ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರನಲ್ಲಿ ಮಂಜುಗಡ್ಡೆ: ದೃಢಪಡಿಸಿದ ಇಸ್ರೋದ ಚಂದ್ರಯಾನ ನೌಕೆ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 21: ಚಂದ್ರನ ದ್ರುವ ಪ್ರದೇಶಗಳಲ್ಲಿನ ಕಪ್ಪನೆಯ ಹಾಗೂ ತಣ್ಣನೆಯ ಭಾಗಗಳಲ್ಲಿ ಘನೀಕೃತ ನೀರಿನ ಅಸ್ತಿತ್ವ ಇದೆ ಎಂದು ನಾಸಾ ತಿಳಿಸಿದೆ.

ಭಾರತ 10 ವರ್ಷಗಳ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ-1 ಬಾಹ್ಯಾಕಾಶ ನೌಕೆಯು ನೀಡಿರುವ ಮಾಹಿತಿಗಳ ಆಧಾರದಲ್ಲಿ ನಾಸಾ ಈ ಮಾಹಿತಿ ನೀಡಿದೆ.

ಚಂದ್ರನ ಮೇಲ್ಮೈನಲ್ಲಿ ಸಾಕಷ್ಟು ಪ್ರಮಾಣದ ಮಂಜುಗಡ್ಡೆಯಿದೆ. ಕೆಲವೇ ಮಿಲಿಮೀಟರ್‌ಗಳ ಅಂತರದಲ್ಲಿ ನೀರು ಸಿಗುವ ಸಾಧ್ಯತೆಯಿದೆ. ಇದರಿಂದ ಭವಿಷ್ಯದ ಚಟುವಟಿಕೆಗಳಿಗೆ ಸಂಪನ್ಮೂಲವಾಗಿ, ಜತೆಗೆ ಚಂದ್ರನಲ್ಲಿ ವಾಸ ಮಾಡುವ ಉದ್ದೇಶಕ್ಕೂ ನೆರವಾಗಲಿದೆ.

ಮೊದಲ ಅಂತರಿಕ್ಷ ಯಾನದ 19000 ಗಂಟೆಗಳ ಸಂಭಾಷಣೆಯ ಆಡಿಯೋ ಬಿಡುಗಡೆಮೊದಲ ಅಂತರಿಕ್ಷ ಯಾನದ 19000 ಗಂಟೆಗಳ ಸಂಭಾಷಣೆಯ ಆಡಿಯೋ ಬಿಡುಗಡೆ

ಮಂಜುಗಡ್ಡೆಯು ಅಲ್ಲಲ್ಲಿ ಹಂಚಿಹೋಗಿದ್ದು, ಬಹಳ ಪುರಾತನ ಕಾಲದ್ದಿರಬಹುದು ಎಂದು ನಾಸಾದ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.

chandrayan-1 data confirms presence of ice on moon

ದಕ್ಷಿಣ ಧ್ರುವದಲ್ಲಿ ಚಂದ್ರನ ಕುಳಿಗಳಲ್ಲಿ ಹೆಚ್ಚಿನ ಪ್ರಮಾಣದ ಮಂಜುಗಡ್ಡೆ ಸೇರಿಕೊಂಡಿವೆ. ಉತ್ತರ ಧ್ರುವದಲ್ಲಿನ ಮಂಜುಗಡ್ಡೆ ಅಧಿಕ ಪ್ರಮಾಣದಲ್ಲಿ ಹಂಚಿಹೋಗಿದೆ.

ಚಂದ್ರನ ಅಂಗಳದಲ್ಲಿ ನೀರಿನ ಮಂಜುಗಡ್ಡೆ ಇರುವ ನಿರ್ದಿಷ್ಟ ಲಕ್ಷಣಗಳನ್ನು ನಾಸಾ 'ಮೂನ್ ಮೈನರಾಲಜಿ ಮ್ಯಾಪ್ಪರ್' (ಎಂ3) ಸಾಧನ ನೀಡಿದ ಮಾಹಿತಿಗಳ ಅಧ್ಯಯನ ನಡೆಸಿ ಖಚಿತಪಡಿಸಿಕೊಂಡಿದೆ.

ದೈತ್ಯ ಗುರುವಿಗೆ ಇದೆ ಇನ್ನೂ ಡಜನ್ ಹೊಸ ಚಂದ್ರರ ನಂಟುದೈತ್ಯ ಗುರುವಿಗೆ ಇದೆ ಇನ್ನೂ ಡಜನ್ ಹೊಸ ಚಂದ್ರರ ನಂಟು

ಚಂದ್ರಯಾನ-1 ಬಾಹ್ಯಾಕಾಶ ನೌಕೆಯನ್ನು ಇಸ್ರೋ 2008ರಲ್ಲಿ ಉಡಾವಣೆ ಮಾಡಿತ್ತು. ಚಂದ್ರನಲ್ಲಿ ಘನೀಕೃತ ಮಂಜುಗಡ್ಡೆ ಇರುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷವಾಗಿ ಸಿದ್ಧಗೊಳಿಸಿದ್ದ ಎಂ3 ಸಾಧನವನ್ನು ಅದರಲ್ಲಿ ಅಳವಡಿಸಲಾಗಿತ್ತು.

English summary
NASA confirmed the presence of of ice on the Moon's polar regions using data from the Chandrayan-1 spacecraft launched by India 10 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X