ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಕ್ಸಿಂಜಿಯಾಂಗ್‌ನಲ್ಲಿ ರಂಜಾನ್ ಉಪವಾಸಕ್ಕೆ ನಿಷೇಧ

|
Google Oneindia Kannada News

ಬೀಜಿಂಗ್, ಮೇ 3: ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಸಿಂಜಿಯಾಂಗ್ ಪ್ರದೇಶದಲ್ಲಿ ರಂಜಾನ್ ಮಾಸದಲ್ಲಿ ನಾಗರಿಕ ಸೇವಾ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪವಾಸ ಕೈಗೊಳ್ಳುವುದನ್ನು ನಿಷೇಧಿಸಿದೆ. ಈ ಮಾಸದಲ್ಲಿ ರೆಸ್ಟೋರೆಂಟ್‌ಗಳು ತೆರೆದಿರುವಂತೆ ಆದೇಶಿಸಿದೆ.

ರಂಜಾನ್ ಪವಿತ್ರ ಮಾಸದಲ್ಲಿ ಮುಸ್ಲಿಮರು ಧಾರ್ಮಿಕ ಆಚರಣೆಯಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಕೈಗೊಳ್ಳುತ್ತಾರೆ. ಇದು ಎಲ್ಲೆಡೆ ಗುರುವಾರದಿಂದ ಆರಂಭವಾಗಿದೆ. ಆದರೆ, ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಹಲವು ವರ್ಷಗಳಿಂದಲೂ ಉಯಿಘುರ್ ಮುಸ್ಲಿಂ ಸಮುದಾಯದ ಬಾಹುಳ್ಯ ಇರುವ ಕ್ಸಿಂಜಿಯಾಂಗ್ ಪ್ರದೇಶದಲ್ಲಿ ರಂಜಾನ್ ಆಚರಣೆಯ ವೇಳೆ ನಿರ್ಬಂಧಗಳನ್ನು ವಿಧಿಸುತ್ತಿದೆ.

ರಂಜಾನ್‌ ವೇಳೆ ಮತದಾನ ಸಮಯ ಬದಲಾವಣೆ ಮರುಚಿಂತನೆಗೆ ಸುಪ್ರಿಂ ಸೂಚನೆ ರಂಜಾನ್‌ ವೇಳೆ ಮತದಾನ ಸಮಯ ಬದಲಾವಣೆ ಮರುಚಿಂತನೆಗೆ ಸುಪ್ರಿಂ ಸೂಚನೆ

ರಂಜಾನ್ ಸಂದರ್ಭದಲ್ಲಿ ಎಂದಿನಂತೆಯೇ ಅಹಾರ ಸೇವೆಗಳು ಕಾರ್ಯನಿರ್ವಹಿಸಲಿವೆ ಎಂದು ಕ್ಸಿಂಜಿಯಾಂಗ್ ಪ್ರಾಂತ್ಯದ ಆಹಾರ ಮತ್ತು ಔಷಧ ಆಡಳಿತ ವಿಭಾಗದ ವೆಬ್‌ಸೈಟ್ ಕಳೆದ ವಾರ ಸೂಚನೆ ಹೊರಡಿಸಿದೆ.

china bans Ramadan fasting in Xinjiang region for Uighur minority

ಬೋಲೆ ಕೌಂಟಿ ಪ್ರದೇಶದ ಅಧಿಕಾರಿಗಳು, 'ರಂಜಾನ್ ಸಂದರ್ಭದಲ್ಲಿ ಉಪವಾಸ, ಜಾಗರಣೆ ಅಥವಾ ಇತರೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವಂತಿಲ್ಲ' ಎಂದು ಆದೇಶ ಹೊರಡಿಸಿದ್ದಾರೆ.

ಕಳೆದ ವರ್ಷವೂ ಈ ಪ್ರದೇಶದಲ್ಲಿ ಉಯಿಘುರ್ ಮುಸ್ಲಿಮರ ಉಪವಾಸದ ಮೇಲೆ ನಿಷೇಧ ಹೇರುವ ಪ್ರಯತ್ನ ನಡೆದಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕೇರಳದ ಎಂಇಎಸ್ ಶಾಲಾ, ಕಾಲೇಜು ಆವರಣದಲ್ಲಿ ಬುರ್ಖಾ ನಿಷೇಧ ಕೇರಳದ ಎಂಇಎಸ್ ಶಾಲಾ, ಕಾಲೇಜು ಆವರಣದಲ್ಲಿ ಬುರ್ಖಾ ನಿಷೇಧ

ಇಸ್ಲಾಂ ಮೇಲೆ ಚೀನಾವು ಹೇರಿರುವ ನಿರ್ಬಂಧವು ಕ್ಸಿಂಜಿಯಾಂಗ್ ಪ್ರದೇಶದಲ್ಲಿ ಸಮುದಾಯಗಳ ನಡುವೆ ಉದ್ವೇಗ ಹೊತ್ತಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕೋಮು ಗಲಭೆಗಳಿಂದ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಕ್ಸಿಂಜಿಯಾಂಗ್‌ನಲ್ಲಿ ಭಯೋತ್ಪಾದನಾ ಬೆದರಿಕೆ ಇದೆ. ಹಿಂಸಾಚಾರಕ್ಕೆ ಧಾರ್ಮಿಕ ಮೂಲಭೂತವಾದಿಗಳೇ ಕಾರಣ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಯಾವ್ಯಾವ ದೇಶದಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧವಿದೆ ಗೊತ್ತಾ? ಯಾವ್ಯಾವ ದೇಶದಲ್ಲಿ ಬುರ್ಖಾ ಧರಿಸುವುದಕ್ಕೆ ನಿಷೇಧವಿದೆ ಗೊತ್ತಾ?

'ರಂಜಾನ್ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಉಪವಾಸ ಮಾಡುವಂತಿಲ್ಲ, ಮಸೀದಿಗಳನ್ನು ಪ್ರವೇಶಿಸುವಂತಿಲ್ಲ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ' ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡುವಂತೆ ಶಿಕ್ಷಣ ಇಲಾಖೆ ಶಾಲೆಗಳಿಗೆ ಆದೇಶ ನೀಡಿದೆ.

English summary
China has banned students, Civil servants and teachers doing Ramadan fasting and ordered restaurants to saty open in Xinjiang region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X