ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ಗೆ ಔಷಧ ಅಭಿವೃದ್ಧಿಪಡಿಸಿದ ಚೀನಾ

|
Google Oneindia Kannada News

ಬೀಜಿಂಗ್, ಫೆಬ್ರವರಿ 19: ನವ ಕೊರೊನಾ ವೈರಸ್ (ಕೋವಿಡ್-19) ಚಿಕಿತ್ಸೆಗೆ ಲಸಿಕೆ ಮತ್ತು ನಿರ್ದಿಷ್ಟ ಔಷಧ ಅಭಿವೃದ್ಧಿಪಡಿಸಿದ ಮೊದಲ ದೇಶಗಳಲ್ಲಿ ಚೀನಾ ಒಂದೆನಿಸಲಿದೆ ಎಂದು ಚೀನಾದ ಹಿರಿಯ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.

'ಚೀನಾದ ಜನರ ಆರೋಗ್ಯ ಸುರಕ್ಷತೆಗಾಗಿ ಹಾಗೂ ಜಾಗತಿಕ ಸಾರ್ವಜನಿಕ ಆರೋಗ್ಯದ ಒಳಿತಿಗಾಗಿ ನಾವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಚೀನಾದ ಗೆಲುವು ಜಗತ್ತಿನ ಗೆಲುವೂ ಹೌದು' ಎಂದು ಯುಎಇದಲ್ಲಿನ ಚೀನಾದ ರಾಯಭಾರಿ ನಿ ಜಿಯಾನ್ ಹೇಳಿದ್ದಾರೆ.

ಕೊರೊನಾ ಮಾರಿಗೆ ಬಲಿಯಾದರು ಎರಡು ಸಾವಿರ ಚೀನಿಯರುಕೊರೊನಾ ಮಾರಿಗೆ ಬಲಿಯಾದರು ಎರಡು ಸಾವಿರ ಚೀನಿಯರು

ಕೊರೊನಾ ವೈರಸ್‌ಅನ್ನು ಸಮರ್ಥವಾಗಿ ಎದುರಿಸುವಂತಹ ಮೂರು ಬಗೆಯ ಔಷಧಗಳನ್ನು ಚೀನಾದ ಸಂಶೋಧಕರು ಕಂಡುಕೊಂಡಿದ್ದಾರೆ. ಹಾಗೆಯೇ ಅತ್ಯಾಧುನಿಕ ಲಸಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ತಂಡಗಳು ಸತತವಾಗಿ ಪ್ರಯತ್ನ ನಡೆಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

12,000ಕ್ಕೂ ಹೆಚ್ಚು ಜನರು ಗುಣಮುಖ

12,000ಕ್ಕೂ ಹೆಚ್ಚು ಜನರು ಗುಣಮುಖ

ಫೆ. 18ರವರೆಗೂ 12,000ಕ್ಕೂ ಅಧಿಕ ರೋಗಿಗಳು ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಇದರಿಂದ ಸಾವಿನ ಸಂಖ್ಯೆಯ ವೇಗ ತಗ್ಗಿದೆ. ಹುಬೆಯಿ ಪ್ರಾಂತ್ಯದ ಹೊರಗಿನ ಭಾಗಗಳಲ್ಲಿ ಕಳೆದ 14 ದಿನಗಳಿಂದ ಹೊಸದಾಗಿ ದೃಢಪಟ್ಟಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಕೂಡ ಇಳಿದಿದೆ. ಈ ಮಾರಕ ವೈರಾಣುವನ್ನು ನಿಯಂತ್ರಿಸಲು ಚೀನಾ ವ್ಯಾಪಕ ಪ್ರಯತ್ನ ನಡೆಸಿದೆ ಎಂದು ಜಿಯಾನ್ ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಸಮಾಲೋಚನೆ

ಕೊರೊನಾ ನಿಯಂತ್ರಣಕ್ಕೆ ಸಮಾಲೋಚನೆ

ಯುಎಇಯಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮತ್ತು ಚೀನಾದಿಂದ ಬರುವ ಚೀನೀ ಪ್ರಯಾಣಿಕರಿಗೆ ಸಂಬಂಧಿಸಿದಂತೆ ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಮತ್ತು ಅಬುದಾಬಿಯಲ್ಲಿನ ಚೀನಾದ ರಾಯಭಾರ ಕಚೇರಿಯು ಯುಎಇ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದೆ ಎಂದು ಹೇಳಿದ್ದಾರೆ.

ಕೋಳಿ ಉದ್ಯಮಕ್ಕೆ ಬರೆ ಎಳೆದ ಕೊರೊನಾ: 10 ಕೋಟಿ ರೂ. ನಷ್ಟ

ಸಹಕಾರ ನೀಡಲು ಜನರಿಗೆ ಸೂಚನೆ

ಸಹಕಾರ ನೀಡಲು ಜನರಿಗೆ ಸೂಚನೆ

ಚೀನಾ ರಾಯಭಾರ ಕಚೇರಿಯು ಅನೇಕ ನೋಟಿಸ್‌ಗಳನ್ನು ಹೊರಡಿಸಿದ್ದು, ಯುಎಇ ಕೋರುವ ಎಲ್ಲ ವಲಸೆ ಮತ್ತು ಆರೋಗ್ಯ ತಪಾಸಣಾ ಕ್ರಮಗಳಿಗೆ ಸಹಕಾರ ನೀಡುವಂತೆ ಚೀನಾದ ಪ್ರಜೆಗಳಿಗೆ ಮನವಿ ಮಾಡಿದೆ. ಚೀನಾದಿಂದ ಇತ್ತೀಚೆಗೆ ದುಬೈಗೆ ಮರಳಿದ ಹಾಗೂ ಚೀನಾಕ್ಕೆ ಭೇಟಿ ನೀಡಿದವರನ್ನು 14 ದಿನಗಳವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ. ಅವರಲ್ಲಿ ಜ್ವರ, ಕೆಮ್ಮು, ಗಂಟಲು ನೋವು ಅಥವಾ ಉಸಿರಾಟದ ಸಮಸ್ಯೆಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಇಂಗಾಲದ ಹೊರ ಉಗುಳುವಿಕೆ ಇಳಿಕೆ

ಇಂಗಾಲದ ಹೊರ ಉಗುಳುವಿಕೆ ಇಳಿಕೆ

ಕಳೆದ ಎರಡು ವಾರಗಳಲ್ಲಿ ಚೀನಾದಲ್ಲಿ ಕನಿಷ್ಠ 100 ಮಿಲಿಯನ್ ಮೆಟ್ರಿಕ್‌ ಟನ್‌ನಷ್ಟು ಇಂಗಾಲದ ಹೊರಸೂಸುವಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಫಿನ್ಲೆಂಡ್‌ನಲ್ಲಿನ ಇಂಧನ ಮತ್ತು ಸ್ವಚ್ಛ ವಾಯು ಸಂಶೋಧನಾ ಕೇಂದ್ರದ ಅಧ್ಯಯನ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿನ ಜಾಗತಿಕ ಇಂಗಾಲ ಹೊರಸೂಸುವಿಕೆಯಲ್ಲಿ ಚೀನಾ ಸುಮಾರು ಶೇ 6ರಷ್ಟು ಪಾಲಿನಷ್ಟು ಭಾಗ ಇಳಿಕೆಯಾಗಿದೆ. ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಉತ್ಪಾದನೆಯ ಪ್ರಮಾಣ ಶೇ 15-40ರಷ್ಟು ತಗ್ಗಿದೆ ಎಂದು ತಿಳಿಸಿದೆ.

English summary
Chinese Ambassador to UAE said that China will be among first countries to develop coronavirus vaccine and drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X