ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಬ್ರಿಕ್ಸ್ ಸಮ್ಮೇಳನ: ಮೋದಿ- ಜಿನ್ಪಿಂಗ್ ಮುಖಾಮುಖಿ

|
Google Oneindia Kannada News

ಗ್ಸಯಾಮೆನ್ (ಚೀನಾ), ಸೆಪ್ಟೆಂಬರ್ 4: ಚೀನಾದ ಗ್ಸಿಯಾಮೆನ್ ನಲ್ಲಿರುವ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಬ್ರಿಕ್ಸ್ ನಾಯಕರನ್ನು ಚೀನಾ ಅಧ್ಯಕ್ಷ ಗ್ಸಿ ಜಿನ್ಪಿಂಗ್ ಇಂದು(ಸೆಪ್ಟೆಂಬರ್ 4) ಸ್ವಾಗತಿಸಿದರು.

ಗಡಿ ವಿವಾದ ಬಳಿಕ ಸೆ.3ರಂದು ಚೀನಾಕ್ಕೆ ಮೋದಿ ಭೇಟಿಗಡಿ ವಿವಾದ ಬಳಿಕ ಸೆ.3ರಂದು ಚೀನಾಕ್ಕೆ ಮೋದಿ ಭೇಟಿ

ಇಂದು 9ನೇ ಬ್ರಿಕ್ಸ್ ಸಮ್ಮೇಳನ ನಡೆಯುತ್ತಿದ್ದು, ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕದ ನಾಯಕರು ಸಮ್ಮೇಳನದದಲ್ಲಿ ಉಪಸ್ಥಿತರಿದ್ದಾರೆ.

China: BRICS plenary session begins in Xiamen, PM Modi attends

ಇದೇ ಸಂದರ್ಭದಲ್ಲಿ ಮಾತನಾಡಿದ ಗ್ಸಿ ಜಿನ್ಪಿಂಗ್, ಜಗತ್ತಿನಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತಿರುವಾಗ ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕ) ದೇಶಗಳು ಪರಸ್ಪರ ಸಹಕಾರ ನೀಡುವುದು ಅಗತ್ಯ ಎಂದರು.

"ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ನಮ್ಮಲ್ಲಿ ಯಾವುದೇ ಅಂತರಗಳಿದ್ದರೂ, ನಾವು ಐದೂ ದೇಶದವರೂ ಅಭಿವೃದ್ಧಿಯ ಒಂದೇ ಹಂತದಲ್ಲಿದ್ದೇವೆ. ಅಭಿವೃದ್ಧಿ ಎಂಬ ಒಂದೇ ಗುರಿಯೊಂದಿಗೆ ನಾವು ಕೆಲಸಮಾಡಬೇಕಿದೆ. ನಮ್ಮೆಲ್ಲರ ಗುರಿ ಒಂದೇ ಆಗಿ, ನಮ್ಮೆಲ್ಲರ ಸಮಸ್ಯೆಗಳನ್ನು ಒಗ್ಗಟ್ಟಿನಿಂದ ಪರಿಹರಿಸಿಕೊಳ್ಳಬೇಕಿದೆ" ಎಂದರು.

ಪ್ರಧಾನಿ ನರೇಂದ್ರ ಮೋದಿಯವರನ್ನೂ ಬ್ರಿಕ್ಸ್ ಸಮ್ಮೇಳನಕ್ಕೆ ಆಹ್ವಾನಿಸಲಾಗಿದ್ದು, ಸಮ್ಮೇಳನದಲ್ಲಿ ಅವರೂ ಉಪಸ್ಥಿತರಿದ್ದಾರೆ. ನಾಳೆ(ಸೆ.5) ನರೇಂದ್ರ ಮೋದಿ ಮತ್ತು ಜಿನ್ಪಿಂಗ್ ಇಬ್ಬರೂ ಭೇಟಿಯಾಗಲಿದ್ದು, ವ್ಯಾಪಾರ ಮತ್ತು ಭಯೋತ್ಪಾದನೆ ಕುರಿತು ಚರ್ಚಿಸುವ ಸಂಭವವಿದೆ.

English summary
Chinese President Xi Jinping welcomed BRICS leaders at the International Conference Center in Xiamen. While addressing, Chinese President Xi Jinping said,''As the world undergoes profound changes, BRICS cooperation has become more important.''
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X