ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದೊಂದಿಗೆ ಶೇಕಡಾ 71ರಷ್ಟು ವಹಿವಾಟು ಹೆಚ್ಚಳ: ಚೀನಾ ಕಸ್ಟಮ್ಸ್ ಅಂಕಿಅಂಶ ಉಲ್ಲೇಖ

|
Google Oneindia Kannada News

ನವದೆಹಲಿ, ಜೂನ್ 8: ಕಳೆದ ಒಂದು ವರ್ಷದಿಂದೀಚೆಗೆ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಕಳೆದ ವರ್ಷ ಚೀನಾದ ಕೆಲ ಕಂಪನಿಗಳ ವಿರುದ್ಧ ಭಾರತ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡು ನಿಷೇಧ ಕೂಡ ಮಾಡಿತ್ತು. ಆದರೆ ಚೀನಾ ಕಸ್ಟಮ್ಸ್ ಈ ವರ್ಷ ಭಾರತದೊಂದಿಗಿನ ವಹಿವಾಟಿನ ಬಗ್ಗೆ ಅಂಕಿಅಂಶವನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ 2021ರ ಅವಧಿಯಲ್ಲಿ 71 ಶೇಕಡಾದಷ್ಟು ಹೆಚ್ಚಿನ ವಹಿವಾಟನ್ನು ಭಾರತದೊಂದಿಗೆ ಚೀನಾ ಮಾಡಿದೆ ಎಂದು ಬಹಿರಂಗಪಡಿಸಿದೆ.

ಇನ್ನು ಈ ವ್ಯವಹಾರ ಭಾರೀ ಪ್ರಮಾಣದ ಹೆಚ್ಚಳಕ್ಕೆ ಕಾರಣವನ್ನು ಕೂಡ ಈ ಅಂಕಿಅಂಶ ನೀಡುತ್ತಿದೆ. ಎರಡನೇ ಅಲೆ ಭಾರತದಲ್ಲಿ ಸಾಕಷ್ಟು ಪರಿಣಾಮ ಬೀರಿದ ಕಾರಣ ವೈದ್ಯಕೀಯ ಸಲಕರಣೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಭಾರತ ಚೀನಾದಿಂದ ಆಮದು ಮಾಡಿಕೊಂಡಿತು. ಹೀಗಾಗಿ 2021ರ ಮೊದಲ ಐದು ತಿಂಗಳಲ್ಲಿ ಭಾರತ ಹಾಗೂ ಚೀನಾ ನಡುವೆ 48 ಬಿಲಿಯನ್ ಡಾಲರ್‌ಗೂ ಅಧಿಕ ವ್ಯವಹಾರಗಳು ನಡೆದಿವೆ ಎಂದು ಚೀನಾ ಕಸ್ಟಮ್ಸ್ ಇಲಾಖೆ ತಿಳಿಸಿದೆ.

ವುಹಾನ್‌ ಲ್ಯಾಬ್‌ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್‌ ಅಧ್ಯಯನದ ಅಂತಿಮ ತೀರ್ಮಾನವುಹಾನ್‌ ಲ್ಯಾಬ್‌ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್‌ ಅಧ್ಯಯನದ ಅಂತಿಮ ತೀರ್ಮಾನ

ಭಾರತ ಹಾಗೂ ಚೀನಾ ನಡುವಿನ ವ್ಯವಹಾರಗಳಲ್ಲಿನ ಈ ಬೆಳವಣಿಗೆಯನ್ನು ಚೀನಾ ಮಾಧ್ಯಮಗಳು "ಅದ್ಭುತವಾದ ಬೆಳವಣಿಗೆ" ಎಂದು ಹೇಳಿಕೊಂಡಿದೆ. ಗಡಿಯಲ್ಲಿನ ಸಂಘರ್ಷ ಹಾಗೂ ರಾಜಕೀಯ ಭಿನ್ನಾಭಿಪ್ರಾಯದ ಮಧ್ಯೆಯೂ ಎರಡು ದೇಶಗಳ ದ್ವಿಪಕ್ಷೀಯ ಮುಂದುವರಿದಿರುವುದು ಪ್ರಮುಖ ಸಂಗತಿ ಎಂದು ಉಲ್ಲೇಖಿಸಿದೆ.

71 ಶೇಕಡಾ ವ್ಯವಹಾರ ಹೆಚ್ಚಳ

71 ಶೇಕಡಾ ವ್ಯವಹಾರ ಹೆಚ್ಚಳ

ಗ್ಲೋಬಲ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದ್ದು "ಭಾರತ ಹಾಗೂ ಚೀನಾ ನಡುವಿನ ವ್ಯವಹಾರಗಳು ಈ ವರ್ಷದ ಮೊದಲ ಐದು ತಿಂಗಳಿನಲ್ಲಿ 71 ಶೇಕಡಾ ಹೆಚ್ಚಾಗಿದೆ. 48.16 ಬಿಲಿಯನ್‌ ಡಾಲರ್‌ನಷ್ಟು ವ್ಯವಹಾರಗಳು ಈ ಎರಡು ದೇಶಗಳ ನಡುವೆ ನಡೆದಿದೆ ಎಂದು ಚೀನಾ ಕಸ್ಟಮ್ಸ್ ಸೋಮವಾರ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಭಾರತಕ್ಕೆ ಚೀನಾದ ರಪ್ತು ಪ್ರಮಾಣ 64 ಶೇಕಡಾ ಹೆಚ್ಚಾಗಿದೆ. ಭಾರತದಿಂದ ಚೀನಾಗೆ ಆಮದು ಪ್ರಮಾಣ 90 ಶೇಕಡಾ ಹೆಚ್ಚಾಗಿದೆ" ಎಂದು ಗ್ಲೋಬಲ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.

ಏಪ್ರಿಲ್-ಮೇ ಅವಧಿಯಲ್ಲಿ ಹೆಚ್ಚಿನ ವಹಿವಾಟು

ಏಪ್ರಿಲ್-ಮೇ ಅವಧಿಯಲ್ಲಿ ಹೆಚ್ಚಿನ ವಹಿವಾಟು

ಚೀನಾದ ಜನರಲ್ ಅಡ್ಮಿನಿಸ್ಟ್ರೇಶನ್ ಆಫ್ ಕಸ್ಟಮ್ಸ್(GAC) ಈ ಅಂಕಿಅಂಶಗಳನ್ನು ಸೋಮವಾರ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಅಂಕಿಅಂಶಗಳ ಪ್ರಕಾರ ಏಪ್ರಿಲ್ ಹಾಗೂ ಮೇ ಅವಧಿಯಲ್ಲಿ ಈ ವ್ಯವಹಾರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೊರೊನಾ ವಿರುದ್ಧದ ಹೋರಾಟಕ್ಕೆ ಸಲಕರಣೆಗಳ ಖರೀದಿ

ಕೊರೊನಾ ವಿರುದ್ಧದ ಹೋರಾಟಕ್ಕೆ ಸಲಕರಣೆಗಳ ಖರೀದಿ

2021ರ ಮೊದಲ ತ್ರೈಮಾಸಿಕದಲ್ಲಿ ಏಪ್ರಿಲ್‌ವರೆಗೆ ಚೀನಾ ಮತ್ತು ಭಾರತದ ನಡುವಿನ ಸರಕುಗಳ ದ್ವಿಪಕ್ಷೀಯ ವ್ಯಾಪಾರದ ಒಟ್ಟು ಪ್ರಮಾಣವು 27.7 ಬಿಲಿಯನ್ ಡಾಲರ್‌ಗೆ ತಲುಪಿತ್ತು. ನಂತರ ಭಾರತದಲ್ಲಿ ಕೊರೊನಾವೈರಸ್‌ನ ಎರಡನೇ ಅಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲು ಆರಂಭವಾಗಿತ್ತು. ಹೀಗಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಅಗತ್ಯವಾಗಿರುವ ಸಾಮಾಗ್ರಿಗಳಿಗಾಗಿ ಭಾರತದ ಕಂಪನಿಗಳು ಚೀನಾ ಜೊತೆಗೆ ಹೆಚ್ಚಿನ ವ್ಯವಹಾರವನ್ನು ನಡೆಸಿದವು.

ಕಳೆದ ವರ್ಷ ವ್ಯವಹಾರದಲ್ಲಿ ಕುಸಿತ

ಕಳೆದ ವರ್ಷ ವ್ಯವಹಾರದಲ್ಲಿ ಕುಸಿತ

ಭಾರತ ಹಾಗೂ ಚೀನಾ ನಡುವಿನ ಸಂಬಂಧ ತೀವ್ರ ಹದಗೆಟ್ಟ ಪರಿಣಾಮವಾಗಿ 2020ರಲ್ಲಿ ವ್ಯಾಪಾರ ವಹಿವಾಟಿನಲ್ಲಿ 5.6 ಶೇಕಡಾ ಕುಸಿತವಾಗಿತ್ತು. 2017ರ ಬಳಿಕ ಇದು ಕನಿಷ್ಠ ವ್ಯವಹಾರವಾಗಿತ್ತು. ಹಾಗಿದ್ದರೂ 87.6 ಬಿಲಿಯನ್ ಡಾಲರ್ ವಹಿವಾಟಿನೊಂದಿಗೆ ಅಮೆರಿಕವನ್ನು ಹಿಂದಿಕ್ಕಿ ಭಾರತದ ದೊಡ್ಡ ವ್ಯವಹಾರ ಪಾಲುದಾರ ಎನಿಸಿಕೊಳ್ಳುವಲ್ಲಿ ಚೀನಾ ಯಶಸ್ವಿಯಾಗಿತ್ತು.

English summary
China's customs statistics shows that trade with India increased by more than 70% in 2021.know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X