ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಬಿಟ್ಟು ಬಾಲ್ ಹಿಡಿದ ಮಕ್ಕಳು! ಚಿಣ್ಣರ ‘ಫುಟ್‌ಬಾಲ್ ಚಾಲೆಂಜ್’ ವೈರಲ್!

|
Google Oneindia Kannada News

ಪ್ರತಿಯೊಬ್ಬರ ಪಾಲಿಗೂ ಬಾಲ್ಯದ ದಿನಗಳೇ ಹಾಗೆ, ಜೀವನದ ತುಂಬಾ ಮರೆಯಲಾಗದಷ್ಟು ಸಿಹಿ ನೆನಪು ತುಂಬಿಕೊಂಡಿರುತ್ತವೆ. ಆದರೆ ಟೆಕ್ನಾಲಜಿ ಬೆಳೆಯುತ್ತಿದ್ದಂತೆ ಮಕ್ಕಳು ಕೂಡ ಆಟ, ತುಂಟಾಗಳನ್ನ ಮರೆತು ಮೊಬೈ ಹಾಗೂ ಕಂಪ್ಯೂಟರ್‌ಗಳ ದಾಸರಾಗುತ್ತಿದ್ದಾರೆ ಎಂಬ ಆರೋಪವಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಆಫ್ರಿಕಾದ ಶಾಲೆಯೊಂದರಲ್ಲಿ ಮಕ್ಕಳು ಫುಟ್‌ಬಾಲ್‌ನ ಬಕೆಟ್‌ಗೆ ತಳ್ಳುವ ಚಾಲೆಂಜ್ ಎಲ್ಲರ ಮನಸ್ಸು ಗೆದ್ದಿದೆ. ವಿದ್ಯಾರ್ಥಿಗಳು ಹೇಗೆ ಟೀಂ ವರ್ಕ್ ಮಾಡಿ ಗೆಲ್ಲುತ್ತಾರೆ ಎಂಬುದೇ ವಿಡಿಯೋದ ಸಾರಾಂಶ. 2 ವರ್ಷದ ಹಿಂದೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದ ವಿಡಿಯೋ ದಿಢೀರ್ ವೈರಲ್ ಆಗಿದೆ. ಎಷ್ಟೋ ಜನ ವಿಡಿಯೋ ಜೊತೆಗೆ ತಮ್ಮ ಬಾಲ್ಯದ ನೆನಪುಗಳನ್ನೂ ಮೆಲುಕು ಹಾಕುತ್ತಾ ಶೇರ್ ಮಾಡಿದ್ದಾರೆ. ಮಕ್ಕಳ ಆಟದ ವೈಖರಿ ಜೊತೆಗೆ, ಇಂದಿನ ಮಕ್ಕಳಿಗೆ ಬಾಲ್ಯದಲ್ಲಿ ಆಟ, ವ್ಯಾಯಾಮ ಎಷ್ಟು ಮುಖ್ಯ ಎಂಬ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ.

ನಮ್ಮ ಬಾಲ್ಯವೂ ಹೀಗೆ ಇತ್ತು..!
ಅಷ್ಟಕ್ಕೂ ಮೂಲತಃ ಉಗಾಂಡ ದೇಶದ ಮಾಸಾಕದ ಕ್ಯಾಂಬಿಯೋ ಅಕಾಡೆಮಿ 2019ರಲ್ಲಿ ಈ ವಿಡಿಯೋ ಶೇರ್ ಮಾಡಿತ್ತು. ಆದರೆ 2 ವರ್ಷಗಳ ಬಳಿಕ ದಿಢೀರ್ ಇಂಟರ್‌ನೆಟ್‌ನಲ್ಲಿ ಹವಾ ಎಬ್ಬಿಸಿದೆ. ಲಕ್ಷ ಲಕ್ಷ ಜನ ಇದನ್ನ ಶೇರ್ ಮಾಡಿದ್ದು, ಇನ್ಸ್ಟಾಗ್ರಾಂ ಮಾತ್ರವಲ್ಲದೆ ಇತರ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿ ಅನುಭವ ಹಂಚಿಕೊಂಡಿದ್ದಾರೆ ಹಲವರು. ಇನ್ನೂ ಕೆಲವರು ನಮ್ಮ ಬಾಲ್ಯವೂ ಹೀಗೆ ಇತ್ತು, ಅದು ಮತ್ತೊಮ್ಮೆ ಬರಬಾರದು ಏಕೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಹಾಗೇ ಮಕ್ಕಳ ಟೀಂ ವರ್ಕ್‌ಗೆ ಫಿದಾ ಆಗಿದ್ದಾರೆ.

Children’s football video dominating on internet...!

ತಂತ್ರಜ್ಞಾನದ ಅತಿ ಬಳಕೆ..?
ಮಕ್ಕಳಲ್ಲಿ ತಂತ್ರಜ್ಞಾನದ ಅತಿ ಬಳಕೆ ಸಾಕಷ್ಟು ಸಮಸ್ಯೆಗಳನ್ನ ತಂದೊಡ್ಡುತ್ತಿವೆ ಎಂದು ಸಂಶೋಧಕರು ಆಗಾಗ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಕೆಲವು ದೇಶಗಳಲ್ಲಿ ಪುಟಾಣಿಗಳು ವಿಡಿಯೋ ಗೇಮ್‌ ದಾಸರಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುವ ಉದಾಹರಣೆಗಳು ಇವೆ. ಆದರೆ ಕೆಲವು ದಶಕಗಳ ಹಿಂದೆ ಪರಿಸ್ಥಿತಿ ಈ ರೀತಿ ಇರಲಿಲ್ಲ. ಅಕ್ಕಪಕ್ಕದ ಅಥವಾ ವಠಾರದ ಮಕ್ಕಳು ಕೂಡಿ ಆಟ ಆಡುವುದು ಮಾಮೂಲಾಗಿತ್ತು. ಇದು ಬದಲಾಗುತ್ತಾ ಸಾಗಿದೆ, ತಜ್ಞರು ಕೂಡ ಮಕ್ಕಳು ಸಮಾಜದ ಜೊತೆ ಬೆರೆಯುವುದನ್ನೇ ಪ್ರೋತ್ಸಾಹಿಸುತ್ತಾರೆ.

English summary
A video of children’s playing with football bucket challenge goes viral after 2 years of posting on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X