ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷರನ್ನು ಹೋಲುತ್ತೆ ಅಂತ 'Winnie the Pooh'ಬ್ಯಾನ್ ಮಾಡಿದ ಚೀನಾ!

'ವಿನ್ನಿ ದ ಪೂ' ಕಾಮಿಕ್ ಸರಣಿ ಹಾಗೂ ಚಿತ್ರಗಳನ್ನು ಚೀನಾದಲ್ಲಿ ಬ್ಯಾನ್ ಮಾಡಿದ ಅಲ್ಲಿನ ಸರ್ಕಾರ. ಆ ಚಿತ್ರಗಳು ಜಿನ್ ಪಿಂಗ್ ಅವರನ್ನು ಹೋಲುತ್ತವೆ ಎಂದು ಬ್ಯಾನ್ ಮಾಡಿದ ಅಲ್ಲಿನ ಸರ್ಕಾರ.

|
Google Oneindia Kannada News

ಬೀಜಿಂಗ್, ಜುಲೈ 19: ತಮ್ಮ ಅಧ್ಯಕ್ಷ ಜಿನ್ ಪಿಂಗ್ ಅವರನ್ನು ಹೋಲುತ್ತದೆ ಎಂಬ ಕಾರಣಕ್ಕೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ 'ವಿನ್ನಿ ದ ಪೂ' ಟೆಡ್ಡಿ ಕಾಮಿಕ್ ವಿಡಿಯೋ ಸರಣಿಯನ್ನು ಚೀನಾದಲ್ಲಿ ಅಲ್ಲಿನ ಸರ್ಕಾರ ನಿಷೇಧ ಹೇರಿದೆ.

ಭಾರತ ಗಡಿಗೆ ಸಮೀಪ ಟಿಬೆಟ್ ನಲ್ಲಿ ಚೀನಾದಿಂದ ಶಸ್ತ್ರ ಸಂಗ್ರಹಭಾರತ ಗಡಿಗೆ ಸಮೀಪ ಟಿಬೆಟ್ ನಲ್ಲಿ ಚೀನಾದಿಂದ ಶಸ್ತ್ರ ಸಂಗ್ರಹ

ಇತ್ತೀಚೆಗೆ ಚೀನಾದ ಆನ್ ಲೈನ್ ಬಳಕೆದಾರರು ರಾಜಕಾರಣಿಗಳ ವಿಚಾರದಲ್ಲಿ ಕಾಮಿಡಿ ಮಾಡಲು ಹೋದಾಗಲೆಲ್ಲಾ ಜಿನ್ ಪಿಂಗ್ ಅವರ ಪಕ್ಕದಲ್ಲಿ 'ವಿನ್ನಿ' ಕಾರ್ಟೂನನ್ನು ಹಾಕುತ್ತಿದ್ದರು. ಇದು ಚೀನಾದ ಅಂತರ್ಜಾಲದಲ್ಲಿ ವ್ಯಾಪಕವಾಗಿ ಬಳಕೆಗೆ ಬಂದಿದ್ದರಿಂದ ಎಚ್ಚೆತ್ತುಕೊಂಡ ಸರ್ಕಾರ, ಕೂಡಲೇ ಅದನ್ನು ನಿಷೇಧಿಸಿದೆ.

China bans Winnie the Pooh over 'resemblance to Jinping'

ಇದಾಗಿದ್ದು 2013ರಲ್ಲಿ!!
ನಿಜಕ್ಕೂ ಜಿನ್ ಪಿಂಗ್ ಅವರ ಭಾವಚಿತ್ರವು ಹೀಗೆ 'ವಿನ್ನಿ'ಗೆ ಹೋಲಿಕೆಯಾಗಿದ್ದು 2013ರಲ್ಲಿ. ಆಗ, ಜಿನ್ ಪಿಂಗ್ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರು. ಆಗ, ಜಿನ್ ಪಿಂಗ್ ಅವರು, ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಜತೆಗೆ, ಶ್ವೇತಭವನದ ಹೂದೋಟದಲ್ಲಿ ಜತೆಯಾಗಿ ಓಡಾಡಿದ್ದರು.

ಭಾರತ- ಚೀನಾ ವಿರಸದ ವೇಳೆಯಲ್ಲಿ 'ಶಕುನಿ' ವೇಷ ಹಾಕಿದ ಪಾಕ್ಭಾರತ- ಚೀನಾ ವಿರಸದ ವೇಳೆಯಲ್ಲಿ 'ಶಕುನಿ' ವೇಷ ಹಾಕಿದ ಪಾಕ್

ವಿನ್ನಿ ಕಾಮಿಕ್ ಸರಣಿಯಲ್ಲಿ ವಿನ್ನಿಯು ತನ್ನ ಮಿತ್ರ ಟಿಗ್ಗರ್ (ಹುಲಿ) ಜತೆಗೆ ಕಾಡಿನಲ್ಲಿ ಹೀಗೇ ಹೆಜ್ಜೆ ಹಾಕುತ್ತಿರುತ್ತದೆ. ಈ ಫೋಟೋವನ್ನು ಬಳಸಿಕೊಂಡಿದ್ದ ಅಮೆರಿಕದ ಕೆಲ ಪತ್ರಿಕೆಗಳು 'ಜಿನ್ ಪಿಂಗ್- ಒಬಾಮ' ಜತೆಗೆ ಹೋಗುತ್ತಿದ್ದ ಚಿತ್ರದ ಪಕ್ಕದಲ್ಲೇ 'ವಿನ್ನಿ- ಟಿಗ್ಗರ್' ಫೋಟೋವನ್ನು ಹಾಕಿದ್ದರು. ಅಲ್ಲಿಂದ ಶುರುವಾಗಿತ್ತು ಜಿನ್ ಪಿಂಗ್ ಅವರನ್ನು ವಿನ್ನಿಗೆ ಹೋಲಿಸಲು ಶುರುವಾಗಿತ್ತು.

English summary
The world-beloved honey-loving teddy bear has been nearly banished from China's cyberspace, and the reason for doing so is equally bizarre.The online ban on Winnie the Pooh came to light especially after the Financial Times covered the topic in a front page story Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X