ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ v/s ಅಮೆರಿಕ ರಾಜತಾಂತ್ರಿಕ ''ನಿರ್ಬಂಧ'' ಯುದ್ಧ..!

|
Google Oneindia Kannada News

ಚೀನಾ-ಅಮೆರಿಕ ಮಧ್ಯೆ ರಾಜತಾಂತ್ರಿಕ ಯುದ್ಧ ಬೀದಿ ಕಾಳಗವಾಗಿ ಮಾರ್ಪಟ್ಟಿದೆ. ಅತ್ತ ತನ್ನ ರಾಜತಾಂತ್ರಿಕ ಅಧಿಕಾರಿಗಳ ಮೇಲೆ ಅಮೆರಿಕ ವಿಧಿಸಿದ ನಿರ್ಬಂಧಗಳಿಗೆ ವಿರುದ್ಧವಾಗಿ ಚೀನಾ ಕೂಡ ಅಂತಹದ್ದೇ ನಿರ್ಬಂಧ ವಿಧಿಸಲು ಮುಂದಾಗಿದೆ. ವಾಷಿಂಗ್ಟನ್‌ನ ಚೀನಾ ರಾಯಭಾರ ಕಚೇರಿಯ ಸಿಬ್ಬಂದಿ ಮೇಲೆ ಅಮೆರಿಕ ನಾನಾ ನಿರ್ಬಂಧಗಳನ್ನು ವಿಧಿಸಿದೆ.

ಅಮೆರಿಕದ ಚೀನಾ ರಾಯಭಾರ ಕಚೇರಿ ಅಧಿಕಾರಿಗಳು ವಿಶ್ವ ವಿದ್ಯಾಲಯಗಳಿಗೆ ಭೇಟಿ ನೀಡಲು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ಅನುಮತಿಯನ್ನು ಪಡೆಯಬೇಕೆಂಬ ನಿರ್ಬಂಧ ಹೇರಲಾಗಿದೆ. ಅಲ್ಲದೆ 50 ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಅಗತ್ಯವಾಗಿದೆ. ಇಂತಹ ನಿಕೃಷ್ಟ ನಿರ್ಬಂಧಗಳಿಂದ ಕೆರಳಿ ಕೆಂಡವಾಗಿರುವ ಚೀನಾ, ತನ್ನ ದೇಶದಲ್ಲೂ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿ ಮೇಲೆ ಇಂತಹದ್ದೇ ನಿರ್ಬಂಧ ಹೇರಲು ಮುಂದಾಗಿದೆ.

ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..! ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!

ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಅಮೆರಿಕದಲ್ಲಿ ರಾಯಭಾರ ಕಚೇರಿ ಸಿಬ್ಬಂದಿ ಅಧಿಕಾರಕ್ಕೆ ಅಡ್ಡಿ ಮಾಡಿರುವುದು ಖಂಡನೀಯ ಎಂದು ಎಚ್ಚರಿಸಿದೆ. ಅಲ್ಲದೆ ಚೀನಾ ಹಾಗೂ ಹಾಂಕಾಂಗ್‌ನಲ್ಲಿರುವ ಅಮೆರಿಕದ ರಾಜತಾಂತ್ರಿಕ ಸಿಬ್ಬಂದಿ ಮೇಲೆ ಹಲವು ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಇದು ಎರಡು ದೈತ್ಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಮತ್ತೆ ಕಿಚ್ಚು ಹಚ್ಚಿದೆ.

China Announced Restrictions On Activities Of US Diplomats

ವಾಣಿಜ್ಯ ಯುದ್ಧ v/s ರಾಜತಾಂತ್ರಿಕ ಯುದ್ಧ..!

ಅಮೆರಿಕ ಹಾಗೂ ಚೀನಾ ನಡುವೆ ವಾಣಿಜ್ಯ ಯುದ್ಧ ಆರಂಭವಾಗಿ ವರ್ಷಗಳೇ ಕಳೆದಿವೆ. ಎರಡೂ ರಾಷ್ಟ್ರಗಳು ಪರಸ್ಪರ ತೆರಿಗೆ ಸಮರವನ್ನೇ ಸಾರಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಸ್ತುಗಳ ಮೇಲೆ ಭಾರಿ ಪ್ರಮಾಣದ ತೆರಿಗೆ ಹೇರುವ ಮೂಲಕ ಚೀನಾ ನಾಯಕರನ್ನು ಕೆರಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚೀನಾ ಸರ್ಕಾರ ಅಮೆರಿಕದ ಸರಕುಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿತ್ತು. ಇದು ವಾಣಿಜ್ಯ ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ ಎರಡೂ ದೇಶಗಳಲ್ಲಿ ಇದರ ಪರಿಣಾಮ ಅನುಭವಿಸಿದ್ದು ಮಾತ್ರ ಸಾಮಾನ್ಯ ಗ್ರಾಹಕ. ಈಗ ಎರಡೂ ದೇಶಗಳ ರಾಜತಾಂತ್ರಿಕ ಯುದ್ಧದಿಂದ ಬಡಪಾಯಿ ಅಧಿಕಾರಿಗಳು ಅಪ್ಪಚ್ಚಿಯಾಗುತ್ತಿದ್ದಾರೆ.

ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..! ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!

ಹ್ಯೂಸ್ಟನ್ ಬಳಿಕ ಮತ್ತೊಂದು ರದ್ಧಾಂತ..!

Recommended Video

ಸುಳ್ಳು ಹೇಳಿ ತಗಲಾಕೊಂಡ ಚೀನಾ..! ಇದೆಲ್ಲಾ ಬೇಕಿತ್ತಾ..? | Oneindia Kannada

ಕಳೆದ ಜುಲೈನಲ್ಲಿ ಇದೇ ರೀತಿ ಅಮೆರಿಕ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಕಚ್ಚಾಟ ದೊಡ್ಡ ಮಟ್ಟಕ್ಕೆ ತಿರುಗಿತ್ತು. ಆಗ ಹ್ಯೂಸ್ಟನ್‌ನಲ್ಲಿನ ಚೀನಾ ರಾಯಭಾರ ಕಚೇರಿ ಮುಚ್ಚಲು ಅಮೆರಿಕ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಚೀನಾದ ನೈರುತ್ಯ ನಗರ ಚೆಂಗ್ಡುನಲ್ಲಿರುವ ಅಮೆರಿಕಾ ದೂತಾವಾಸ ಕಚೇರಿಗೆ ಬೀಗ ಜಡಿದು ಸೇಡು ತೀರಿಸಿಕೊಳ್ಳಲು ಚೀನಾ ಮುಂದಾಗಿತ್ತು. ಹೀಗೆ ಎರಡೂ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಮ್ಮ ಮಾನ ತಾವೇ ಹರಾಜು ಹಾಕಿಕೊಂಡಿದ್ದವು. ಈಗ ಕೆಸರೆರಚಾಟ ಮತ್ತೆ ನಡೆಯುತ್ತಿದ್ದು, ಕೊರೊನಾ ಜಗತ್ತಿನ ಆರ್ಥಿಕತೆಯನ್ನು ಬಾಧಿಸುತ್ತಿರುವಾಗಲೇ 2 ದೈತ್ಯ ರಾಷ್ಟ್ರಗಳ ಕಚ್ಚಾಟ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಮುನ್ಸೂಚನೆ ಸಿಕ್ಕಂತಾಗಿದೆ.

English summary
China announced restrictions on activities of US diplomats working on the mainland China, Hong Kong. It is reflection of America decision about china diplomats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X