ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಟ್ರೇಲಿಯಾದಿಂದ ಗೋಮಾಂಸ ಆಮದಿಗೆ ಚೀನಾ ತಡೆ

|
Google Oneindia Kannada News

ಬೀಜಿಂಗ್, ಆಗಸ್ಟ್ 28: ಆಸ್ಟ್ರೇಲಿಯಾದಿಂದ ಆಮದಾಗುತ್ತಿದ್ದ ಗೋಮಾಂಸಕ್ಕೆ ಚೀನಾ ತಡೆಯೊಡ್ಡಿದೆ. ಆಸ್ಟ್ರೇಲಿಯಾದ ಜಾನ್ ಡೀ ವಾರ್ವಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ತರಿಸಿಕೊಳ್ಳುತ್ತಿದ್ದ ಗೋಮಾಂಸದಲ್ಲಿ ಮದ್ದಿನ ಅಂಶ ಪತ್ತೆಯಾಗಿತ್ತು.

Recommended Video

China ಗಡಿಗೆ ಎಂಟ್ರಿ ಕೊಟ್ಟ ಭಾರತೀಯ ಸೇನೆ | Oneindia Kannada

ಚೀನಾ ಕೈಗೊಂಡಿರುವ ಕ್ರಮ ಸರಿ ಇದೆ. ಕಾನೂನು ಬದ್ಧವಾಗಿಯೂ ಇದೆ. ಗೋಮಾಂಸದಲ್ಲಿ ಮದ್ದಿನ ಅಂಶ ಹೇಗೆ ಸೇರ್ಪಡೆಯಾಗಿದೆ ಎಂಬುದನ್ನು ಪತ್ತೆ ಹೆಚ್ಚುವ ಕೆಲಸಕ್ಕೆ ಕೈಹಾಕಲಾಗಿದೆ.

ನಾಗಲ್ಯಾಂಡ್‌ನಲ್ಲಿ ನಾಯಿ ಮಾಂಸ ಮಾರಾಟ, ಆಮದು ನಿಷೇಧ ನಾಗಲ್ಯಾಂಡ್‌ನಲ್ಲಿ ನಾಯಿ ಮಾಂಸ ಮಾರಾಟ, ಆಮದು ನಿಷೇಧ

ರಾಸುಗಳಿಗೆ ನೀಡುವ ಆಹಾರದಲ್ಲಿ ಅದು ಸ್ವಾಭಾವಿಕವಾಗಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ. ಈ ಕುರಿತು ಬೀಜಿಂಗ್‌ನ ಅಧಿಕಾರಿಗಳೊಂದಿಗೆ ಮಾತುಕತೆಯೂ ನಡೆದಿದೆ.

China Blocks Imports From Australian Beef

ಈ ಉಂಟಾಗಿರುವ ಬಿಕ್ಕಟ್ಟನ್ನು ಶೀಘ್ರವೇ ಶಮನಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಆಸ್ಟ್ರೇಲಿಯಾದ ಕೃಷಿ ಸಚಿವ ಡೇವಿಡ್ ಲಿಟಲ್ ಪ್ರೌಡ್ ತಿಳಿಸಿದ್ದಾರೆ.

ಜಾನ್ ಡೀ ವಾರ್ವಿಕ್ ಸಂಸ್ಥೆ ಪೂರೈಕೆ ಮಾಡುತ್ತಿದ್ದ ಗೋಮಾಂಸದಲ್ಲಿ ಕ್ಲೋರಾಮ್ ಪೆನಿಕಲ್ ಎಂಬ ಮದ್ದಿನ ಅಂಶ ಪತ್ತೆಯಾಗಿದೆ. ಅವುಗಳನ್ನು ನಾಶಪಡಿಸಲಾಗಿದೆ ಎಂದು ಚೀನಾದ ಜನರಲ್ ಅಡ್ಮಿನಿಸ್ಟ್ರೇಷನ್ ಆಫ್ ಕಸ್ಟಮ್ಸ್ ಹೇಳಿದೆ.

English summary
China blocked imports from an Australian beef producer on Friday after reporting a banned drug was found in its meat, and Australian officials said they were working to resolve the problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X