ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲಿ ದ್ವೀಪದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಬಂಧನ

By Mahesh
|
Google Oneindia Kannada News

ಬಾಲಿ, ಅ.26: ಭೂಗತ ಪಾತಕಿ ಛೋಟಾ ರಾಜನ್ ಅವರನ್ನು ಇಂಟರ್ ಪೋಲ್ ಬಂಧಿಸಿದೆ. ರಾಜೇಂದ್ರ ಸದಾಶಿವ್ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್ ಅವರನ್ನು ಸುಮಾರು ಎರಡು ದಶಕಗಳ ನಂತರ ಕೊನೆಗೂ ಬಂಧಿಸಲಾಗಿದೆ. ಆಸ್ಟ್ರೇಲಿಯನ್ ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಇಂಡೋನೇಷಿಯಾ ಪೊಲೀಸರು ರಾಜನ್ ಅವರನ್ನು ವಶಪಡಿಸಿಕೊಂಡಿದ್ದಾರೆ.

ಭೂಗತ ಪಾತಕಿ ದಾವುದ್ ಇಬ್ರಾಹಿಂ ಆಪ್ತನಾಗಿದ್ದ ಛೋಟಾ ರಾಜನ್ ಭಾರತದಲ್ಲಿ 15 -20 ಕೊಲೆ ಗಲಭೆ, ಹಿಂಸಾಚಾರ ಪ್ರಕರಣಗಳ ಆರೋಪಿಯಾಗಿದ್ದು, ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯಲ್ಲಿದ್ದಾರೆ.

Chhota Rajan arrested in Bali, RAW ascertaining information

ಆಸ್ಟ್ರೇಲಿಯಾದಲ್ಲಿ ಛೋಟಾ ರಾಜನ್ ನೆಲೆಸಿರುವ ಬಗ್ಗೆ ಕಳೆದ ಜುಲೈನಲ್ಲಿ ಇಂಟರ್ ಪೋಲ್ ಗೆ ಖಚಿತ ಮಾಹಿತಿ ಸಿಕ್ಕಿತ್ತು. ಛೋಟಾ ರಾಜನ್ ಇರುವಿಕೆ ಬಗ್ಗೆ ಆತನ ಸಹಚರರೇ ಮಾಹಿತಿ ನೀಡಿದ್ದರು. [ಛೋಟಾ ರಾಜನ್ : ಕಳ್ಳಭಟ್ಟಿ ಖದೀಮ, ಡಾನ್ ಆಗಿದ್ದು ಹೇಗೆ?]

ಇತ್ತೀಚೆಗೆ ಬಾಲಿ ದ್ವೀಪಕ್ಕೆ ಛೋಟಾ ರಾಜನ್ ಹೋಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ರಾಜನ್ ನ ಪ್ರತಿ ಹೆಜ್ಜೆಯ ಗುರುತಿನ ನಿಗಾ ಇರಿಸಿದ್ದ RAW, ಇಂಟರ್ ಪೋಲ್ ಹಾಗೂ ಇಂಡೋನೇಷಿಯಾ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಯಶಸ್ಸು ಕಂಡಿದ್ದಾರೆ.

English summary
The Intepol have arrested Chhota Rajan. The fugitive whose original name is Rajendra Sadashiv Nikalje was on the run for almost two decades and based on information from the Australian police, the Indonesian authorities detained Rajan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X