ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚಿದ ಕೋವಿಡ್ ಪ್ರಕರಣ: ಚೀನಾದಲ್ಲಿ ಮತ್ತೆ ಲಾಕ್‌ಡೌನ್ ಜಾರಿ

|
Google Oneindia Kannada News

ಬೀಜಿಂಗ್, ಜನವರಿ 12: ಚೀನಾ ತನ್ನ ರಾಜಧಾನಿ ಬೀಜಿಂಗ್ ಸಮೀಪದ ನಗರದಲ್ಲಿ ಮಂಗಳವಾರದಿಂದ ಲಾಕ್‌ಡೌನ್ ಜಾರಿಗೆ ತಂದಿದೆ. ದೇಶದಾದ್ಯಂತ ಅನೇಕ ಭಾಗಗಳಲ್ಲಿ ಎರಡನೆಯ ಅಲೆ ತೀವ್ರಗೊಂಡಿದ್ದು, ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿದೆ. ಹೆಚ್ಚಿನ ಪ್ರಕರಣಗಳು ರಾಜಧಾನಿ ಗಡಿಯಲ್ಲಿನ ಹೆಬೀ ಪ್ರಾಂತ್ಯದ ಉತ್ತರ ಭಾಗದಲ್ಲಿ ಪತ್ತೆಯಾಗಿದೆ. ಸುಮಾರು 4.9 ಮಿಲಿಯನ್ ನಿವಾಸಿಗಳು ಲಾಕ್‌ಡೌನ್‌ಗೆ ಒಳಪಟ್ಟಿದ್ದಾರೆ.

ಲಾಂಗ್‌ಫ್ಯಾಂಗ್ ನಗರದಲ್ಲಿ ಮಂಗಳವಾರ ಲಾಕ್‌ಡೌನ್ ಘೋಷಿಸಲಾಗಿದೆ. ಒಂದು ವಾರದವರೆಗೆ ನಿವಾಸಿಗಖನ್ನು ಮನೆಯಲ್ಲಿಯೇ ಕ್ವಾರೆಂಟೈನ್‌ಗೆ ಒಳಪಡಿಸಲಾಗುತ್ತಿದ್ದು, ಅವರನ್ನು ಸಾಮೂಹಿಕ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಈ ಲಸಿಕೆಯಿಂದ 73 ಅಡ್ಡಪರಿಣಾಮ ಎಂದ ತಜ್ಞ; ಗಂಟೆಗಳಲ್ಲೇ ಪೋಸ್ಟ್ ಮಾಯಚೀನಾದ ಈ ಲಸಿಕೆಯಿಂದ 73 ಅಡ್ಡಪರಿಣಾಮ ಎಂದ ತಜ್ಞ; ಗಂಟೆಗಳಲ್ಲೇ ಪೋಸ್ಟ್ ಮಾಯ

ಹೆಬೀ ಪ್ರಾಂತ್ಯದ ಗ್ರಾಮದಲ್ಲಿ ಸುಮಾರು 305 ರೈತರಲ್ಲಿ ಕೋವಿಡ್-19 ದೃಢಪಟ್ಟಿದ್ದು, ಗ್ರಾಮದ ಶೇ 75ರಷ್ಟು ಜನರಲ್ಲಿ ಸೋಂಕು ಹರಡಿರುವ ಶಂಕೆ ಇದೆ. ಸೋಂಕಿನ ಹೊಸ ಅಲೆ ಶುರುವಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

China Announces Lockdown In City Of Hebei Province After Covid-19 Surge

ಬೀಜಿಂಗ್ ಗಡಿಭಾಗದಲ್ಲಿರುವ ಲ್ಯಾಂಗ್‌ಫ್ಯಾಂಗ್‌ನ ವ್ಯಾಪ್ತಿಯಲ್ಲಿನ ಗೌನ್ ಮತ್ತು ಸಾನ್ಹೆ ಗ್ರಾಮಗಳಲ್ಲಿ ಈಗಾಗಲೇ ಹೋಮ್ ಕ್ವಾರೆಂಟೈನ್ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

11 ಮಿಲಿಯನ್ ಜನಸಂಖ್ಯೆಯಿರುವ ಶಿಜಿಯಾಝೌಂಗ್‌ನಲ್ಲಿ ಮತ್ತು ಏಳು ಮಿಲಿಯನ್‌ಗೂ ಅಧಿಕ ಜನಸಂಖ್ಯೆಯಿರುವ ಕ್ಸಿಂಗ್ಟೈಗಳಲ್ಲಿ ಕೂಡ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಜನರು ಅನಗತ್ಯವಾಗಿ ಮನೆಯಿಂದ ಹೊರಬರುವಂತಿಲ್ಲ.

English summary
China has announced lockdown for 20 million residence in three cities of Hebei province after a new wave of infection spreads covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X