ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ತೈವಾನ್‌ ಸಮೀಪ ಮಿಲಿಟರಿ ಅಭ್ಯಾಸ ಆರಂಭಿಸಿದ ಚೀನಾ

|
Google Oneindia Kannada News

ತೈಪೆ,ಆ.04: ಯುನೈಟೆಡ್ ಸ್ಟೇಟ್ಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ತೈಪೆಗೆ ಬಂದಿದ್ದ ಬೆನ್ನಲ್ಲೇ ಚೀನಾ ತೈವಾನ್ ಸುತ್ತಲೂ ಮಿಲಿಟರಿ ಅಭ್ಯಾಸ ಆರಂಭಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಚೀನೀ ಸೇನೆಯು ಗುರುವಾರ ಮಧ್ಯಾಹ್ನ (0400 GMT) ತೈವಾನ್ ಸುತ್ತಮುತ್ತಲಿನ ಸಮುದ್ರದಲ್ಲಿ ಲೈವ್-ಫೈರ್ ಅಭ್ಯಾಸ ಪ್ರಾರಂಭಿಸಿತು ಎಂದು ರಾಜ್ಯದ ಮಾಧ್ಯಮ ತಿಳಿಸಿದೆ.

"ಇಂದು ಮಧ್ಯಾಹ್ನ 12:00 ರ ರಿಂದ ಬೆಳಗ್ಗೆ 12:00 ರವರೆಗೆ, ಪೀಪಲ್ಸ್ ಲಿಬರೇಶನ್ ಆರ್ಮಿಯ ಪ್ರಮುಖ ಮಿಲಿಟರಿ ವಿಮಾನಗಳ ಅಭ್ಯಾಸ ನಡೆಯುತ್ತಿದೆ" ಎಂದು ತೈವಾನ್‌ನ ನಕ್ಷೆಯನ್ನು ಒಳಗೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ.

ಯುಎಸ್ ಸ್ಪೀಕರ್ ಪಲೋಸಿ ಬರುತ್ತಿದ್ದಂತೆ ತೈವಾನ್‌ಗೆ ನುಗ್ಗಿದ ಚೀನಾ ಸೇನಾ ವಿಮಾನಯುಎಸ್ ಸ್ಪೀಕರ್ ಪಲೋಸಿ ಬರುತ್ತಿದ್ದಂತೆ ತೈವಾನ್‌ಗೆ ನುಗ್ಗಿದ ಚೀನಾ ಸೇನಾ ವಿಮಾನ

ತನ್ನ ಸೇನಾ ಪಡೆಗಳು ದ್ವೀಪದ ಸುತ್ತಮುತ್ತಲಿನ ನೀರಿನಲ್ಲಿ ನಡೆಯುತ್ತಿರುವ ಅಭೂತಪೂರ್ವ ಚೀನೀ ಮಿಲಿಟರಿ ವಿಮಾನಗಳ ಅಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಸಂಘರ್ಷಕ್ಕೆ ಸಿದ್ಧವಾಗಿದೆ" ಎಂದು ತೈವಾನ್ ತಿಳಿಸಿದೆ.

China Begins Military Exercises Around Taiwan

"ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಯುದ್ಧವನ್ನು ಮಾಡದೆ ಯುದ್ಧಕ್ಕೆ ತಯಾರಾಗುವ ತತ್ವವನ್ನು ಎತ್ತಿಹಿಡಿಯುತ್ತದೆ. ಇದು ಸಂಘರ್ಷವನ್ನು ಹೆಚ್ಚಿಸುವುದಿಲ್ಲ ಮತ್ತು ವಿವಾದಗಳನ್ನು ಉಂಟುಮಾಡುವುದಿಲ್ಲ" ಎಂದು ತೈಪೆಯ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್ ಸ್ಟೇಟ್ಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ತೈಪೆಗೆ ಬಂದಿಳಿದ ಸ್ವಲ್ಪ ಸಮಯದಲ್ಲಿ ಚೀನಾ ತೈವಾನ್ ಮೇಲೆ ವಕ್ರದೃಷ್ಟಿ ಬೀರಿದೆ. ಚೀನಾದ 21 ಮಿಲಿಟರಿ ವಿಮಾನಗಳು ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯದ (ADIZ) ನೈಋತ್ಯ ಭಾಗದಲ್ಲಿ ಹಾರಿವೆ ಎಂಬುದನ್ನು ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಬುಧವಾರ ದೃಢಪಡಿಸಿತ್ತು.

Recommended Video

ವೆಸ್ಟ್ ಇಂಡೀಸ್ ವಿರುದ್ಧ ಸೂರ್ಯ ಕುಮಾರ್ ಹೊಡೆದ ಶಾಟ್ ನೋಡಿ ಕ್ರಿಕೆಟ್ ಪ್ರೇಮಿಗಳು ಫಿದಾ*Cricket |OneIndia Kannada

ಚೀನಾ ಬೆದರಿಕೆಯ ಹಿನ್ನೆಲೆ ಇಂಡೋ-ಪೆಸಿಫಿಕ್ ಪ್ರದೇಶದ ಕಾಂಗ್ರೆಸ್ ನಿಯೋಗದ ಪ್ರವಾಸದ ಭಾಗವಾಗಿ ಪೆಲೋಸಿ ಮಂಗಳವಾರ ತೈವಾನ್‌ಗೆ ಭೇಟಿ ನೀಡಿದರು. ಆಕೆಯ ವಿಮಾನ ತೈಪೆಯಲ್ಲಿ ಇಳಿದ ಕೆಲವೇ ನಿಮಿಷಗಳಲ್ಲಿ, ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೈವಾನ್ ಸುತ್ತಮುತ್ತಲಿನ ನೀರಿನಲ್ಲಿ ಆರು ಲೈವ್-ಫೈರ್ ಮಿಲಿಟರಿ ಡ್ರಿಲ್‌ಗಳನ್ನು ನಡೆಸುವುದಾಗಿ ಘೋಷಿಸಿತು, ಇದು ಗುರುವಾರದಿಂದ ಭಾನುವಾರದವರೆಗೆ ನಡೆಯಲಿದೆ ಎಂದು ಹೇಳಿತು.

English summary
The Chinese military began live-fire exercises in the sea surrounding Taiwan: state media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X