ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಸ್ನೇಹ ಬೇಕೇ ಬೇಕು, ಆದರೆ ತಂಟೆಗೆ ಬಂದ್ರೆ ಚೆನ್ನಾಗಿರಲ್ಲ!

|
Google Oneindia Kannada News

ಅಮೆರಿಕದ ಸ್ಥಾನ ತುಂಬಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ನಮಗೆ ಅಮೆರಿಕದ ಬಾಂಧವ್ಯ ಅತಿಮುಖ್ಯ, ಆದರೆ ನಮ್ಮ ತಂಟೆಗೆ ಮಾತ್ರ ಬರಬೇಡಿ ಎಂದು ಚೀನಾ ವಾರ್ನಿಂಗ್ ಕೊಟ್ಟಿದೆ. ನಾವು ಅಮೆರಿಕದ ಜೊತೆಗೆ ಸಂಬಂಧ ವೃದ್ಧಿ ಬಯಸುತ್ತೇವೆ, ಆದರೆ ಟ್ರಂಪ್ ಮಾಡಿದ ತಪ್ಪುಗಳು ರಿಪೀಟ್ ಆಗದಿರಲಿ ಎಂಬುದೇ ನಮ್ಮ ಬಯಕೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ತಿಳಿಸಿದ್ದಾರೆ.

ತೈವಾನ್, ಹಾಂಕಾಂಗ್, ಟಿಬೆಟ್, ಕ್ಸಿನ್‌ಜಿಯಾಂಗ್‌ನಲ್ಲಿ ನಡೆಯುತ್ತಿರುವ ಪ್ರತ್ಯೇಕತಾವಾದಿ ಪ್ರತಿಭಟನೆ ಬೆಂಬಲಿಸಿದರೆ, ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದಿದೆ ಚೀನಾ. ಅಂತಾರಾಷ್ಟ್ರೀಯ ಸಂಬಂಧದಲ್ಲಿ ಅಮೆರಿಕದ ಜೊತೆಗಿನ ಬಾಂಧವ್ಯಕ್ಕೆ ನಮ್ಮದು ಮೊದಲ ಆದ್ಯತೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಮ್ಮ ವಿರುದ್ಧ ನಡೆಯುತ್ತಿರುವ ಬೆಳವಣಿಗೆಗಳು ಸಹಿಸಲು ಸಾಧ್ಯವಿಲ್ಲ ಎನ್ನುತ್ತಿದೆ ಚೀನಾ ಕಮ್ಯುನಿಸ್ಟ್ ಪಾರ್ಟಿ.

ತೈವಾನ್ ಪ್ರತ್ಯೇಕ ದೇಶ ಎಂಬ ಅಸ್ಥಿತ್ವಕ್ಕಾಗಿ ಬಡಿದಾಟ ಮುಂದುವರಿಸಿದ್ದರೆ, ಹಾಂಕಾಂಗ್ ಈಗಾಗಲೇ ಚೀನಾ ಬಲೆಯಲ್ಲಿ ಬಿದ್ದಿದೆ. ಇನ್ನುಳಿದಂತೆ ಟಿಬೆಟ್ ಹಾಗೂ ಕ್ಸಿನ್‌ಜಿಯಾಂಗ್‌ ಈಗಾಗಲೇ ಚೀನಾ ಭಾಗವಾಗಿವೆ. ಆದರೂ ಆಂತರಿಕವಾಗಿ ಕಲಹ ಏರ್ಪಡುವ ಹಿಂಟ್ ಚೀನಾಗೆ ಸಿಕ್ಕಿದೆ. ಇದೇ ಕಾರಣಕ್ಕೆ ಅಮೆರಿಕದ ನಾಯಕರಿಗೆ ನೇರ ಎಚ್ಚರಿಕೆ ರವಾನಿಸಿದೆ ಚೀನಾ.

ನಮ್ಮ ಮೇಲೆ ಹೆಚ್ಚಿನ ತೆರಿಗೆ ಏಕೆ..?

ನಮ್ಮ ಮೇಲೆ ಹೆಚ್ಚಿನ ತೆರಿಗೆ ಏಕೆ..?

ಚೀನಾ ಮೇಲಿನ ಸರಕುಗಳಿಗೆ ಅಮೆರಿಕದಲ್ಲಿ ಭಾರಿ ಮೊತ್ತದ ಟ್ಯಾಕ್ಸ್ ಹಾಕುತ್ತಿದ್ದೀರ. ಇದನ್ನು ಕೂಡ ನಾವು ಸಹಿಸಲು ಸಾಧ್ಯವಿಲ್ಲ. ಜೋ ಬೈಡನ್ ಸರ್ಕಾರ ಈಗಲಾದರೂ ಟ್ರಂಪ್ ಆಡಳಿತದ ತಪ್ಪುಗಳನ್ನ ಬದಲಿಸಲು ಮುಂದಾಗಲಿ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಮನವಿ ಮಾಡಿದ್ದಾರೆ. ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರಕ್ಕೆ ದೊಡ್ಡ ಇತಿಹಾಸವಿದೆ. ಭಾರಿ ಪ್ರಮಾಣದಲ್ಲಿ ರಫ್ತು, ಆಮದು ನಡೆಯುತ್ತಿದೆ. ಇದೇ ಕಾರಣಕ್ಕೆ ವ್ಯಾಪಾರ ಸಂಬಂಧ ವೃದ್ಧಿ ಅತಿಮುಖ್ಯ. ಈ ವಿಚಾರವಾಗಿ ಅಮೆರಿಕ ತನ್ನ ತೆರಿಗೆ ನಿಲುವನ್ನ ಮತ್ತೆ ಪರಿಶೀಲನೆಗೆ ಒಳಪಡಿಸಲಿ ಎಂದು ವಾಂಗ್ ಯೀ ಮನವಿ ಮಾಡಿದ್ದಾರೆ.

ವಾಣಿಜ್ಯ ಯುದ್ಧ v/s ರಾಜತಾಂತ್ರಿಕ ಯುದ್ಧ..!

ವಾಣಿಜ್ಯ ಯುದ್ಧ v/s ರಾಜತಾಂತ್ರಿಕ ಯುದ್ಧ..!

ಅಮೆರಿಕ ಹಾಗೂ ಚೀನಾ ನಡುವೆ ವಾಣಿಜ್ಯ ಯುದ್ಧ ಆರಂಭವಾಗಿ ವರ್ಷಗಳೇ ಕಳೆದಿವೆ. ಎರಡೂ ರಾಷ್ಟ್ರಗಳು ಪರಸ್ಪರ ತೆರಿಗೆ ಸಮರವನ್ನೇ ಸಾರಿವೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್, ಚೀನಾ ವಸ್ತುಗಳ ಮೇಲೆ ಭಾರಿ ಪ್ರಮಾಣದ ತೆರಿಗೆ ಹೇರುವ ಮೂಲಕ ಚೀನಾ ನಾಯಕರನ್ನು ಕೆರಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚೀನಾ ಸರ್ಕಾರ ಅಮೆರಿಕನ್ ಸರಕುಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿತ್ತು. ಇದು ವಾಣಿಜ್ಯ ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ ಎರಡೂ ದೇಶಗಳಲ್ಲಿ ಇದರ ಪರಿಣಾಮ ಅನುಭವಿಸಿದ್ದು ಮಾತ್ರ ಸಾಮಾನ್ಯ ಗ್ರಾಹಕ. ಇದೀಗ ಟ್ರೇಡ್ ವಾರ್‌ಗೆ ಅಂತ್ಯ ಹಾಡಲು ಚೀನಾ ಪರೋಕ್ಷವಾಗಿ ಅಮೆರಿಕಗೆ ಆಹ್ವಾನ ನೀಡಿದೆ.

ಅಧ್ಯಕ್ಷ ಬೈಡನ್ ನಿಲುವು ಹೇಗಿದೆ..?

ಅಧ್ಯಕ್ಷ ಬೈಡನ್ ನಿಲುವು ಹೇಗಿದೆ..?

ಅಮೆರಿಕದ ನೂತನ ಅಧ್ಯಕ್ಷ ಬೈಡನ್ ಚೀನಾ ಬಗ್ಗೆ ಕೆಲವು ಆಶಾದಾಯಕ ನಿಲುವು ಹೊಂದಿದ್ದರೂ, ಅಮೆರಿಕ ಮತ್ತು ಪ್ರಜಾಪ್ರಭುತ್ವದ ದೃಷ್ಟಿಕೋನದಲ್ಲಿ ಚೀನಾ ನಿಲುವುಗಳನ್ನ ವಿರೋಧಿಸುತ್ತಾ ಬಂದಿದ್ದಾರೆ. ಉದಾಹರಣೆಗೆ ಚೀನಾದ ಕೆಲವು ಪ್ರಾಂತ್ಯಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂಬ ಆರೋಪ ಇದೆ. ಇಂತಹ ಸಂದರ್ಭದಲ್ಲಿ ಬೈಡನ್ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಹೊರತು ಟ್ರಂಪ್ ರೀತಿ ಸುಮ್ಮನೆ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಬೈಡನ್ ಸಿದ್ಧರಿಲ್ಲ. ಎರಡೂ ದೇಶಗಳ ಸಂಬಂಧ ವೃದ್ಧಿಗಾಗಿ ಬೈಡನ್ ಮುಂದಾಗುವ ಸಾಧ್ಯತೆ ಇದೆ. ಆದರೆ ಚೀನಾದ ಈಗಿನ ಹೇಳಿಕೆ ಬಗ್ಗೆ ವೈಟ್‌ಹೌಸ್ ಈವರೆಗೆ ಪ್ರತಿಕ್ರಿಯಿಸಿಲ್ಲ.

2 ಪ್ರಬಲ ಜಾಗತಿಕ ಶಕ್ತಿಗಳು..!

2 ಪ್ರಬಲ ಜಾಗತಿಕ ಶಕ್ತಿಗಳು..!

ಅಮೆರಿಕ ಮತ್ತು ಚೀನಾ ಮಧ್ಯೆ ನಂಬರ್-1 ಸ್ಥಾನಕ್ಕೆ ಪೈಪೋಟಿ ಏರ್ಪಟ್ಟು ಯಾವುದೋ ಕಾಲವಾಗಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ಘರ್ಷಣೆಗೆ ಮತ್ತೊಂದು ಕಾರಣವಾಗಿದೆ. ಚೀನಾ ಕೆಲವೇ ದಶಕಗಳಲ್ಲಿ ಅಮೆರಿಕ ಮತ್ತು ಇತರ ರಾಷ್ಟ್ರಗಳನ್ನು ಮೀರಿ ಬೆಳೆದಿದೆ. ಎಷ್ಟರಮಟ್ಟಿಗೆ ಅಂದ್ರೆ ಹಲವು ವಿಚಾರಗಳಲ್ಲಿ ಚೀನಾ ಈಗಾಗಲೇ ಅಮೆರಿಕದ ಸಾಧನೆಯನ್ನ ಮೀರಿಸಿದೆ. ಉತ್ಪಾದನಾ ವಲಯ ಹಾಗೂ ಸೇವಾ ವಲಯದಲ್ಲಿ ಬೃಹತ್ ಹಿಡಿತ ಸಾಧಿಸುತ್ತಿದೆ. ಇದು ಸಹಜವಾಗಿ ಅಮೆರಿಕದ ನಾಯಕರ ಕಣ್ಣು ಕುಕ್ಕುತ್ತಿದೆ ಎಂಬ ಆರೋಪವೂ ಇದೆ. ಹೀಗೆ ಎರಡೂ ರಾಷ್ಟ್ರಗಳ ಕಿತ್ತಾಟಕ್ಕೆ 'ನಂಬರ್-1' ಸ್ಥಾನವೂ ಕೂಡ ಕಾರಣವಾಗಿದೆ.

English summary
China asks US to stop separatists in Tibet, Hong Kong, Xinjiang & also warned to keep distance with Taiwan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X