ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೋಟಾ ಶಕೀಲ್ ಕತೆ ಮುಗೀತು, ಐಎಸ್ಐ ವಶದಲ್ಲಿ ಡಿ ಗ್ಯಾಂಗ್ ಆಸ್ತಿ!

By ವಿಕಾಸ್ ನಂಜಪ್ಪ
|
Google Oneindia Kannada News

ಕರಾಚಿ, ಜನವರಿ 01: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಇರುವಿಕೆ ಬಗ್ಗೆ ಇದ್ದ ಅನುಮಾನಗಳು ಈಗ ದೂರಾಗಿವೆ. ಶಕೀಲ್ ಹೆಸರಿನಲ್ಲಿದ್ದ ಆಸ್ತಿ ಪಾಸ್ತಿಯನ್ನು ಐಎಸ್ಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ಡಿ ಸಿಂಡಿಕೇಟ್ ನಡೆಸಲು ಹೊಸ ಪ್ರತಿನಿಧಿಯನ್ನು ನೇಮಿಸಿದೆ.

2017ರ ಜನವರಿ ತಿಂಗಳಿನಲ್ಲೇ ಛೋಟಾ ಶಕೀಲ್ ಕತೆ ಮುಗಿದಿದೆ. ಛೋಟಾ ವಾಸವಿದ್ದ ಕರಾಚಿಯ ಬಂಗಲೆ ಈಗ ಐಎಸ್ಐ ವಶಕ್ಕೆ ಸೇರಿದೆ. ಕರಾಚಿಯ ಡಿಎಚ್ಎ ಕಾಲೇನಿಯ 15ನೇ ಲೇನ್ ನಲ ಖಯಾಬಾನ್ ಸೆಹರ್ ಡಿ 48ನ ಬಂಗಲೆಯನ್ನು ಐಎಸ್ಐ ವಶ ಪಡಿಸಿಕೊಂಡಿದ್ದು, ಡಿ ಸಿಂಡಿಕೇಟ್ ನೋಡಿಕೊಳ್ಳಲು ರಹೀಂ ಮರ್ಚೆಂಟ್ ನನ್ನು ನೇಮಿಸಲಾಗಿದೆ.

80ರ ದಶಕದಿಂದ ದಾವೂದ್ ಹಾಗೂ ಶಕೀಲ್ ಕರಾಚಿಯಲ್ಲಿ ನೆಲೆಸಿದ್ದಾರೆ.ಡಿ ಕಂಪನಿ ನಡೆಸುವ ವಿಚಾರದಲ್ಲಿ ದಾವೂದ್ ಅವರ ಸೋದರ ಅನೀಸ್ ಹಾಗೂ ಛೋಟಾ ಶಕೀಲ್ ನಡುವೆ ವೈಮನಸ್ಯ ಉಂಟಾಗಿತ್ತು. ಈ ವಿಷಯದಲ್ಲಿ ದಾವೂದ್ ಕೂಡಾ ಅನೀಸ್ ಪರ ನಿಂತಿದ್ದು, ಶಕೀಲ್ ನನ್ನು ಕೆರಳಿಸಿತ್ತು. ಹೀಗಾಗಿ, ಡಿ ಕಂಪನಿ ತೊರೆದು,ಪೂರ್ವ ಏಷ್ಯಾ ದೇಶಗಳಲ್ಲಿ ಹೊಸ ನೆಲೆ ಕಂಡುಕೊಳ್ಳಲು ಶಕೀಲ್ ಯತ್ನಿಸಿದ್ದಾನೆ ಎಂಬ ಸುದ್ದಿ ಹಬ್ಬಿತ್ತು.

ಶಕೀಲ್ ಜನವರಿ 6, 2017ರಂದು ಮೃತಪಟ್ಟಿದ್ದಾನೆ

ಶಕೀಲ್ ಜನವರಿ 6, 2017ರಂದು ಮೃತಪಟ್ಟಿದ್ದಾನೆ

ಶಕೀಲ್ ಜನವರಿ 6, 2017ರಂದು ಮೃತಪಟ್ಟಿದ್ದಾನೆ. ಆತನ ಎರಡನೇ ಪತ್ನಿ ಆಯೇಷಾಳನ್ನು ಲಾಹೋರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಶಿಫ್ಟ್ ಮಾಡಲಾಗಿದೆ. ಮಗಳು ಝೋಯಾ ಹಾಗೂ ಶಕೀಲ್ ನ ಸೋದರರನ್ನು ದಕ್ಷಿಣ ಆಫ್ರಿಕಾಕ್ಕೆ ಕಳಿಸಲಾಗಿದೆ. ಜೋಹಾನ್ಸ್ ಬರ್ಗ್ ನಲ್ಲಿ ಸದ್ಯ ನೆಲೆಸಿದ್ದಾರೆ.

ಡಿ ಗ್ಯಾಂಗ್ ಯಾವ ನಿಯಂತ್ರಣದಲ್ಲಿದೆ?

ಡಿ ಗ್ಯಾಂಗ್ ಯಾವ ನಿಯಂತ್ರಣದಲ್ಲಿದೆ?

ಶಕೀಲ್ ಹೆಸರಿನಲ್ಲಿ ಬೆದರಿಕೆ, ಗುತ್ತಿಗೆ ಹತ್ಯೆ ಕಾರ್ಯ ನಿರ್ವಹಿಸುತ್ತಾ ಡಿ ಗ್ಯಾಂಗಿನ ನಿಷ್ಠಾವಂತನಾಗಿರುವ ರಹೀಂ ಮರ್ಚಂಟ್ ಎಂಬಾತ ಈಗ ಶಕೀಲ್ ಸ್ಥಾನಕ್ಕೇರಿದ್ದಾನೆ. ಭಾರತದ ಮಾಧ್ಯಮಗಳಿಗೆ ಕರೆ ಮಾಡುತ್ತಿರುವುದು ಕೂಡಾ ಈತನೇ ಎಂಬುದು ದೃಢಪಟ್ಟಿದೆ.

ಶಕೀಲ್ ನ ಮೊದಲ ಪತ್ನಿ ಝೆಹ್ರಾ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ, ಆಕೆಯ ಚಲನವಲನಗಳ ಮೇಲೆ ಐಎಸ್ಐ ನಿಗಾವಹಿಸಿದೆ. ಶಕೀಲ್ ನ ಸೋದರ ಅನ್ವರ್ ಸದ್ಯ ದುಬೈನಲ್ಲಿದ್ದು, ಪಾಕಿಸ್ತಾನಿ ಪಾಸ್ ಪೋರ್ಟ್ ಹೊಂದಿದ್ದಾನೆ.

ಯಾರೀತ ರಹೀಂ ಮರ್ಚಂಟ್

ಯಾರೀತ ರಹೀಂ ಮರ್ಚಂಟ್

ದುಬೈ ಮೂಲದ ಯುಎಇ ಹಾಗೂ ಪಾಕಿಸ್ತಾನ ಪಾಸ್ ಪೋರ್ಟ್ ಹೊಂದಿರುವ ಈತನ ಚಿತ್ರ ಮೊದಲಿಗೆ ಹೊರಗೆ ಬಂದಿದ್ದು ಅಕ್ಟೋಬರ್ 2017ರಲ್ಲಿ ಮಾತ್ರ. ಸದಾಕಾಲ ಐಷಾರಾಮಿ ಕಾರುಗಳಲ್ಲಿ ರಷ್ಯನ್ ಮಹಿಳೆಯರ ಜತೆ ಸುತ್ತುವ ಈತನಿಗೆ ಕಾರು, ಬೈಕುಗಳ ಹುಚ್ಚಿದೆ. ದುಬೈ ಹಾಗೂ ಕರಾಚಿ ಈತನ ಕಾರ್ಯ ಸ್ಥಾನ.

ರಹೀಂ ಮರ್ಚಂಟ್ ನಂಬರ್ ಪತ್ತೆ

ರಹೀಂ ಮರ್ಚಂಟ್ ನಂಬರ್ ಪತ್ತೆ

ಶಕೀಲ್ ಸತ್ತ ಎರಡು ದಿನಗಳ ಬಳಿಕ ದುಬೈಗೆ ಜನವರಿ 8, 2017ರಂದು ತೆರಳಿದ್ದ ಈತ ಫೆಬ್ರವರಿ 13,2017 ರಂದು ಕರಾಚಿಗೆ ವಾಪಸ್ ಬಂದಿದ್ದ. ಯುಎಇ ಮೂಲದ ಪ್ರೀಪೇಯ್ಡ್ ನಂಬರ್(+971504265138) ಬಳಸುವ ಈತ ಐಎಸ್ಐನ ಆದೇಶದಂತೆ ನಡೆದುಕೊಳ್ಳುತ್ತಾನೆ. ಟ್ರೂ ಕಾಲರ್ ನಲ್ಲಿ ಈ ನಂಬರ್ ಹುಡುಕಿದರೆ ಛೋಟಾ ಶಕೀಲ್ ಹೆಸರು ಬರುತ್ತದೆ.

ದಾವೂದ್ ಬದುಕಿದ್ದಾನೆಯೇ?

ಶಕೀಲ್ ಸಾವು ಹಾಗೂ ಆತನ ಮಕ್ಕಳು ಮೌಲಾನಾಗಿದ್ದು, ದಾವೂದ್ ನನ್ನು ತೀವ್ರ ಹಣ್ಣಾಗಿಸಿದೆ. ಮಾನಸಿಕ ಖಿನ್ನತೆ, ಅನಾರೋಗ್ಯದಿಂದ ಬಳಲುತ್ತಿರುವ ದಾವೂದ್ ಸದ್ಯ ಕರಾಚಿಯ ಕ್ಲಿಫ್ಟನ್ ಬಂಗ್ಲೆಯಲ್ಲಿ ಕೊನೆದಿನಗಳನ್ನು ಎದುರಿಸುತ್ತಿದ್ದಾನೆ. ದಾವೂದ್ ಸ್ಥಿತಿ ಗತಿ ಬಗ್ಗೆ ಒನ್ ಇಂಡಿಯಾಕ್ಕೆ ಲಭ್ಯವಿರುವ ಆಡಿಯೋ ಕ್ಲಿಪಿಂಗ್ ನಲ್ಲಿ ಸ್ಪಷ್ಟ ಮಾಹಿತಿ ಸಿಗುತ್ತದೆ.

ದಾವೂದ್ ಬಳಿ ಸೈಂಟ್ ಕಿಟ್ಸ್, ಮಲಾವಿ, ಡೊಮಿನಿಕನ್ ರಿಪಬ್ಲಿಕ್, ಕೋಸ್ಟರಿಕಾ, ಸೌದಿ ಅರೇಬಿಯಾ ಹಾಗೂ ಯೆಮನ್ ಪಾಸ್ ಪೋರ್ಟ್ ಗಳಿವೆ. ಆದರೆ, ಇತ್ತೀಚೆಗೆ ಪಾಕಿಸ್ತಾನದಿಂದ ಹೊರಗೆ ಹೋಗಿಲ್ಲ. ಮೆಕ್ಕಾಕ್ಕೆ ಹಜ್ ಯಾತ್ರೆ ಮಾಡಿದ್ದು ಬಿಟ್ಟರೆ ಕರಾಚಿ ಬಿಟ್ಟು ಕದಲಿಲ್ಲ.

ಹಾಗಾದರೆ ದಾವೂದ್ ಇಬ್ರಾಹಿಂ ಕಥೆ?

ಹಾಗಾದರೆ ದಾವೂದ್ ಇಬ್ರಾಹಿಂ ಕಥೆ?

ದಾವೂದ್ ಇಬ್ರಾಹಿಂ ಆರೋಗ್ಯ ತೀವ್ರ ಹದಗೆಟ್ಟಿದ್ದು ಮಾರುಕಟ್ಟೆಯಲ್ಲಿನ ಸ್ಥಿತಿಗತಿಗಳನ್ನು ಪರೋಕ್ಷವಾಗಿ ನಿಭಾಯಿಸುತ್ತಿದ್ದ ಐಎಸ್ಐ ಈಗ ನೇರವಾಗಿ ಕಣಕ್ಕಿಳಿದಿದೆ. ಡಿ ಗ್ಯಾಂಗಿನ ಸಕಲ ಕುಕೃತ್ಯಗಳನ್ನು ನೋಡಿಕೊಳ್ಳುತ್ತಿದ್ದ ಶಕೀಲ್ ಹೆಸರಿನಲ್ಲಿ ಐಎಸ್ಐ ತನ್ನ ಹಿಡಿತ ಸಾಧಿಸಿದೆ.

English summary
Chhota Shakeel is dead and the entire D-Syndicate has been taken over by the ISI. There were doubts whether Shakeel the man who ran the India operations for the D-syndicate was dead or not. Highly placed sources have now confirmed that Shakeel had indeed died in January 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X