ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ವಾನ್ ಆಯ್ತು, ಈಗ ಭೂತಾನ್ ಗಡಿಯಲ್ಲಿ ಕ್ಯಾತೆ ತೆಗೆದ ಚೀನಾ ಸೇನೆ

|
Google Oneindia Kannada News

ನವದೆಹಲಿ, ಜುಲೈ 6: ಚೀನಾವು ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದೊಂದಿಗೆ ಕ್ಯಾತೆ ತೆಗೆದ ಬಳಿಕ ಇದೀಗ ಭೂತಾನ್ ಗಡಿಯಲ್ಲಿ ತನ್ನ ವರಸೆ ಆರಂಭಿಸಿದೆ.

Recommended Video

Kushal Mendis arrested ಶ್ರೀಲಂಕಾ ಕ್ರಿಕೆಟಿಗರ್ ಕುಸಾಲ್ ಮೆಂಡಿಸ್ ಅರೆಸ್ಟ್ | Oneindia Kannada

ಲಡಾಖ್​ನ ಪೂರ್ವಭಾಗದಲ್ಲಿ ಪ್ಯಾಂಗಾಂಗ್​ ತ್ಸೂ ಸರೋವರದ ಬಳಿಯ ತನ್ನ ಅತಿಕ್ರಮಣವನ್ನು ಒಪ್ಪುವಂತೆ ಭಾರತವನ್ನು ಮಣಿಸಲೇಬೇಕು ಎಂದು ಚೀನಾ ಹಟಕ್ಕೆ ಬಿದ್ದಿದೆ. ಇದಕ್ಕಾಗಿ ಅದು ಒಳದಾರಿಗಳನ್ನು ಹುಡುಕುತ್ತಿದೆ.

ಲಡಾಖ್‌ನಲ್ಲಿ ಕ್ಯಾತೆ ತೆಗೆದು ಈಗ ನಾವು ಭೂಮಿ ಕಬಳಿಸುವವರಲ್ಲ ಎಂದ ಚೀನಾಲಡಾಖ್‌ನಲ್ಲಿ ಕ್ಯಾತೆ ತೆಗೆದು ಈಗ ನಾವು ಭೂಮಿ ಕಬಳಿಸುವವರಲ್ಲ ಎಂದ ಚೀನಾ

ಭೂತಾನ್​ ಭಾರತದ ಅರುಣಾಚಲಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಇದೇ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್​ನ ಭಾಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಈ ಭಾಗವನ್ನು ಆಕ್ರಮಿಸಿಕೊಳ್ಳಲು, ಪ್ರಯತ್ನಿಸುತ್ತಲೇ ಇದೆ.

China Bhutan Border Dispute: China Makes New Claim In Eastern Border With Bhutan

ಇದೀಗ ಭಾರತ ಮತ್ತು ಭೂತನ್​ ನಡುವೆ ಇರುವ ಸ್ನೇಹ ಮತ್ತು ಸೌಹಾರ್ದ ಸಂಬಂಧವನ್ನು ಹದಗೆಡಿಸಿಯಾದರೂ, ಪೂರ್ವ ಲಡಾಖ್​ನ ತನ್ನ ಅತಿಕ್ರಮಣವನ್ನು ಒಪ್ಪಿಕೊಳ್ಳುವಂತೆ ಭಾರತವನ್ನು ಮಣಿಸಬೇಕು ಎಂಬ ಪ್ರಯತ್ನವನ್ನು ಅದು ಆರಂಭಿಸಿದೆ.

ಇದೀಗ ಅದಕ್ಕೆ ಸಿಕ್ಕಿರುವ ಒಂದು ಅವಕಾಶದಲ್ಲಿ ಪುಟಾಣಿ ರಾಷ್ಟ್ರ ಭೂತಾನ್​ನೊಂದಿಗೆ ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿ ಗಡಿ ವಿವಾದ ಇದೆ. ಇದು ತುಂಬಾ ಹಿಂದಿನಿಂತಲೂ ಇರುವಂಥದ್ದು. ಅದನ್ನು ಇತ್ಯರ್ಥ ಪಡಿಸಿಕೊಳ್ಳಲು ಈಗ ಚೀನಾ ನಿರ್ಧರಿಸಿದೆ.

ಹಾಗಾಗಿ ಇದರಲ್ಲಿ ಮೂರನೆಯವರು ಯಾರೂ ಮಧ್ಯಪ್ರವೇಶಿಸಬಾರದು ಎಂದು ಪರೋಕ್ಷವಾಗಿ ಭಾರತವನ್ನು ಉಲ್ಲೇಖಿಸಿ ಚೀನಾ ಹೇಳಿಕೆ ನೀಡಿದೆ.

ಜೂನ್​ನಲ್ಲಿ ಭಾರತದ ಉಪಸ್ಥಿತಿಯಲ್ಲಿ ನಡೆದ ಬಹು ಆಯಾಮದ ವೇದಿಕೆಯ ಸಭೆಯಲ್ಲಿ ಕೂಡ ಚೀನಾ ಈ ವಿಷಯವನ್ನು ಪ್ರಸ್ತಾಪಿಸಿತ್ತು. ತಮ್ಮ ದೇಶದ ಪೂರ್ವಭಾಗದ ಗಡಿ ವಿಷಯವಾಗಿ ಭೂತಾನ್​ನೊಂದಿಗೆ ವಿವಾದ ಇದೆ ಎಂದು ಹೇಳಿತ್ತು.

English summary
WITH CHINA making new territorial claims in its eastern border with Bhutan this week, there is considerable disquiet in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X