ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳನ್ನು ಏಕೆ ವಜಾಗೊಳಿಸಿದೆ; ಕಣ್ಣೀರು ಹಾಕಿದ ಸಿಇಓ ವಾಲೇಕ್!

|
Google Oneindia Kannada News

ನವದೆಹಲಿ, ಆಗಸ್ಟ್ 10: ಖಾಸಗಿ ಕಂಪನಿಗಳು ಇತ್ತೀಚಿಗೆ ಎಲ್ಲದಕ್ಕೂ ಸಾಮಾಜಿಕ ಮಾಧ್ಯಮಗಳ ಮೇಲೆ ಅವಲಂಬಿತವಾಗಿವೆ. ಇಂಥದರ ಮಧ್ಯೆ ಸಾರ್ವಜನಿಕ ವೇದಿಕೆಯಲ್ಲಿ ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಕಂಪನಿಯ ಸಿಇಓ ಘೋಷಿಸಿರುವುದು ಭಾರೀ ಟೀಕೆಗೆ ಗುರಿಯಾಗಿದೆ.

ಹೈಪರ್‌ಸೋಶಿಯಲ್‌ನ ಸಿಇಒ ಬ್ರಾಡೆನ್ ವಾಲೇಕ್ ಅವರು ಅಳುವ ಸೆಲ್ಫಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಸೆಲ್ಫಿ ವಿಡಿಯೋದಲ್ಲಿ ಅವರು ತಮ್ಮ ಕೆಲವು ಉದ್ಯೋಗಿಗಳನ್ನು ಏಕೆ ಕೆಲಸದಿಂದ ತೆಗೆದುಹಾಕಬೇಕಾಯಿತು ಎಂದು ವಿವರಿಸಿದರು. ಅವರ ಪೋಸ್ಟ್ ಅನ್ನು ಆನ್‌ಲೈನ್‌ನಲ್ಲಿ ಅನೇಕರು ಅಸಹ್ಯಕರ ಎಂದು ಟೀಕಿಸಿದ್ದಾರೆ.

ಬಲವಂತವಾಗಿ ಹಿಡಿದ ಅಭಿಮಾನಿಯ ಕೈಯಿಂದ ತಂದೆಯನ್ನು ರಕ್ಷಿಸಿದ ಆರ್ಯನ್ ಖಾನ್ಬಲವಂತವಾಗಿ ಹಿಡಿದ ಅಭಿಮಾನಿಯ ಕೈಯಿಂದ ತಂದೆಯನ್ನು ರಕ್ಷಿಸಿದ ಆರ್ಯನ್ ಖಾನ್

ತಮ್ಮ ಮುಖ್ಯ ಸೇವೆಗಳ ಮಾರಾಟವನ್ನು ನಿಲ್ಲಿಸಲು ನಿರ್ಧರಿಸಿದ್ದರು. ಇದರ ಜೊತೆಗೆ ಹೊಸ ಸೇವೆಯತ್ತ ಗಮನ ಹರಿಸಲು ಪ್ರಾರಂಭಿಸಿದ್ದರಿಂದ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂದು ಬ್ರಾಡೆನ್ ವಾಲೇಕ್ ತಮ್ಮ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದಾರೆ.

CEOs crying selfie on LinkedIn after firing employees: criticism from Netizens

ಎಲ್ಲಾ ಸಿಇಓಗಳು ಕಲ್ಲು ಹೃದಯದವರಲ್ಲ: "ಪ್ರತಿಯೊಬ್ಬ ಸಿಇಒಗಳು ಕಲ್ಲು ಹೃದಯದವರಲ್ಲ, ಅವರು ಜನರನ್ನು ಕೆಲಸದಿಂದ ತೆಗೆದು ಹಾಕಬೇಕಾದಾಗ ಯಾವುದೇ ಕಾಳಜಿ ವಹಿಸುವುದಿಲ್ಲ. ಆದರೆ ಜನರು ಇದನ್ನು ನೋಡಬೇಕೆಂದು ನಾನು ಬಯಸುತ್ತೇನೆ. ನನ್ನ ಉದ್ಯೋಗಿಗಳನ್ನು ನಾನು ಎಷ್ಟರ ಮಟ್ಟಿಗೆ ಪ್ರೀತಿಸುತ್ತೇನೆ ಎಂದು ಅವರು ಅರಿತುಕೊಳ್ಳಬೇಕು," ಎಂದು ವಾಲೇಕ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.

"ನನ್ನ ಉದ್ಯೋಗಿಗಳನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳುವುದು ವೃತ್ತಿಪರವಲ್ಲ ಎಂದು ನನಗೆ ತಿಳಿದಿದೆ. ಆದರೆ ನನ್ನ ಹೃದಯದಿಂದ ಎಷ್ಟು ಉತ್ತಮನಾಗಿದ್ದೇನೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಂದೂ. ಒಂದೊಂದು ಕಥೆ. ಅವರನ್ನು ನಗಿಸುವ ಪ್ರತಿಯೊಂದು ವಿಷಯವೂ ಅವರನ್ನು ಅಳುವಂತೆ ಮಾಡುವ ಪ್ರತಿಯೊಂದು ವಿಷಯವೂ. ಅವರ ಕುಟುಂಬಗಳು. ಅವರ ಸ್ನೇಹಿತರು. ಅವರ ಹವ್ಯಾಸಗಳು," ಎಂದು ಹೇಳಿದ್ದಾರೆ.

ಕಣ್ಣೀರು ಹಾಕುವ ವಿಡಿಯೋಗೆ ಆಕ್ರೋಶ: ಈ ಪೋಸ್ಟ್ ಸಾಕಷ್ಟು ಗಮನ ಸೆಳೆಯಿತು. ಆದಾಗ್ಯೂ, ಅವರು ಪೋಸ್ಟ್ ಮಾಡಿದ ಅಳುವ ಸೆಲ್ಫಿಗೆ ಹೆಚ್ಚಿನ ಜನರು ಕೋಪಗೊಂಡಿದ್ದಾರೆ. "ನೀವು ಅಳುತ್ತಿರುವ ಚಿತ್ರವನ್ನು ಏಕೆ ಪೋಸ್ಟ್ ಮಾಡುತ್ತೀರಿ? ಇದು ನಿಮಗಾಗಿ ಅಥವಾ ಅವರಿಗಾಗಿ?" ಎಂದು ಪ್ರಶ್ನೆ ಮಾಡಿದ್ದಾರೆ.

English summary
CEO's crying selfie on LinkedIn after firing employees: criticism from Netizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X