ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸಾಚಾರಕ್ಕೆ ತಿರುಗಿದ ಬೆಲೆ ಏರಿಕೆ ಪ್ರತಿಭಟನೆ, ಚಿಲಿಯಲ್ಲಿ ತುರ್ತು ಪರಿಸ್ಥಿತಿ

|
Google Oneindia Kannada News

ಸ್ಯಾಂಟಿಯಾಗೋ, ಅಕ್ಟೋಬರ್ 20: ಚಿಲಿಯ ರಾಜಧಾನಿಯ ಸ್ಯಾಂಟಿಯಾಗೋದಲ್ಲಿ ಮೆಟ್ರೋ ಸಾರಿಗೆ ದರ ಏರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿದೆ. ನಗರದ ಹಲವೆಡೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಮೂವರು ಮೃತಪಟ್ಟಿದ್ದಾರೆ. ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಇದೇ ಮೊದಲ ಬಾರಿಗೆ ಸೇನೆಯನ್ನು ನಿಯೋಜಿಸಿ, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಪ್ರತಿಭಟನೆಗೆ ಹೆದರಿದ ಸರ್ಕಾರವು ಬೆಲೆ ಏರಿಕೆಯನ್ನು ಹಿಂಪಡೆದುಕೊಂಡಿದೆ.

ಸ್ಯಾಂಟಿಯಾಗೋದಲ್ಲಿ ಸೂಪರ್ ಮಾರ್ಕೆಟ್, ಬಸ್ ಹಾಗೂ ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿದೆ. ರಸ್ತೆಗಳ ತುಂಬಾ ಕಸ ಹರಡಲಾಗಿದೆ. ಇಬ್ಬರು ಬೆಂಕಿಗೆ ಆಹುತಿಯಾಗಿದ್ದರೆ, ಮತ್ತೊಬ್ಬ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಮೇಯರ್ ಕಾರ್ಲಾ ರುಬಿಲಾರ್ ಹೇಳಿದ್ದಾರೆ.

ಪ್ರತಿಭಟನೆ ಹಿಂದೆ ಮೆಟ್ರೋ ಸಬ್ ವೇ ದರ ಏರಿಕೆ(1.12 ಡಾಲರ್ ನಿಂದ 1.16 ಡಾಲರ್) ಯಲ್ಲದೆ ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿವೆ. ಲ್ಯಾಟಿನ್ ಅಮೆರಿಕದ ಅತ್ಯಂತ ಸ್ಥಿರವಾದ ದೇಶ ಚಿಲಿಯಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಹೆಚ್ಚಾಗಿದೆ. ಇದು ದುಃಖಕರವಾಗಿದೆ. ಆದರೆ, ಜನರು ತಮ್ಮ ಅಳಲು ಕೇಳಬೇಕೆಂಬುದನ್ನು ಈ ವಿನಾಶ ಸೂಚಿಸುತ್ತಿದೆ.
ಚಿಲಿ ಪ್ರೆಶರ್ ಕುಕರ್ ರೀತಿ ಆಗಿತ್ತು, ಕೆಟ್ಟ ರೀತಿಯಲ್ಲಿ ಸಿಡಿದಿದೆ ಎಂದು ಮಾರಿಯಾ ಎಂಬ ಸರ್ಕಾರಿ ನೌಕರರೊಬ್ಬರು ಹೇಳಿದ್ದಾರೆ.

1990ರಲ್ಲಿ ಪ್ರಜಾಪ್ರಭುತ್ವಕ್ಕೆ ಮರಳಿ ಚಿಲಿ ಇದೆ ಮೊದಲ ಬಾರಿಗೆ ಸೈನ್ಯವನ್ನು ರಾಜಧಾನಿಯ ನಿರ್ವಹಣೆಗೆ ನಿಯೋಜಿಸುವ ಪರಿಸ್ಥಿತಿ ಎದುರಿಸಿದೆ. ಆಗುಸ್ಟೋ ಪಿನೊಚೆಟ್ ಸರ್ವಾಧಿಕಾರ ಅಂತ್ಯವಾದ ನಂತರ ಸೈನ್ಯ ಪ್ರಮುಖ ಪಾತ್ರ ವಹಿಸುತ್ತಿದೆ.

Chilean president rolls back subway fare hikes in wake of violent protests

ಸ್ಯಾಂಟಿಯಾಗೋ ನಗರದಲ್ಲಿ ಕಂಡು ಕೇಳರಿಯದ ಹಿಂಸಾಚಾರ ಉಂಟಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸೆಬಾಶ್ಚಿಯನ್ ಪಿನೆರಾ ಅವರು ಶನಿವಾರದಂದು ಎಲ್ಲೆಡೆ ಸೇನೆ ನಿಯೋಜಿಸಿ, ಪರಿಸ್ಥಿತಿಯನ್ನು ತಹಬಂದಿಗೆ ತರಲು ಯತ್ನಿಸಿದ್ದಾರೆ.

ವಿಡಿಯೋ: ದಕ್ಷಿಣ ಅಮೆರಿಕದ ಅಗ್ನಿಪರ್ವತ ಸ್ಫೋಟವಿಡಿಯೋ: ದಕ್ಷಿಣ ಅಮೆರಿಕದ ಅಗ್ನಿಪರ್ವತ ಸ್ಫೋಟ

ಸುಮಾರು 76 ರೈಲ್ವೆ ನಿಲ್ದಾಣಗಳನ್ನು ನಾಶಗೊಳಿಸಲಾಗಿದೆ, ರೈಲು ಸಂಚಾರ ಶನಿವಾರ, ಭಾನುವಾರ ಸ್ಥಗಿತಗೊಳಿಸಲಾಗಿದೆ. ಸ್ಯಾಂಟಿಯಾಗೋ ಮೆಟ್ರೋ 140 ಕಿ.ಮೀ. ಉದ್ದದ ಮಾರ್ಗ ಹೊಂದಿದ್ದು, ಇದು ದಕ್ಷಿಣ ಅಮೆರಿಕದಲ್ಲಿ ಅತ್ಯಂತ ಆಧುನಿಕ ವ್ಯವಸ್ಥೆ ಹೊಂದಿದೆ. ಪ್ರತಿಭಟನೆ, ಹಿಂಸಾಚಾರ ನಿರತರ ಪೈಕಿ 300 ಜನರನ್ನು ಬಂಧಿಸಲಾಗಿದೆ. 11 ಜನ ನಾಗರಿಕರು, 156 ಪೊಲೀಸರು ಗಾಯಗೊಂಡಿದ್ದಾರೆ.

English summary
Student Protest against Fare Hike turns violent and forced President Sebastian Pinera to announce a state of emergency and deploy the armed forces into the streets. Chilean president rolls back subway fare hikes in wake of violent protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X