ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಳಿ ಹಿಂಡೋದನ್ನು ನಿಲ್ಲಿಸಿ; ಅಮೆರಿಕಕ್ಕೆ ಚೀನಾ ತಾಕೀತು

|
Google Oneindia Kannada News

ಬೀಜಿಂಗ್, ಅಕ್ಟೋಬರ್ 27: ಚೀನಾ ಹಾಗೂ ಪ್ರಾದೇಶಿಕ ದೇಶಗಳ ಜತೆಗಿನ ಸಂಬಂಧವನ್ನು ಕೆಡಿಸಲು ಅಸಮಾಧಾನ ಬಿತ್ತುವ ಕೆಲಸವನ್ನು ಅಮೆರಿಕ ಮಾಡುತ್ತಿದೆ ಎಂದು ಬೀಜಿಂಗ್ ಆರೋಪಿಸಿದೆ.

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ರಕ್ಷಣೆ ಹಾಗೂ ಯುದ್ಧತಂತ್ರ ಒಪ್ಪಂದಗಳನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಭೇಟಿ ನೀಡಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕಲ್ ಪೊಂಪಿಯೊ, ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸೈನಿಕರ ಸಂಘರ್ಷದ ವಿಚಾರದಲ್ಲಿ ಭಾರತದ ಜತೆಗೆ ಇರುವುದಾಗಿ ಹೇಳಿದ್ದರು.

ಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕಚೀನಾ ಜತೆ ಗಲ್ವಾನ್ ಸಂಘರ್ಷ: ಭಾರತದ ಪರ ನಿಂತ ಅಮೆರಿಕ

'ಪೊಂಪಿಯೊ ಅವರು ಚೀನಾ ವಿರುದ್ಧ ವಾಗ್ದಾಳಿ ನಡೆಸುವುದು ಮತ್ತು ಆರೋಪ ಮಾಡುವುದು ಹೊಸತೇನಲ್ಲ. ಅವರು ನಡೆಸುತ್ತಿರುವ ಆಧಾರರಹಿತ ಆರೋಪಗಳು, ಅವರು ಶೀಥಲ ಸಮರದ ಮನಸ್ಥಿತಿ ಮತ್ತು ಸೈದ್ಧಾಂತಿಕ ಪಕ್ಷಪಾತ ಧೋರಣೆಗೆ ಅಂಟಿಕೊಂಡಿದ್ದಾರೆ ಎನ್ನುವುದನ್ನು ಪ್ರತಿಫಲಿಸುತ್ತದೆ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ.

China Accuses Mike Pompeo Of Sowing Discord Between With Its Regional Conutries

'ಈ ಶೀಥಲ ಸಮರವನ್ನು ನಿಲ್ಲಿಸಲು ಮತ್ತು ಸುಖಾಸುಮ್ಮನೆ ದೂರುವ ಆಟದ ಮನಸ್ಥಿತಿಯಿಂದ ಹೊರಬರಲು ಅವರಲ್ಲಿ ಮನವಿ ಮಾಡುತ್ತೇವೆ. ಜತೆಗೆ ಚೀನಾ ಮತ್ತು ಪ್ರಾದೇಶಿಕ ದೇಶಗಳ ನಡುವೆ ಅಸಮಾಧಾನ ಬಿತ್ತುವುದನ್ನು ನಿಲ್ಲಿಸಿ ಹಾಗೂ ಪ್ರದೇಶದಲ್ಲಿನ ಶಾಂತಿ ಮತ್ತು ಸ್ಥಿರತೆಯನ್ನು ಕೆಡಿಸಬೇಡಿ' ಎಂದು ಆಗ್ರಹಿಸಿದ್ದಾರೆ.

ಮೈಕ್ ಪೊಂಪಿಯೊ, ಮಾರ್ಕ್ ಎಸ್ಪರ್ ಜತೆ ಅಜಿತ್ ದೋವಲ್ ಮಾತುಕತೆಮೈಕ್ ಪೊಂಪಿಯೊ, ಮಾರ್ಕ್ ಎಸ್ಪರ್ ಜತೆ ಅಜಿತ್ ದೋವಲ್ ಮಾತುಕತೆ

'ಇಂದು ಎರಡು ಮಹಾನ್ ಪ್ರಜಾಪ್ರಭುತ್ವ ದೇಶಗಳಿಗೆ ಪರಸ್ಪರ ಸಮೀಪದಿಂದ ಬೆಳೆಯಲು ಅಪೂರ್ವ ಅವಕಾಶ ಸಿಕ್ಕಿದೆ. ಕೋವಿಡ್ ಪಿಡುಗಿನ ನಡುವೆ ಸಹಕಾರ ವೃದ್ಧಿಯ ವಿಚಾರವಾಗಿ ಚೀನಾದ ಕಮ್ಯುನಿಸ್ಟ್ ಪಕ್ಷವು ಈ ಪ್ರದೇಶದಲ್ಲಿ ಒಡ್ಡುತ್ತಿರುವ ಭದ್ರತೆ ಮತ್ತು ಸ್ವಾತಂತ್ರ್ಯದ ಮೇಲಿನ ಬೆದರಿಕೆ ಹಾಗೂ ಶಾಂತಿ ಮತ್ತು ಸ್ಥಿರತೆ ವಿಚಾರವಾಗಿ ಚರ್ಚೆ ನಡೆಸಲು ಸಾಕಷ್ಟು ಸಂಗತಿಗಳಿವೆ' ಎಂದು ಮೈಕಲ್ ಪೊಂಪಿಯೊ ಹೇಳಿದ್ದರು.

English summary
China on Tuesday accuses US secretary of state Mike Pompeo sowing discord between China and other regional countries, while his visit to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X