ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿ ಹೆಚ್ಚಿಸಲು ನಾಲ್ಕು ಇಮೇಲ್ ಸಾಕು!

|
Google Oneindia Kannada News

ಬೆಂಗಳೂರು, ಡಿ. 5 : ನಿಮಗೆ ನಿರಂತರ ತಲೆನೋವು, ಹೊಟ್ಟೆನೋವು, ಭುಜ ನೋವು, ಬೆನ್ನು ನೋವು ಈ ರೀತಿ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಿವೆಯೇ? ಹಾಗಾದರೆ ನೀವು 'ಇನ್ ಬಾಕ್ಸ್ ಸ್ಟ್ರೆಸ್' ನಿಂದ ಬಳಲುತ್ತಿದ್ದೀರಿ ಎಂದರ್ಥ.

ಅರೆ ಇದೇನು ಇನ್ ಬಾಕ್ಸ್ ಸ್ಟ್ರೆಸ್? ಹೊಸದೊಂದು ರೋಗದ ಹೆಸರು ಅಂದುಕೊಂಡ್ರಾ,,, ಅಲ್ಲಾ ಬಿಡಿ. ಮೊಬೈಲ್ ಮೆಸೇಜ್ ಮತ್ತು ಕಚೇರಿಯ ಇ ಮೇಲ್ ಗಳು ಬಿಪಿ ಹೆಚ್ಚಿಸಬಹುದು ಎಂಬ ಸಂಗತಿಯನ್ನು ಬ್ರಿಟಿಷ್ ಅಧ್ಯಯನ ವರದಿಯೊಂದು ಸ್ಪಷ್ಟಪಡಿಸಿದೆ.[ಟ್ವೀಟ್ ಸಂದೇಶ ಭಾಷೆ ರಹಸ್ಯ ಬಯಲು]

stress

ನಿರಂತರವಾಗಿ ಮೊಬೈಲ್ ಇನ್ ಬಾಕ್ಸ್ ತುಂಬಿಕೊಳ್ಳುವ ಮೆಸೇಜ್ ಗಳು, ಕಚೇರಿಯಲ್ಲಿ ಕುಳಿತಾಗ ಸಹೋದ್ಯೋಗಿಯಿಂದ ಬರುವ ಇಮೇಲ್, ಇಲ್ಲವೇ ಮೇಲಿನ ಸಿಬ್ಬಂದಿಯಿಂದ ಪದೇ ಪದೇ ಉತ್ತರ ಕೇಳಿ ಬರುವ ಇಮೇಲ್ ಗಳು ದೇಹದ ರಕ್ತದೊತ್ತಡ ಹೆಚ್ಚಿಸುವುದಲ್ಲದೇ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಇಂಗ್ಲೆಂಡ್ ಸಂಶೋಧನೆ ಹೇಳಿದೆ.

ಮನೆಯಲ್ಲೇ ಕುಳಿತು ಆರಾಮವಾಗಿ ಕೆಲಸ ಮಾಡುತ್ತಿದದ್ದೀರಿ ಎಂದಿಟ್ಟುಕೊಳ್ಳಿ, ಇದ್ದಕ್ಕಿದ್ದಂತೆ ಕಚೇರಿ ಕಡೆಯಿಂದ ಇ ಮೇಲ್ ಗಳ ಮಳೆ ಸುರಿಯಲು ಆರಂಭಿಸುತ್ತಿದೆ. ಇದಕ್ಕೆ ಉತ್ತರ ನೀಡುತ್ತ ಹೋದಂತೆ ನಿಮ್ಮ ರಕ್ತದೊತ್ತಡ ಹೆಚ್ಚಾಗುವುದಲ್ಲದೇ ಮಾನಸಿಕ ಕಿರಿ ಕಿರಿ ಆರಂಭವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.[ಎಚ್ಎಎಲ್ ಇಮೇಲ್ ಐಡಿ ಹ್ಯಾಕ್ ರಾದ್ಧಾಂತ!]

ವಾರದ ಕೊನೆಯಲ್ಲಿ ತಲೆನೋವು, ಹೊಟ್ಟೆನೋವು, ಭುಜ ನೋವು ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವಕ್ಕೆ ಪರಿಹಾರ ಕಂಡುಕೊಳ್ಳುವಷ್ಟರಲ್ಲಿ ಹೊಸ ವಾರ ಆರಂಭವಾಗಿರುತ್ತದೆ. ಮತ್ತೆ ಸಮಸ್ಯೆಯ ಸರಣಿ ಮುಂದುವರಿಯುತ್ತದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆ ನಡೆದಿದ್ದು ಹೇಗೆ?
ಬ್ರಿಟಿಷ್ ಕೋಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 124 ಜನರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆರೋಗ್ಯ, ಅಕಾಡಮಿಕ್, ಹಣಕಾಸು, ಆಡಳಿತ, ಮಾಹಿತಿ ತಂತ್ರಜ್ಞಾನ ಹೀಗೆ ಎಲ್ಲ ಕ್ಷೇತ್ರದವರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಯಿತು.

ಅಧ್ಯಯನಕ್ಕೆ ಒಳಪಟ್ಟ ಕೆಲ ಮಂದಿ ನಾವು ದಿನಕ್ಕೆ 2-3 ಬಾರಿ ಮಾತ್ರ ಮೇಲ್ ಚೆಕ್ ಮಾಡುತ್ತೇವೆ ಎಂದು ತಿಳಿಸಿದ್ದರು. ಅಗತ್ಯ ಬಿದ್ದಾಗಲೆಲ್ಲಿ ಮೇಲ್ ಚೆಕ್ ಮಾಡುತ್ತೇವೆ ಎಂದಿದ್ದರು. ಅಧ್ಯಯನಕ್ಕೆ ಒಳಪಡಿಸಿದ್ದ ಎಲ್ಲರಿಗೂ ಸಾಧ್ಯವಾದಾಗಲೆಲ್ಲ ಮೇಲ್ ಪರಿಶೀಲಿಸಿ ಎಂದು ಸಂಶೋಧಕರು ತಿಳಿಸಿದ್ದರು.

ಇದಾದ ಒಂದು ವಾರದ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಪದೇ ಪದೇ ಮೇಲ್ ಚೆಕ್ ಮಾಡುವುದರಿಂದ ಎಲ್ಲರಲ್ಲೂ ಮಾನಸಿಕ ಒತ್ತಡ ಹೆಚ್ಚಾಯಿತು. ಶೀಘ್ರ ಕೋಪ ಬರುವುದು, ಬೆನ್ನು ನೋವು ಮತ್ತಿತರ ತೊಂದರೆಗಳು ಕಾಣಿಸಿಕೊಳ್ಳಲು ಆರಂಭವಾದವು ಎಂದು ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ದಾರೆ.

English summary
Feeling stressed? You may be suffering from inbox burnout! People feel less stressed when they check their emails less often, a new study has found. The research also found that people find it difficult to resist the temptation of checking their emails.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X