ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ 3 ಮಕ್ಕಳ ನೀತಿಗೆ ಅಧಿಕೃತ ಅನುಮೋದನೆ

|
Google Oneindia Kannada News

ಬೀಜಿಂಗ್, ಆಗಸ್ಟ್ 20: ಚೀನಾದಲ್ಲಿ 3 ಮಕ್ಕಳ ನೀತಿಗೆ ಅಧಿಕೃತವಾಗಿ ಶುಕ್ರವಾರ ಅನುಮೋದನೆ ದೊರೆತಿದೆ.

ಚೀನಾ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡುವ ಪರಿಷ್ಕೃತ ಜನಸಂಖ್ಯಾ ಮತ್ತು ಕುಟುಂಬ ಯೋಜನಾ ಕಾನೂನು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ನ ಸ್ಥಾಯಿ ಸಮಿತಿಯಿಂದ ಅನುಮೋದನೆ ಪಡೆಯಿತು.

ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಹೆಚ್ಚಿನ ಮಕ್ಕಳನ್ನು ಹೊಂದಲು ಚೀನಾ ದಂಪತಿ ಹಿಂಜರಿಕೆಯನ್ನು ಹೋಗಲಾಡಿಸಲು ಹಾಗೂ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಕ್ರಮಗಳೊಂದಿಗೆ ಅವರ ಕಾಳಜಿಗಳನ್ನು ಪರಿಹರಿಸುವ ಉದ್ದೇಶದೊಂದಿಗೆ ತಿದ್ದುಪಡಿ ಕಾನೂನನ್ನು ಅಂಗೀಕರಿಸಲಾಗಿದೆ.

 ಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ ಚೀನಾದಲ್ಲಿ ಪ್ರತಿ ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ

ವಿಶ್ವದ ಅತ್ಯಂತ ಹೆಚ್ಚಿನ ಜನಸಂಖ್ಯೆಯಿರುವ ಚೀನಾದಲ್ಲಿ ಮಕ್ಕಳ ಜನನ ಪ್ರಮಾಣದಲ್ಲಿ ಕ್ಷೀಣತೆ ತಡೆಗಟ್ಟುವ ಗುರಿಯೊಂದಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಪ್ರಸ್ತಾಪಿತ ಮೂರು ಮಕ್ಕಳ ನೀತಿಯನ್ನು ಚೀನಾದ ರಾಷ್ಟ್ರೀಯ ಶಾಸಕಾಂಗ ಶುಕ್ರವಾರ ಅಧಿಕೃತವಾಗಿ ಅನುಮೋದಿಸಿತು.

China Approves 3 Child Policy On August 20

ಮೂರು ದಶಕಗಳಿಂದ ಜಾರಿಯಲ್ಲಿದ್ದ ಒಂದು ಮಗುವಿನ ನೀತಿಯಿಂದ 400 ಮಿಲಿಯನ್‌ಗಿಂತಲೂ ಹೆಚ್ಚು ಜನನಗಳನ್ನು ತಡೆಯಲಾಗಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

ಮಕ್ಕಳ ಬೆಳವಣಿಗೆ, ಅವರಿಗೆ ಶಿಕ್ಷಣ ವೆಚ್ಚ, ಹಣಕಾಸು, ತೆರಿಗೆಗಳು, ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗ ಸೇರಿದಂತೆ ಕುಟುಂಬಗಳ ಹೊರೆ ಕಡಿಮೆ ಮಾಡಲು ಬೆಂಬಲದ ಕ್ರಮಗಳಿಗೆ ಹೊಸ ಕಾನೂನಿನಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ರಾಜ್ಯದಿಂದ ಕಾರ್ಯನಿರ್ವಹಿಸುವ ಚೀನಾ ಡೈಲಿ ವರದಿ ಮಾಡಿದೆ.

ಈ ವರ್ಷದ ಮೇ ತಿಂಗಳಲ್ಲಿ ಆಡಳಿತಾರೂಢ ಚೀನಾದ ಕಮ್ಯೂನಿಸ್ಟ್ ಪಾರ್ಟಿ, ಎರಡು ಮಕ್ಕಳ ನೀತಿಯನ್ನು ಸಡಿಲಗೊಳಿಸಿ, ಎಲ್ಲಾ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. 2016ರಲ್ಲಿ ಎರಡು ಮಕ್ಕಳನ್ನು ಹೊಂದಲು ಚೀನಾ ಅವಕಾಶ ನೀಡಿತ್ತು.

ಜನಸಂಖ್ಯೆ ಹೆಚ್ಚಾಗಿ 1980ರ ದಶಕದಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿದ್ದ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಚೀನಾದಲ್ಲಿ ಇದೀಗ ಜನಸಂಖ್ಯೆ ಕೊರತೆ ಭೀತಿ ಎದುರಾಗಿದೆ. ಹೀಗಾಗಿ 5 ವರ್ಷಗಳ ಹಿಂದೆ ದೇಶದ ಬಹುತೇಕ ದಂಪತಿಗೆ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಆ ಮಿತಿಯನ್ನು ಮೂರಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಸೋಮವಾರ ಇಲ್ಲಿ ನಡೆದ ಪಕ್ಷದ ಪಾಲಿಟ್‌ ಬ್ಯೂರೋ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ.. ಜೊತೆಗೆ 3 ಮಕ್ಕಳನ್ನು ಹೆರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದೂ ಹೇಳಿದೆ.

ನೀತಿಗೆ ಕಾರಣ ಏನು?: 1980ರ ದಶಕದಲ್ಲಿ ಚೀನಾ ಜನಸಂಖ್ಯೆ 100 ಕೋಟಿ ಸಮೀಪಕ್ಕೆ ಬಂದಾಗ, ಸರ್ಕಾರ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿತ್ತು. ಪರಿಣಾಮ, ನಂತರದ ವರ್ಷಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿ ಯುವಸಮೂಹದ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

ಪ್ರಸ್ತಕ 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ 2022ರ ವೇಳೆಗೆ ತನ್ನ ಗರಿಷ್ಠ ಮಟ್ಟಮುಟ್ಟಿ, ಬಳಿಕ ಜನಸಂಖ್ಯೆಯಲ್ಲಿ ಇಳಿಕೆ ಕಾಣಲಿದೆ. ಇದು ಭವಿಷ್ಯದಲ್ಲಿ ಭಾರೀ ಸಮಸ್ಯೆಗೆ ಕಾರಣವಾಗಲಿದೆ ಎಂದು ಇತ್ತೀಚಿನ ವರದಿಯೊಂದು ಎಚ್ಚರಿಸಿತ್ತು. ದಶಕದ ಹಿಂದೆ ದುಡಿಯುವ ವರ್ಗ ಎಂದು ಗುರುತಿಸಲಾಗುವ 15-59ರ ವಯೋಮಿತಿ ಜನರ ಪ್ರಮಾಣವು ಒಟ್ಟು ಜನಸಂಖ್ಯೆಯಲ್ಲಿ ಶೇ.70ರಷ್ಟುಇದ್ದಿದ್ದು, ಕಳೆದ ವರ್ಷ ಶೇ.63ಕ್ಕೆ ಇಳಿದಿತ್ತು. ಇನ್ನು ಇದೇ ಅವಧಿಯಲ್ಲಿ 65 ವರ್ಷ ಮೇಲ್ಪಟ್ಟವರ ಪ್ರಮಾಣವು ಶೇ.8.9ರಿಂದ ಶೇ.13.5ಕ್ಕೆ ಹೆಚ್ಚಿತ್ತು.

ಈ ಹಿನ್ನೆಲೆಯಲ್ಲಿ 2016ರಲ್ಲಿ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಅದನ್ನು 3ಕ್ಕೆ ಹೆಚ್ಚಿಸುವ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಉದ್ಯೋಗ ಕುಸಿತ, ಮಕ್ಕಳ ಪೋಷಣೆ ಹೊರಲಾರದೇ ಬಹುತೇಕ ಯುವಜೋಡಿಗಳು 1 ಮಗುವಿಗೆ ಸೀಮಿತವಾಗುತ್ತಿರುವ ಹಿನ್ನೆಲೆಯಲ್ಲಿ 2 ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವ ದಂಪತಿಗೆ ಆರ್ಥಿಕ ನೆರವನ್ನೂ ನೀಡಲು ಸರ್ಕಾರ ನಿರ್ಧರಿಸಿದೆ.

ಯಾವಾಗ ಯಾವ ನೀತಿ?

- 1980... 1 ಮಗು

- 2016... 2 ಮಕ್ಕಳು

- 2021...3 ಮಕ್ಕಳು

ಹೊಸ ನೀತಿಗೆ ಕಾರಣ ಏನು?

- 15-59 ವಯಸ್ಸಿನ ವ್ಯಕ್ತಿಗಳ ಸಂಖ್ಯೆ 10 ವರ್ಷದಲ್ಲಿ ಶೇ.70ರಿಂದ 63ಕ್ಕೆ ಇಳಿಕೆ

- 65 ವರ್ಷ ಮೇಲ್ಪಟ್ಟವರ ಜನಸಂಖ್ಯೆ 10 ವರ್ಷದಲ್ಲಿ ಶೇ.8.9ರಿಂದ ಶೇ.13.5ಕ್ಕೆ ಹೆಚ್ಚಳ

- ಯುವಕರ ಸಂಖ್ಯೆ ಕುಸಿಯುತ್ತಿದೆ ಎಂಬುದು ಇದರ ಅರ್ಥ

- ಹೀಗಾಗಿ 3 ಮಕ್ಕಳನ್ನು ಹೆರಲು ಇನ್ನು ಅವಕಾಶ

English summary
China Approves 3 Child Policy On August 20, in a major policy shift aimed to prevent a steep decline in birth rates in the world's most populous country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X