ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ ಚಿಲಿ

|
Google Oneindia Kannada News

ಸ್ಯಾಂಟಿಯಾಗೊ, ಡಿಸೆಂಬರ್ 8: ಚಿಲಿ ದೇಶದಲ್ಲಿ ಇನ್ಮುಂದೆ ಸಲಿಂಗಿಗಳಿಗೆ ಮದುವೆಯಾಗಲು ಅನುಮತಿ ಸಿಕ್ಕಿದೆ. ಮಂಗಳವಾರದಂದು ಸಲಿಂಗ ದಂಪತಿಯ ಮದುವೆಗೆ ಕಾನೂನು ಮಾನ್ಯತೆ ನೀಡುವ ಕಾನೂನುಬದ್ಧ ಹಕ್ಕುಗಳನ್ನು ಅಂಗೀಕರಿಸುವ ಮಸೂದೆಯನ್ನು ಚಿಲಿ ಕಾಂಗ್ರೆಸ್ ಅಂಗೀಕರಿಸಿದೆ.

ಸೆನೆಟ್ ಮತ್ತು ಕೆಳಮನೆ ಎರಡರಲ್ಲೂ ವಿಧೇಯಕರ ಪರ ಮತಗಳು ಬಿದ್ದಿದ್ದು, ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ಸಿಗಲಿದೆ.

ಮಂಗಳವಾರದಂದು ಸಲಿಂಗ ಮದುವೆಗೆ ಕಾನೂನಿನ ಅಂಗೀಕಾರ ಸಿಕ್ಕಿದ್ದನ್ನು ಹಕ್ಕುಗಳ ಗುಂಪುಗಳು, ಸಮಾನ ವಿವಾಹ ಹಕ್ಕುಗಳ ಹೋರಾಟಗಾರರು ಮತ್ತು ಸಲಿಂಗ ದಂಪತಿ ಸ್ವಾಗತಿಸಿದ್ದಾರೆ.

ರಾಮನ್ ಲೋಪೆಜ್ ಅವರು 21 ವರ್ಷಗಳ ತನ್ನ ಸಂಗಾತಿಯನ್ನು ಮದುವೆಯಾಗಲು ಕಾನೂನಿನ ಅಂಗೀಕಾರಕ್ಕಾಗಿ ಕಾಯುತ್ತಿದ್ದೆ, ಕಾಂಗ್ರೆಸ್‌ನ ಕಾನೂನು ಅವಕಾಶದ ಬಾಗಿಲು ತೆರೆದಿದೆ ಎಂದು AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

"ಇದು ಬಹಳ ಮಹತ್ವದ ಸಂಗತಿಯಾಗಿದೆ," ಲೋಪೆಜ್ ಹೇಳಿದರು, "ಒಬ್ಬ ಮನುಷ್ಯನಂತೆ, ವ್ಯಕ್ತಿಯಾಗಿ ನಿಜವಾಗಿಯೂ ಘನತೆಯನ್ನು ಅನುಭವಿಸುತ್ತಾನೆ. ಇದು ಬಾಗಿಲುಗಳನ್ನು ತೆರೆಯುತ್ತದೆ ಮತ್ತು ಆ ಎಲ್ಲಾ ಪೂರ್ವಾಗ್ರಹಗಳನ್ನು ಒಡೆಯುತ್ತದೆ."

Activists applaud the passage of a bill in Chiles Congress approving same-sex marriage

ಮತದಾನದ ನಂತರ, ಚಿಲಿಯ ಸಾಮಾಜಿಕ ಅಭಿವೃದ್ಧಿ ಸಚಿವ ಕಾರ್ಲಾ ರುಬಿಲಾರ್, "ನ್ಯಾಯದ ವಿಷಯದಲ್ಲಿ, ಸಮಾನತೆಯ ವಿಷಯದಲ್ಲಿ, ಪ್ರೀತಿ ಎಂದರೆ ಪ್ರೀತಿ ಎಂದು ಗುರುತಿಸುವಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿದೆ" ಎಂದು ಹೇಳಿದರು.

ಸಂಪ್ರದಾಯವಾದಿ ಚಿಲಿಯಲ್ಲಿ ಹೊಸ ಮೈಲಿಗಲ್ಲಾದ ಕಾನೂನು

ಮಸೂದೆಯ ಅಂಗೀಕಾರವು ಸಂಪ್ರದಾಯವಾದಿ ಲ್ಯಾಟಿನ್ ಅಮೇರಿಕನ್ ರಾಷ್ಟ್ರಕ್ಕೆ ಒಂದು ಮೈಲಿಗಲ್ಲು ಎಂದು ಗುರುತಿಸಲಾಗಿದೆ.

ಮಾಜಿ ಅಧ್ಯಕ್ಷ ಮಿಚೆಲ್ ಬ್ಯಾಚೆಲೆಟ್ ಮೊದಲ ಬಾರಿಗೆ 2017ರಲ್ಲಿ ಈ ವಿಧೇಯಕವನ್ನು ಪರಿಚಯಿಸಿದರು.

2015ರಿಂದ ಚಿಲಿಯಲ್ಲಿ ಸಿವಿಲ್ ಯೂನಿಯನ್‌ಗಳನ್ನು ಅನುಮತಿಸಲಾಗಿದೆ.

ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಮಸೂದೆಯನ್ನು ಬೆಂಬಲಿಸಲಿದ್ದು ಮತ್ತು ಮಾರ್ಚ್‌ನಲ್ಲಿ ಕಚೇರಿಯನ್ನು ತೊರೆಯುವ ಮೊದಲು ಅಂಕಿತ ಮುದ್ರೆ ಒತ್ತುವ ಮೂಲಕ ಕಾನೂನು ಜಾರಿಯಾಗುವಂತೆ ಮಾಡಲಿದ್ದಾರೆ.

ಚಿಲಿಯ ಅಧಿಕೃತ ಗೆಜೆಟ್‌ನಲ್ಲಿ ಮಸೂದೆಯನ್ನು ಪ್ರಕಟಿಸಿದ 90 ದಿನಗಳ ನಂತರ ಭಿನ್ನಲಿಂಗೀಯ ದಂಪತಿಗಳಿಗೆ ಸಮಾನವಾದ ಹಕ್ಕುಗಳನ್ನು ಮದುವೆಯಾಗಲು ಬಯಸುವ ಸಲಿಂಗ ದಂಪತಿಗಳಿಗೆ ಹೊಸ ಕಾನೂನು ಜಾರಿಗೆ ಬರಲಿದೆ.

ಇದರರ್ಥ ಮಕ್ಕಳೊಂದಿಗೆ ಸಲಿಂಗ ದಂಪತಿ ಇಬ್ಬರೂ ಪೋಷಕರು ಸಂಪೂರ್ಣ ಕಾನೂನು ಮಾನ್ಯತೆಯನ್ನು ಪಡೆಯುತ್ತಾರೆ.

ಮಸೂದೆಯ ಅಂಗೀಕಾರದೊಂದಿಗೆ, ಚಿಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವಲ್ಲಿ ಅರ್ಜೆಂಟೀನಾ, ಬ್ರೆಜಿಲ್, ಕೊಲಂಬಿಯಾ, ಕೋಸ್ಟರಿಕಾ ಮತ್ತು ಲ್ಯಾಟಿನ್ ಅಮೆರಿಕದ ಉರುಗ್ವೆ ಸೇರಿದಂತೆ ವಿಶ್ವದಾದ್ಯಂತ 20 ದೇಶಗಳ ಪಟ್ಟಿಗೆ ಸೇರಿದೆ.

ಚಿಲಿಯಲ್ಲಿ ಪ್ರಗತಿಪರರು v/s ಸಂಪ್ರದಾಯವಾದಿ

ಡಿಸೆಂಬರ್ 19 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಾಗಿ ಚಿಲಿಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಚಿಲಿಯನ್ನರು ಪ್ರಗತಿಪರ ಅಭ್ಯರ್ಥಿ ಗೇಬ್ರಿಯಲ್ ಬೋರಿಕ್ ಮತ್ತು ಸಾಮಾಜಿಕವಾಗಿ ಸಂಪ್ರದಾಯವಾದಿ ಜೋಸ್ ಆಂಟೋನಿಯೊ ಕಾಸ್ಟ್ ನಡುವೆ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬ ಕುತೂಹಲವಿದೆ.

ಸಂಪ್ರದಾಯವಾದಿ ಮೌಲ್ಯಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ದೀರ್ಘಕಾಲದ ಖ್ಯಾತಿಯ ಹೊರತಾಗಿಯೂ, ಹೆಚ್ಚಿನ ಚಿಲಿಯರು ಸಲಿಂಗ ವಿವಾಹದ ಹಕ್ಕುಗಳನ್ನು ಬೆಂಬಲಿಸುತ್ತಾರೆ.

ಸೆಂಟ್ರಿಸ್ಟ್ ಮತದಾರರಿಗೆ ಒಪ್ಪಿಗೆ ಎಂದು ಗ್ರಹಿಸಿದ ಸಂಪ್ರದಾಯವಾದಿ ಅಭ್ಯರ್ಥಿ ಕಾಸ್ಟ್ ಅವರು ಅಧ್ಯಕ್ಷರಾಗಿದ್ದರೆ ಮಸೂದೆಯನ್ನು ಅಂಗೀಕರಿಸುವುದಾಗಿ ಹೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ, ಚಿಲಿಯರು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ಎಡಪಂಥಕ್ಕೆ ಬದಲಾಗುತ್ತಿದ್ದಾರೆ ಎಂಬುದು ಗೋಚರಿಸುತ್ತದೆ. (AFP, ರಾಯಿಟರ್ಸ್)

English summary
Lawmakers in Chile have voted overwhelmingly in favor of a bill legalizing same-sex marriage. The law is being called a 'step forward' for equality in the conservative Latin American country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X