ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗವಾಗಿ ಹರಡುವ ಹೊಸ ಸೆಂಟಾರಸ್ ಕೋವಿಡ್ ರೂಪಾಂತರ ಬಗ್ಗೆ ಕಳವಳ

|
Google Oneindia Kannada News

ಕೊರೊನಾ.. ಕೊರೊನಾ.. ಕೊರೊನಾ... ಈ ಹೆಸರು ಕೇಳಿದರೆ ಅದೆಷ್ಟು ಬೇಸರ ಆಗಿದೆ ಅಂದರೆ ಈ ಪದ ಕೇಳಿದ ತಕ್ಷಣ ಆ ಸ್ಥಳದಿಂದ, ಇದನ್ನು ಮಾತನಾಡುವವರಿಂದ ದೂರ ಉಳಿಯುವಷ್ಟು ಜನ ಬೇಸತ್ತಿದ್ದಾರೆ. ಆದರೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಹೊಸ ಹೊಸ ತಳಿಗಳು ಜೀವಪಡೆದುಕೊಳ್ಳುತ್ತಿವೆ.

ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲು ಆಗಾಗ ಮಾರ್ಗಸೂಚಿ ಬಿಡುಗಡೆ ಮಾಡುತ್ತಲೇ ಇರುತ್ತದೆ. ಈಗ ಮತ್ತೆ ಹೊಸದೊಂದು ತಳಿಯ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ. ಅದು BA.2.75 ರೂಪಾಂತರ. ಇದಕ್ಕೆ ಸೆಂಟಾರಸ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

Breaking: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ದಾಖಲು, ಕೊರೊನಾ ಶಂಕೆ! Breaking: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ದಾಖಲು, ಕೊರೊನಾ ಶಂಕೆ!

ಮೇ ತಿಂಗಳಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಗಿಯಿತು. ಬಳಿಕ ಇದು ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಹೊಸ ರೂಪಾಂತರ ಅದರ ಓಮಿಕ್ರಾನ್ ಸಂಬಂಧಿಗಳಾದ BA.5 ಮತ್ತು BA.2 ರೂಪಾಂತರಗಳಿಗಿಂತ ಇನ್ನೂ ಹೆಚ್ಚಿನ ವೇಗದಲ್ಲಿ ಹರಡುತ್ತದೆ ಎಂದು ಭಾವಿಸಲಾಗಿದೆ ಮತ್ತು ಇದು ಈಗ UK, US, ಆಸ್ಟ್ರೇಲಿಯಾ, ಜರ್ಮನಿ ಮತ್ತು ಕೆನಡಾ ಸೇರಿದಂತೆ ಸುಮಾರು 10 ಇತರ ದೇಶಗಳಲ್ಲಿ ಪತ್ತೆಯಾಗಿದೆ.

BA.2.75 ತಳಿ

BA.2.75 ತಳಿ

ಇದು ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ಗಂಭೀರವಾದ ಕಾಯಿಲೆಗೆ ಕಾರಣವಾಗಬಹುದು ಎಂಬುದು ಅಸ್ಪಷ್ಟವಾಗಿದೆ. ಆದರೆ ವಿಜ್ಞಾನಿಗಳು ಲಸಿಕೆಗಳು ಮತ್ತು ಹಿಂದಿನ ಸೋಂಕಿನಿಂದ ಪ್ರತಿರಕ್ಷೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ (ECDC) ಜುಲೈ 7 ರಂದು BA.2.75 ಅನ್ನು ಮೇಲ್ವಿಚಾರಣೆಯಲ್ಲಿನ ರೂಪಾಂತರ ಎಂದು ಗೊತ್ತುಪಡಿಸಿತು. ಅಂದರೆ ಇದು ಹೆಚ್ಚು ಹರಡುವ ಸೂಚನೆಗಳಿವೆ. ಓಮಿಕ್ರಾನ್ ಪೂರ್ವ ತಳಿಗಳಿಗೆ ಹೋಲಿಸಿದರೆ BA.2.75 ತಳಿಯ ಬಗ್ಗೆ ತಜ್ಞರು ಹೆಚ್ಚಿನ ಕಾಳಜಿಯನ್ನು ಉತ್ತೇಜಿಸಿದ್ದಾರೆ.

ಲಸಿಕೆ ಪಡೆದವರಿಗೆ ಪರಿಣಾಮ ಕಡಿಮೆ

ಲಸಿಕೆ ಪಡೆದವರಿಗೆ ಪರಿಣಾಮ ಕಡಿಮೆ

ಈ ರೂಪಾಂತರ ಜನರಲ್ಲಿ ಪ್ರೋಟೀನ್‌ ಕಡಿಮೆ ಇರುವವರಲ್ಲಿ ಪರಿಣಾಮಕಾರಿಯಾಗಿ ಜೀವಕೋಶಗಳ ಮೇಲೆ ಪರಿಣಾಮ ಬೀರಲು ಅನುವು ಮಾಡಿಕೊಡುತ್ತದೆ ಎಂದು ಮಿನ್ನೇಸೋಟಾದ ರೋಚೆಸ್ಟರ್‌ನಲ್ಲಿರುವ ಮೇಯೊ ಕ್ಲಿನಿಕ್‌ನಲ್ಲಿ ಕ್ಲಿನಿಕಲ್ ವೈರಾಲಜಿ ನಿರ್ದೇಶಕ ಮ್ಯಾಥ್ಯೂ ಬಿನ್ನಿಕರ್ ಹೇಳಿದರು. ಆದರೆ ಈ ಹಿಂದೆ ತೆಗೆದುಕೊಂಡ ಲಸಿಕೆ ರಕ್ಷಣಾತ್ಮಕ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಇದರಿಂದಾಗಿ ಹೊಸ ರೂಪಾಂತರಿ ವೈರಲ್ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ತೀವ್ರತರವಾದ ಕೋವಿಡ್ ವಿರುದ್ಧ ಲಸಿಕೆಗಳು ಮತ್ತು ಬೂಸ್ಟರ್‌ಗಳು ಉತ್ತಮ ರಕ್ಷಣೆಯನ್ನು ನೀಡುತ್ತವೆ ಎಂದು ತಜ್ಞರು ಹೇಳುತ್ತಾರೆ.

ಹೆಚ್ಚಿನ ಜಾಗರೂಕತೆ ಅವಶ್ಯಕತೆ

ಹೆಚ್ಚಿನ ಜಾಗರೂಕತೆ ಅವಶ್ಯಕತೆ

ಇತ್ತೀಚಿನ ಓಮಿಕ್ರಾನ್ ರೂಪಾಂತರ BA.2.75 ಸಾಂಕ್ರಾಮಿಕ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಬಹುದೇ? ಎಂದು ತಿಳಿಯಲು ಹಲವಾರು ವಾರಗಳನ್ನು ತೆಗೆದುಕೊಳ್ಳಬಹುದು. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಗೆ ವೈರಲ್ ಸೀಕ್ವೆನ್ಸಿಂಗ್ ಮಾಹಿತಿಯನ್ನು ಪೂರೈಸುವ ಕಂಪನಿಯಾದ ಹೆಲಿಕ್ಸ್‌ನ ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಶಿಶಿ ಲುವೊ, BA.2.75 ಕೊರೋನ ವೈರಸ್ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಮತ್ತು ಹರಡುತ್ತಿರುವ ಮತ್ತೊಂದು ಜ್ಞಾಪನೆಯಾಗಿದೆ ಎಂದು ಹೇಳಿದರು. "ನಾವು ಪೂರ್ವ-ಸಾಂಕ್ರಾಮಿಕ ಜೀವನಕ್ಕೆ ಮರಳಬಹುದು, ಆದರೆ ನಾವು ಇನ್ನೂ ಜಾಗರೂಕರಾಗಿರಬೇಕು. ಯಾಕೆಂದರೆ ನಾವು ಹೆಚ್ಚಿನ ಮಟ್ಟದ ಅಪಾಯದೊಂದಿಗೆ ಬದುಕುತ್ತಿದ್ದೇವೆ" ಎಂದು ಅವರು ಹೇಳಿದರು.

ಯುಎನ್ ಹೆಲ್ತ್ ಏಜೆನ್ಸಿ ಹೇಳುವುದೇನು?

ಯುಎನ್ ಹೆಲ್ತ್ ಏಜೆನ್ಸಿ ಹೇಳುವುದೇನು?

ವಿಶ್ವಾದ್ಯಂತ ವರದಿಯಾದ ಹೊಸ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಸತತ ಐದನೇ ವಾರದಲ್ಲಿ ಏರಿಕೆಯಾಗಿದೆ ಆದರೆ ಸಾವಿನ ಸಂಖ್ಯೆ ತುಲನಾತ್ಮಕವಾಗಿ ಸ್ಥಿರವಾಗಿದೆ ಎಂದು WHO ಗುರುವಾರ ವರದಿ ಮಾಡಿದೆ.

ಯುಎನ್ ಹೆಲ್ತ್ ಏಜೆನ್ಸಿಯ ಕೋವಿಡ್ ಸಾಂಕ್ರಾಮಿಕದ ಸಾಪ್ತಾಹಿಕ ವಿಮರ್ಶೆಯಲ್ಲಿ, ಕಳೆದ ವಾರ 5.7 ಮಿಲಿಯನ್ ಹೊಸ ಸೋಂಕುಗಳು ದೃಢಪಟ್ಟಿವೆ ಎಂದು WHO ಹೇಳಿದೆ, ಇದು ಶೇಕಡಾ 6 ರಷ್ಟು ಹೆಚ್ಚಳವಾಗಿದೆ. 9,800 ಸಾವುಗಳು ಸಂಭವಿಸಿವೆ, ಇದು ಹಿಂದಿನ ವಾರದ ಅಂಕಿ ಅಂಶಕ್ಕೆ ಹೋಲುತ್ತದೆ. ಈ ವಾರದ ಆರಂಭದಲ್ಲಿ, WHO ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸಾಂಕ್ರಾಮಿಕ ರೋಗವು ಇನ್ನೂ ಜಾಗತಿಕ ತುರ್ತುಸ್ಥಿತಿಯಾಗಿ ಅರ್ಹತೆ ಪಡೆದಿದೆ ಮತ್ತು ಇತ್ತೀಚಿನ ಸ್ಪೈಕ್ ಬಗ್ಗೆ ಅವರು ಕಾಳಜಿ ಹೊಂದಿದ್ದಾರೆ ಎಂದು ಹೇಳಿದರು.

English summary
What is Centaurus Covid variant? New fast-spreading Covid variant that has arrived in UK ; Know Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X