ ಲಿ 4 ಚಂದ್ರನ ಮತ್ತೊಂದು ಮೇಲ್ಮೈನಲ್ಲಿ ಲ್ಯಾಂಡ್ ಮಾಡಿದ ಸಾಧನೆ ಮಾಡಿತ್ತು. ಯೂಟು-2 ಇನ್ನೂ ಕಾರ್ಯ ನಿರ್ವಹಿಸುತ್ತಿದೆ. ಈಗ ''ಚಾಂಗಿ-5'' ಚಂದ್ರನ ಮೇಲಿನ ಶಿಲೆ, ಮಣ್ಣು ಸಂಗ್ರಹಿಸಿದ್ದು ಹೊಸ ವಿಕ್ರಮ ಸಾಧಿಸಿದೆ. ಚಂದ್ರನ ಬಗ್ಗೆ ಸಂಶೋಧನೆಯಲ್ಲಿ ಅಮೆರಿಕಕ್ಕಿಂತ ಮೇಲುಗೈ ಸಾಧಿಸಿದೆ ಎನ್ನಬಹುದು ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

English summary
In a statement, the China National Space Administration said a capsule with the moon rocks landed in Inner Mongolia at about 2 a.m. local time ( around 1 p.m. Eastern time on Wednesday).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X