ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕ್‌ಟಾಕ್ ಮಾಲೀಕತ್ವ ಬದಲಾವಣೆ ಕುರಿತು ಅಮೆರಿಕ ಬೆದರಿಸುತ್ತಿದೆ: ಚೀನಾ ಆರೋಪ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 04: ಟಿಕ್‌ಟಾಕ್ ಮಾಲೀಕತ್ವ ಬದಲಾವಣೆ ಕುರಿತು ಅಮೆರಿಕ ಬೆದರಿಸುತ್ತಿದೆ ಎಂದು ಚೀನಾ ಹೇಳಿಕೆ ನೀಡಿದೆ.

Recommended Video

ರಾಮಮಂದಿರ ಶಿಲಾ ನ್ಯಾಸಕ್ಕೆ ಕ್ಷಣಗಣನೇ | Oneindia Kannada

ಸೆಪ್ಟೆಂಬರ್ 15ರೊಳಗಾಗಿ ಮಾರಾಟವಾಗದೇ ಹೋದಲ್ಲಿ, ಅಮೆರಿಕಾದಲ್ಲಿ ಟಿಕ್ ಟಾಕ್ ಆ್ಯಪ್ ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವ ಬೆನ್ನಲ್ಲೇ ಚೀನಾ ಈ ಆರೋಪ ಮಾಡಿದೆ.

ಮಾಲೀಕತ್ವ ಬದಲಾಯಿಸದಿದ್ದರೆ ಅಮೆರಿಕದಲ್ಲೂ ಟಿಕ್‌ಟಾಕ್ ಬ್ಯಾನ್: ಟ್ರಂಪ್ಮಾಲೀಕತ್ವ ಬದಲಾಯಿಸದಿದ್ದರೆ ಅಮೆರಿಕದಲ್ಲೂ ಟಿಕ್‌ಟಾಕ್ ಬ್ಯಾನ್: ಟ್ರಂಪ್

ಇದು ಮಾರುಕಟ್ಟೆ ಆರ್ಥಿಕತೆಯ ತತ್ವಗಳ(ವಿಶ್ವ ವಾಣಿಜ್ಯ ಸಂಸ್ಥೆಯ) ಮುಕ್ತತೆ, ಪಾರದರ್ಶಕತೆ ಮತ್ತು ತಾರತಮ್ಯರಹಿತ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ.

China Accuses US Of Outright Bullying Over TikTok

ನಾನು ಈಗಾಗಲೇ ಟಿಕ್ ಟಾಕ್ ಆ್ಯಪ್'ಗೆ ಸೆಪ್ಟೆಂಬರ್ 15ರವರೆಗೂ ಗಡುವು ನೀಡಿದ್ದೇನೆ. ಗಡುವಿನೊಳಗೆ ಟಿಕ್ ಟಾಕ್ ಆ್ಯಪ್ ಮಾಲೀಕತ್ವ ಬದಲಾಗದಿದ್ದರೆ ಆ್ಯಪ್ ನ್ನು ಸಂಪೂರ್ಣವಾಗಿ ಸ್ಥಗಿತಗೊಳಸಲಾಗುತ್ತದೆ ಎಂದು ಹೇಳಿದ್ದರು.

ಆ್ಯಪ್ ನ್ನು ಮೈಕ್ರೋಸಾಫ್ಟ್ ಅಥವಾ ಇತರೆ ಯಾವುದೇ ಸಂಸ್ಥೆ ಖರೀದಿ ಮಾಡಬಹುದು ಎಂದು ಹೇಳಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಈ ಮೂಲಕ ಅಮೆರಿಕ ಹೆದರಿಸುತ್ತಿದೆ ಎಂದು ಹೇಳಿದೆ.

ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಭಾರತದಲ್ಲಿ ಟಿಕ್‌ಟಾಕ್ ಅಪ್ಲಿಕೇಷನ್ ಮೇಲೆ ನಿಷೇಧ ಹೇರಿತ್ತು. ಬಳಿಕ ಇದೀಗ ಅಮೆರಿಕವೂ ಅಪ್ಲಿಕೇಷನ್ ನಿಷೇಧಕ್ಕೆ ಮುಂದಾಗಿದೆ. ಅದಕ್ಕೂ ಮುನ್ನ ಹಲವು ಷರತ್ತುಗಳನ್ನು ವಿಧಿಸಿದೆ.

English summary
China accused the United States on Tuesday of "outright bullying" over popular video app TikTok, after President Donald Trump ramped up pressure for its US operations to be sold to an American company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X