ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಟ್ಜರ್ಲ್ಯಾಂಡ್‌ನಲ್ಲಿ ಯಡಿಯೂರಪ್ಪ-ಟ್ರಂಪ್ ಮುಖಾಮುಖಿ!

|
Google Oneindia Kannada News

ದಾವೊಸ್, ಜನವರಿ 21: ಸ್ವಿಟ್ಜರ್ಲ್ಯಾಂಡ್‌ನ ದಾವೊಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಮೊದಲನೇ ದಿನವಾದ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಾವೇಶದ ಅತ್ಯಂತ ಮಹತ್ವದ ಕಾರ್ಯಕ್ರಮವಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರಾಜ್ಯದ ಮುಖ್ಯಮಂತ್ರಿಯೊಬ್ಬರು ಅಮೆರಿಕ ಅಧ್ಯಕ್ಷರ ಭಾಷಣದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಸಿಎಂ ಬಿ ಎಸ್ ಯಡಿಯೂರಪ್ಪ ಪಾತ್ರರಾದರು.

ಸ್ವಿಟ್ಜರ್ಲೆಂಡ್ ನಲ್ಲಿ ಮಿಂಚಿನ ಸಂಚಾರ ನಡೆಸಿದ ಸಿಎಂ ಯಡಿಯೂರಪ್ಪಸ್ವಿಟ್ಜರ್ಲೆಂಡ್ ನಲ್ಲಿ ಮಿಂಚಿನ ಸಂಚಾರ ನಡೆಸಿದ ಸಿಎಂ ಯಡಿಯೂರಪ್ಪ

2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಸಮಾವೇಶದಲ್ಲಿ ಭಾಗವಹಿಸಿದ್ದರು.

 ಟ್ರಂಪ್ ಹೊಗಳಿದ ಯಡಿಯೂರಪ್ಪ

ಟ್ರಂಪ್ ಹೊಗಳಿದ ಯಡಿಯೂರಪ್ಪ

ಸಭೆಯ ನಂತರ ಟ್ರಂಪ್ ಅವರ ಭಾಷಣದ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, "ಟ್ರಂಪ್ ಅವರ ಭಾಷಣ, ಸರಿಯಾದ ದಿಕ್ಕಿನಲ್ಲಿದ್ದರೂ, ತಮ್ಮ ದೇಶದ ಆರ್ಥಿಕತೆಯ ಕುರಿತು ಅವರು ಗಮನ ಕೇಂದ್ರೀಕರಿಸಿದರು. ಆದರೆ, ಯಾವುದೇ ದೇಶದ ನಾಯಕನ ದೃಷ್ಟಿಯಿಂದ ಇದು ಸಹಜ" ಎಂದು ಅಭಿಪ್ರಾಯಪಟ್ಟರು.

ಹೂಡಿಕೆ ರಾಜ್ಯಗಳಿಗೆ ಅತಿ ಅಗತ್ಯ

ಹೂಡಿಕೆ ರಾಜ್ಯಗಳಿಗೆ ಅತಿ ಅಗತ್ಯ

''ಟ್ರಂಪ್ ಅವರು ವರ್ಲ್ಡ್ ಎಕನಾಮಿಕ್ ಫೋರಂ ಹೂಡಿಕೆದಾರರು ಹಾಗೂ ವ್ಯಾಪಾರಸ್ಥರಿಗೆ ತಮ್ಮ ವಹಿವಾಟು ವಿಸ್ತರಿಸಲು ವೇದಿಕೆಯಾಗಿದೆ. ಅಂತೆಯೇ ರಾಜಕೀಯ ನಾಯಕರಿಗೆ ತಮ್ಮ ರಾಜ್ಯ ಮತ್ತು ದೇಶಕ್ಕೆ ಹೂಡಿಕೆದಾರರನ್ನು ಆಹ್ವಾನಿಸುವ ಮೂಲಕ ತಮ್ಮ ದೇಶದ ಆರ್ಥಿಕತೆಯನ್ನು ವೃದ್ಧಿಸಲು ಉತ್ತಮ ಅವಕಾಶವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಇಂತಹ ವೇದಿಕೆಗಳು ತಮ್ಮದೇ ಸಂಪನ್ಮೂಲ ಹೊಂದಿಸಲು ಅಡಚಣೆ ಇರುವ ರಾಜ್ಯಗಳಿಗೆ ಅತಿ ಅಗತ್ಯ'' ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಸೂಟು-ಬೂಟು ತೊಟ್ಟು ವಿದೇಶಕ್ಕೆ ಹಾರಿದ ಬಿ. ಎಸ್. ಯಡಿಯೂರಪ್ಪಸೂಟು-ಬೂಟು ತೊಟ್ಟು ವಿದೇಶಕ್ಕೆ ಹಾರಿದ ಬಿ. ಎಸ್. ಯಡಿಯೂರಪ್ಪ

ಉದ್ಯೋಗ ಸೃಷ್ಟಿ ನಮ್ಮ ಗುರಿ

ಉದ್ಯೋಗ ಸೃಷ್ಟಿ ನಮ್ಮ ಗುರಿ

''ಹೂಡಿಕೆಗಳು ರಾಜ್ಯದ ಆರ್ಥಿಕತೆ ವೃದ್ಧಿಸುವ ಜೊತೆಗೆ ಯುವಕರಿಗೆ ಉದ್ಯೋಗ ಒದಗಿಸುತ್ತವೆ. ಉದ್ಯೋಗ ಸೃಷ್ಟಿ ನಮ್ಮ ಗುರಿ ಈಡೇರಲು ಹೂಡಿಕೆಯ ಅಗತ್ಯವಿದೆ. ಇಂತಹ ಅವಕಾಶಗಳು ರಾಜ್ಯದ ಆರ್ಥಿಕತೆ ವೃದ್ಧಿಗೆ ಪೂರಕವಾಗಿವೆ'' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಕೊರೆಯುವ ಚಳಿಯಲ್ಲಿ ಮುಖ್ಯಮಂತ್ರಿ

ಕೊರೆಯುವ ಚಳಿಯಲ್ಲಿ ಮುಖ್ಯಮಂತ್ರಿ

ಕೇವಲ ಎರಡು-ಮೂರು ಸಾವಿರ ಜನಸಂಖ್ಯೆಯ ದಾವೋಸ್‌ನಲ್ಲಿ ಮೈನಸ್ 9 ಡಿಗ್ರಿ ಸೆಲ್ಸಿಯಸ್ ಚಳಿಯನ್ನೂ ಲೆಕ್ಕಿಸದೆ ಮುಖ್ಯಮಂತ್ರಿಗಳು ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಉತ್ಸಾಹದಿಂದ ಸರಣಿ ಸಭೆಗಳನ್ನು ನಡೆಸಿದರು. ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಬಿ.ಎಸ್. ಯಡಿಯೂರಪ್ಪ ಅವರ ಜೊತೆಯಾಗಿದ್ದರು.

ದಾವೋಸ್ ನಲ್ಲಿ ಹೂಡಿಕೆದಾರರ ಅಕರ್ಷಿಸಲು ಯಡಿಯೂರಪ್ಪ ಸಜ್ಜುದಾವೋಸ್ ನಲ್ಲಿ ಹೂಡಿಕೆದಾರರ ಅಕರ್ಷಿಸಲು ಯಡಿಯೂರಪ್ಪ ಸಜ್ಜು

English summary
Chief Minister BS Yediyurappa Meets US President Donald Trump In Davos. Yediyurappa Appreciated Trump's Economic Forum Speech In Davos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X