ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನ ಮೇಲೆ ಧ್ವಜ ನೆಟ್ಟ ವಿಶ್ವದ ಎರಡನೇ ರಾಷ್ಟ್ರ ಚೀನಾ!

|
Google Oneindia Kannada News

ಬೀಜಿಂಗ್, ಡಿಸೆಂಬರ್ 05: ಮಾನವ ಚಂದ್ರನಲ್ಲಿಗೆ ಕಾಲಿಟ್ಟು 50 ವರ್ಷಗಳೇ ಕಳೆದಿದೆ. ಅಮೆರಿಕಾದ ಈ ಸಾಧನೆ ಕಳೆದು 50 ವರ್ಷಗಳ ಬಳಿಕ ಚಂದ್ರನ ಮೇಲೆ ಧ್ವಜ ನೆಟ್ಟ ಎರಡನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ.

ಜುಲೈ 20, 1960ರಂದು ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ನೀಲ್ ಆರ್ಮ್ ಸ್ಟ್ರಾಂಗ್ ಪಾತ್ರರಾದರು. ಅಪೊಲೊ 11 ಮಿಷನ್‌ನಲ್ಲಿ ತೆರಳಿದ್ದ ಆರ್ಮ್‌ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟವನೇ ಹೀಗೆ ಉದ್ಘರಿಸಿದ ''ಮನುಷ್ಯನಿಗೆ ಅದು ಒಂದು ಸಣ್ಣ ಹೆಜ್ಜೆ. ಮನುಕುಲಕ್ಕೆ ಭಾರಿ ನೆಗೆತ'' ಎಂದು ಚಂದ್ರನಲ್ಲಿ ಸುತ್ತಾಡಿ ಅಮೆರಿಕಾ ಧ್ವಜ ನೆಟ್ಟು ಖುಷಿ ಪಟ್ಟಿದ್ದರು.

ಚೀನಾ ವಿರುದ್ಧ 'ಹೈಡ್ರೋಜನ್ ಬಾಂಬ್’ ಪ್ರಯೋಗಿಸಲಿದೆ ಭಾರತ..!ಚೀನಾ ವಿರುದ್ಧ 'ಹೈಡ್ರೋಜನ್ ಬಾಂಬ್’ ಪ್ರಯೋಗಿಸಲಿದೆ ಭಾರತ..!

ಆದರೆ ಚೀನಾದ ಗಗನಯಾತ್ರಿಗಳು ಈ ಸಾಧನೆ ಮಾಡದಿದ್ರೂ , ಧ್ವಜ ನೆಟ್ಟ ಎರಡನೇ ರಾಷ್ಟ್ರವೆನಿಸಿದೆ. ಚಾಂಗ್ 5 ಗೆ ಅಳವಡಿಸಲಾದ ಕ್ಯಾಮೆರಾದಿಂದ ತೆಗೆದ ಧ್ವಜದ ಚಿತ್ರಗಳನ್ನು ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತವು ಹಂಚಿಕೊಂಡಿದೆ. ಚಂದ್ರನಿಂದ ನಿರ್ಗಮಿಸಿ ಭೂಮಿಗೆ ಮರಳುವ ಮೊದಲು ಚಾಂಗ್ 5 ಚಂದ್ರನ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ವಿಶಿಷ್ಟ ಕೆಂಪು ಧ್ವಜವನ್ನು ಚಾಂಗ್ -5 ಲ್ಯಾಂಡರ್ ವಾಹನವು ಬಿಚ್ಚಿಟ್ಟಿತು.

China Becomes 2nd Nation To Plant Flag On The Moon

ಚೀನಾದ ಮಹತ್ವಾಕಾಂಕ್ಷೆಯ ಚಂದ್ರ ಮಿಷನ್ ಚಾಂಗ್ 5 ಮಂಗಳವಾರ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಇದು ಮೂರನೇ ಬಾರಿಗೆ ದೇಶವು ಚಂದ್ರನ ಮೇಲ್ಮೈಯಲ್ಲಿ ರೊಬೊಟಿಕ್ ಬಾಹ್ಯಾಕಾಶ ನೌಕೆಯನ್ನು ಇರಿಸಿದೆ. ಚಾಂಗ್ 5 ಅನ್ನು ಚೀನಾದ ವೆನ್‌ಚಾಂಗ್ ಬಾಹ್ಯಾಕಾಶ ನೌಕೆ ಉಡಾವಣಾ ತಾಣದಿಂದ ನವೆಂಬರ್ 23, 2020 ರಂದು ಉಡಾವಣೆ ಮಾಡಲಾಯಿತು.

ಚೀನಾದ ಚಾಂಗ್ 5 ಬಾಹ್ಯಾಕಾಶ ನೌಕೆಯು 2 ರಿಂದ 4 ಕೆಜಿಯಷ್ಟು ಚಂದ್ರನ ಮೇಲಿನ ಮಾದರಿಗಳನ್ನು ಸಂಗ್ರಹಿಸುವ ಉದ್ದೇಶವನ್ನು ಪೂರ್ಣಗೊಳಿಸಿದೆ.

English summary
China has planted its flag on the moon during a space expedition to collect lunar rocks. The communist nation is the second country after the USA to deposit its national flag on the moon’s airless atmosphere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X