ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಚಿಕಿತ್ಸೆಗಾಗಿ ಒಂದೇ ವಾರದಲ್ಲಿ ಹೊಸ ಆಸ್ಪತ್ರೆಯನ್ನೇ ನಿರ್ಮಿಸಲಿದೆ ಚೀನಾ

|
Google Oneindia Kannada News

ಬೀಜಿಂಗ್, ಜನವರಿ 27: ಕೊರೊನಾ ವೈರಸ್‌ನ ಭೀಕರ ದಾಳಿಯಿಂದ ತತ್ತರಿಸಿರುವ ಚೀನಾ, ವೈರಸ್ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ನೀಡಲೆಂದೇ ತ್ವರಿತ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭಿಸಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಅದು ಹಾಕಿಕೊಂಡಿರುವ ಸಮಯ ಮಿತಿ ಎಷ್ಟು ಗೊತ್ತೇ? ಕೇವಲ ಒಂದು ವಾರ!

ಮಾರಕ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಸುಸಜ್ಜಿತ ಆಸ್ಪತ್ರೆಯೊಂದನ್ನು ಒಂದೇ ವಾರದಲ್ಲಿ ನಿರ್ಮಿಸುವ ಸಾಹಸಕ್ಕೆ ಚೀನಾ ಸರ್ಕಾರ ಕೈಹಾಕಿದೆ. ಒಂದು ಸಾವಿರ ಮಂದಿಗೆ ಚಿಕಿತ್ಸೆ ನೀಡುವಷ್ಟು ಈ ಆಸ್ಪತ್ರೆ ದೊಡ್ಡದಾಗಿರಲಿದೆ.

ಮಾರಕ ಕೊರೊನಾ ವೈರಸ್‌ಗೆ ಚೀನಾದ ಬಾವಲಿ ಸೂಪ್ ಕಾರಣ?ಮಾರಕ ಕೊರೊನಾ ವೈರಸ್‌ಗೆ ಚೀನಾದ ಬಾವಲಿ ಸೂಪ್ ಕಾರಣ?

ದೇಶದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಹೆಚ್ಚುತ್ತಿರುವುದರಿಂದ, ಸಾವಿನ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಯ ಕಾರಿಡಾರ್‌ಗಳ ಮೇಲೆಯೇ ರೋಗಿಗಳು ಮಲಗಿರುವ ದೃಶ್ಯಗಳು ಸಾಮಾನ್ಯವಾಗಿವೆ. ಲಕ್ಷಾಂತರ ಮಂದಿ ಸೋಂಕಿನ ಬಗ್ಗೆ ಗಾಬರಿಗೊಂಡಿದ್ದಾರೆ. ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಎಚ್ಚರಿಕೆ ನೀಡಿದ್ದಾರೆ. ಈ ಸವಾಲುಗಳನ್ನು ಎದುರಿಸಲು ಚೀನಾ ಶರವೇಗದ ಆಸ್ಪತ್ರೆ ನಿರ್ಮಾಣದ ಗುರಿ ಹೊಂದಿದೆ.

ಕೆಲವು ಗಂಟೆಯಲ್ಲೇ ಆರಂಭ

ಕೆಲವು ಗಂಟೆಯಲ್ಲೇ ಆರಂಭ

1,300 ಹಾಸಿಗೆಯುಳ್ಳ ಆಸ್ಪತ್ರೆಯೊಂದನ್ನು ನಿರ್ಮಿಸುತ್ತಿರುವುದಾಗಿ ವುಹಾನ್ ನಗರ ಆಡಳಿತ ಶುಕ್ರವಾರ ತಿಳಿಸಿತ್ತು. ಈ ಘೋಷಣೆಮಾಡಿ ಕೆಲವು ಗಂಟೆಗಳಲ್ಲಿಯೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿರುವ ದೃಶ್ಯ ಸರ್ಕಾರಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಕೊರೊನಾ ವೈರಸ್‌ಗಾಗಿ ಮಾತ್ರ

ಕೊರೊನಾ ವೈರಸ್‌ಗಾಗಿ ಮಾತ್ರ

ಹನ್ನೆರಡಕ್ಕೂ ಅಧಿಕ ಬೃಹತ್ ಯಂತ್ರಗಳು ಮಣ್ಣು ಅಗೆಯುವ ಮತ್ತು ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಕಾರ್ಯಗಳನ್ನು ನಡೆಸುತ್ತಿವೆ. ಈ ಆಸ್ಪತ್ರೆಯನ್ನು ಕೊರೊನಾ ವೈರಸ್ ಸಂಬಂಧಿ ಚಿಕಿತ್ಸೆಗೆ ಮಾತ್ರ ಬಳಸಲಾಗುತ್ತದೆ. ರೋಗಿಗಳಿಗೆ ಎದುರಾಗಿರುವ ವೈದ್ಯಕೀಯ ಚಿಕಿತ್ಸಾ ಸೌಲಭ್ಯದ ಕೊರತೆಯನ್ನು ನೀಗಿಸಲು ಮತ್ತು ಚಿಕಿತ್ಸಾ ಸಾಮರ್ಥ್ಯವನ್ನು ಹೆಚ್ಚಿಸಲು ಈ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಚೀನಾದ ಮಾಧ್ಯಮಗಳು ತಿಳಿಸಿವೆ.

ಚೀನಾದಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ವೈರಸ್ ಪತ್ತೆ?ಚೀನಾದಿಂದ ಬೆಂಗಳೂರಿಗೆ ಬಂದ ಇಬ್ಬರಲ್ಲಿ ಕೊರೊನಾ ವೈರಸ್ ಪತ್ತೆ?

ಸಾರ್ಸ್ ಆಸ್ಪತ್ರೆ ಮಾದರಿ ಕಟ್ಟಡ

ಬೀಜಿಂಗ್‌ನಲ್ಲಿ ಸಾರ್ಸ್ ವೈರಸ್ ಚಿಕಿತ್ಸೆಗಾಗಿ ಆಸ್ಪತ್ರೆ ನಿರ್ಮಿಸಲಾಗಿತ್ತು. ಮಾರಕ ಸಾರ್ಸ್ ವೈರಸ್ ದೇಶದಾದ್ಯಂತ ಭೀಕರತೆ ಸೃಷ್ಟಿಸಿದ ಸಂದರ್ಭದಲ್ಲಿ ಅದರ ಚಿಕಿತ್ಸೆಗೆಂದೇ ವಿಶೇಷ ಆಸ್ಪತ್ರೆ ನಿರ್ಮಿಸಲಾಗಿತ್ತು. ಈ ಆಸ್ಪತ್ರೆಯಲ್ಲಿ ಪ್ರತ್ಯೇಕ ವೈಯಕ್ತಿಕ ಘಟಕಗಳಿದ್ದು, ಸಣ್ಣ ಸಣ್ಣ ಕ್ಯಾಬಿನ್‌ಗಳಂತೆ ಕಾಣುವ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಈಗ ಕೊರೊನಾ ಆಸ್ಪತ್ರೆಯೂ ಅದೇ ಮಾದರಿಯಲ್ಲಿ ಇರಲಿದೆ.

ಸಿದ್ಧ ಮಾದರಿ ಉಪಕರಣಗಳ ಅಳವಡಿಕೆ

ಸಿದ್ಧ ಮಾದರಿ ಉಪಕರಣಗಳ ಅಳವಡಿಕೆ

ಕೊರೊನಾ ವೈರಸ್ ಚಿಕಿತ್ಸಾ ಆಸ್ಪತ್ರೆಯು ಸಿದ್ಧ ಮಾದರಿ ವಸ್ತುಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣ ಸ್ಥಳಕ್ಕೆ ತರುವಾಗಲೇ ಸಂರಚನೆಗಳನ್ನು ಜೋಡಣೆ ಮಾಡಲಾಗಿರುತ್ತದೆ. ಇದರಿಂದ ಅವುಗಳ ಅಳವಡಿಕೆ ಸುಲಭವಾಗಲಿದೆ. ವೇಗವಾಗಿ ಕೆಲಸಗಳನ್ನು ಪೂರೈಸುವುದರಲ್ಲಿ ಚೀನಾ ದಾಖಲೆ ಮಾಡಿದೆ. ಇಂತಹ ನಿರ್ಮಾಣ ಯೋಜನೆಗಳಲ್ಲಿಯೂ ಅದು ಮುಂದಿದೆ ಎಂದು ಆರೋಗ್ಯ ಸಮಿತಿಯ ಅಧಿಕಾರಿ ಯಾನ್‌ಝೋಂಗ್ ಹುವಾಂಗ್ ತಿಳಿಸಿದ್ದಾರೆ.

ರಾಜಸ್ಥಾನ ಹಾಗೂ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿರಾಜಸ್ಥಾನ ಹಾಗೂ ಬಿಹಾರದಲ್ಲಿ ಕೊರೊನಾ ವೈರಸ್ ಭೀತಿ

19 ದಿನಗಳಲ್ಲಿ 57 ಮಹಡಿ ಕಟ್ಟಡ

19 ದಿನಗಳಲ್ಲಿ 57 ಮಹಡಿ ಕಟ್ಟಡ

2015ರಲ್ಲಿ ಚೀನಾದ ಕಾರ್ಮಿಕರು ಕೇವಲ 19 ದಿನಗಳಲ್ಲಿ 57 ಮಹಡಿ ಕಟ್ಟಡವನ್ನು ನಿರ್ಮಿಸಿದ್ದರು. 2018ರಲ್ಲಿ 1500 ಕಾರ್ಮಿಕರು ಆಗ್ನೇಯ ಚೀನಾದಲ್ಲಿ ಕೇವಲ ಒಂಬತ್ತು ಗಂಟೆಯಲ್ಲಿ ಹೊಸ ರೈಲ್ವೆ ನಿಲ್ದಾಣಕ್ಕೆ ಹಳಿಗಳನ್ನು ಹಾಕಿ ಸಿದ್ಧಪಡಿಸಿದ್ದರು. ಆಸ್ಪತ್ರೆ ನಿರ್ಮಾಣ ಕಾರ್ಯ ಸುಲಭವೇನೂ ಅಲ್ಲ. ಅನೇಕ ತಾಂತ್ರಿಕ ಸಮಸ್ಯೆಗಳಿವೆ. ಜತೆಗೆ ಉಪಕರಣಗಳು, ಸಾಧನಗಳನ್ನು ಖರೀದಿ ಮಾಡಲು ಸಹ ಹೆಚ್ಚು ಸಮಯವಿಲ್ಲ. ಆದರೆ ನಿಗದಿತ ಸಮಯಗೊಳಗೆ ಸಂಪೂರ್ಣ ಆಸ್ಪತ್ರೆ ಸಿದ್ಧಪಡಿಸುವುದು ನಮ್ಮ ಗುರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
China is aiming to build a hospital in Coronavirus affected Wuhan province within a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X