ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕಾಗೋ : ಯುವತಿ ಮೇಲೆ ರೇಪ್, ಫೇಸ್ ಬುಕ್ ನಲ್ಲಿ ಲೈವ್

ತಂತ್ರಜ್ಞಾನದ ಅತ್ಯಂತ ಕೆಟ್ಟ ಮಟ್ಟದ ಉಪಯೋಗ ಮಾಡುವುದೆಂದರೆ ಹೀಗೆ ಇರಬೇಕು, ಶಿಕಾಗೋವಿನಲ್ಲಿ ಯುವತಿಯೊಬ್ಬರ ಮೇಲೆ ಆರು ಮಂದಿ ಕಾಮುಕರು ಎರಗಿದ ಘಟನೆಯನ್ನು ಫೇಸ್ ಬುಕ್ ಲೈವ್ ಮೂಲಕ ಹಂಚಲಾಗಿದೆ.

By Mahesh
|
Google Oneindia Kannada News

ಶಿಕಾಗೋ, ಮಾರ್ಚ್ 24: ತಂತ್ರಜ್ಞಾನದ ಅತ್ಯಂತ ಕೆಟ್ಟ ಮಟ್ಟದ ಉಪಯೋಗ ಮಾಡುವುದೆಂದರೆ ಹೀಗೆ ಇರಬೇಕು, ಶಿಕಾಗೋವಿನಲ್ಲಿ ಯುವತಿಯೊಬ್ಬರ ಮೇಲೆ ಆರು ಮಂದಿ ಕಾಮುಕರು ಎರಗಿದ ಘಟನೆಯನ್ನು ಫೇಸ್ ಬುಕ್ ಲೈವ್ ಮೂಲಕ ಹಂಚಲಾಗಿದೆ. ಇದನ್ನು 40ಕ್ಕೂ ಅಧಿಕ ಮಂದಿ ಲೈವ್ ವೀಕ್ಷಣೆ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಗಮನ ಹರಿಸುವುದಾಗಿ ಫೇಸ್ ಬುಕ್ ಸಂಸ್ಥೆ ಪ್ರತಿಕ್ರಿಯಿಸಿದ್ದಾರೆ.

ವಿಡಿಯೋದಲ್ಲಿ ಐದರಿಂದ ಆರು ಮಂದಿ ಕಾಮುಕರು ಒಬ್ಬ ಯುವತಿಯ ಮೇಲೆರಗುತ್ತಾರೆ. ಯುವತಿಯ ವಯಸ್ಸು 15 ವರ್ಷ ಎಂದು ತಿಳಿದು ಬಂದಿದೆ. ಆರು ಮಂದಿ ಕಾಮುಕರನ್ನು ಬಂಧಿಸಲು ಬಲೆ ಹೆಣೆಯಲಾಗಿದೆ ಎಂದು ಪೊಲೀಸ್ ವಕ್ತಾರರಾದ ಅಂಥೋಣಿ ಗುಗ್ಲೆಲ್ಮಿ ಹೇಳಿದ್ದಾರೆ.

Chicago: Facebook Live shows assault of a teenage girl by six people

ದುರಂತವೆಂದರೆ, ರೇಪ್ ದೃಶ್ಯಗಳು ಫೇಸ್ ಬುಕ್ ನಲ್ಲಿ ಕಾಣಿಸಿಕೊಂಡಿದ್ದಾದರೂ ಹೇಗೆ? ಫೇಸ್ ಬುಕ್ ನೋಡುವವರು ತಕ್ಷಣವೇ ಪೊಲೀಸರಿಗೆ ಕರೆ ಏಕೆ ಮಾಡಲಿಲ್ಲ? ಪೊಲೀಸರಿಗೆ ಕರೆ ಮಾಡಲು ಆಗದಿದ್ದರೂ ಫೇಸ್ ಬುಕ್ ನಲ್ಲೇ ಇದು ಸ್ಪಾಮ್ ಅಥವಾ ಲೈಂಗಿಕ ಕಿರುಕುಳ, ಪ್ರಚೋದನಕಾರಿ ಎಂದು ವರದಿ ಮಾಡಬಹುದಾಗಿತ್ತು.

ಆದರೆ, ಉನ್ನತ ತಂತ್ರಜ್ಞಾನದ ಬೀಡು ಎಂದು ಕರೆದುಕೊಳ್ಳುವ ಯುಎಸ್ ನಲ್ಲಿ ಕಾಮುಕರ ಅಟ್ಟಹಾಸವನ್ನು ವೀಕ್ಷಿಸುವ ಇಂಥ ತಂತ್ರಜ್ಞಾನದ ವಿಕೃತಿಗೆ ಅಮಾಯಕ ಯುವತಿಯ ಮಾನ ಹಾನಿಯಾಗಿದೆ.

ಯುವತಿಯ ತಾಯಿಗೆ ಈ ಘಟನೆ ಬಗ್ಗೆ ತಿಳಿದ ಬಳಿಕ, ತಕ್ಷಣವೇ ಶಿಕಾಗೋ ಪೊಲೀಸರ ಮೊರೆ ಹೊಕ್ಕಿದ್ದಾರೆ. ಆಕೆ ನೀಡಿದ ಫೇಸ್ ಬುಕ್ ಲೈವ್ ಸ್ಕ್ರೀನ್ ಗ್ರಾಬ್ ನೋಡಿ ಸಂತ್ರಸ್ತ ಯುವತಿಯನ್ನು ಹುಡಕಲಾಗಿದೆ. ಸದ್ಯ ತಾಯಿಯ ಆಶ್ರಯದಲ್ಲಿರುವ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್ ಬುಕ್, ಯಾವುದೇ ರೀತಿ ನಿಂದನೆ, ಮಾನಹಾನಿ, ಲೈಂಗಿಕ ಕಿರುಕುಳ ವಿಡಿಯೋಗಳನ್ನು ಪ್ರದರ್ಶಿಸಲು ನಾವು ಅವಕಾಶ ನೀಡುವುದಿಲ್ಲ. ಈ ಘಟನೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಫೇಸ್ ಬುಕ್ ನೀಡಿರುವ ನೀತಿ ನಿಯಮ ಪಟ್ಟಿ ಇಲ್ಲಿದೆ ಆಸಕ್ತರು ಓದಿಕೊಳ್ಳಿ

English summary
Chicago Police are searching for as many as six people involved in the sexual assault of a teenage girl that was broadcast on Facebook Live, a police spokesman said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X