ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಅಧ್ಯಕ್ಷಗಿರಿ ಕುರ್ಚಿ ಗಟ್ಟಿಯಾಗಿಸಿಕೊಳ್ಳಲು ಕ್ಸಿ ಜಿನ್‌ಪಿಂಗ್ ಸೀಕ್ರೆಟ್ ಆಪರೇಷನ್!

|
Google Oneindia Kannada News

ಬೀಜಿಂಗ್, ಸೆಪ್ಟೆಂಬರ್ 26: ಚೀನಾದಲ್ಲಿ ಮುಂದಿನ ಸಾರಥಿ ಯಾರು ಎಂಬುದರ ಕುರಿತು ಚರ್ಚೆ ಶುರುವಾಗಿದೆ. ಕ್ಸಿ ಜಿನ್‌ಪಿಂಗ್ ತಮ್ಮ ಅಧಿಕಾರವಧಿಯನ್ನು ವಿಸ್ತರಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಪಟ್ಟಕ್ಕೆ ಏರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಗುಲ್ ಆಗುತ್ತಿದೆ.

ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷ(CCP)ದ 20ನೇ ರಾಜಕೀಯ ಸಭೆ (ಕಾಂಗ್ರೆಸ್)ಯಲ್ಲಿ ಎಲ್ಲ ತೀರ್ಮಾನಗಳು ಅಂತಿಮವಾಗಲಿವೆ. ಬೀಜಿಂಗ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಸಭೆಯು ರಾಣಿ ಎಲಿಜಬೆತ್ IIರ ಅಂತ್ಯಕ್ರಿಯೆಯ ಅದ್ಧೂರಿತನವನ್ನೂ ಮೀರಿ ನಿಲ್ಲುವಂತಿದೆ. ವಾರಾಂತ್ಯದಲ್ಲಿ ನಡೆಯುವ ಕಾಂಗ್ರೆಸ್ ಸಭೆಯು ಅಕ್ಟೋಬರ್ 16ರಂದು ಶುರುವಾಗುತ್ತದೆ. ಇದು ಪಕ್ಷದ ಐಕಮತ್ಯವನ್ನು ಪ್ರದರ್ಶಿಸುವುದು ಮತ್ತು ಕ್ಸಿ ಜಿನ್ ಪಿಂಗ್ ಪ್ರಾಧಾನ್ಯತೆಯನ್ನು ವೈಭವೀಕರಿಸಲು ವಿನ್ಯಾಸಗೊಳಿಸಿರುವ ವ್ಯವಸ್ಥಿತ ವ್ಯವಹಾರ ಎಂದು ಹೇಳಲಾಗುತ್ತಿದೆ.

ಎಸ್‌ಸಿಒ ಶೃಂಗಸಭೆ: ಪಾಕ್ ಪ್ರಧಾನಿ, ಚೀನಾ ಅಧ್ಯಕ್ಷರನ್ನು ಮಾತನಾಡಿಸುವುದಿಲ್ಲವೇ ಮೋದಿ!?ಎಸ್‌ಸಿಒ ಶೃಂಗಸಭೆ: ಪಾಕ್ ಪ್ರಧಾನಿ, ಚೀನಾ ಅಧ್ಯಕ್ಷರನ್ನು ಮಾತನಾಡಿಸುವುದಿಲ್ಲವೇ ಮೋದಿ!?

ಚೀನಾ ಅಧ್ಯಕ್ಷರ ಕುರ್ಚಿಯಲ್ಲಿ ಗಟ್ಟಿಯಾಗಿ ಉಳಿಯುವುದಕ್ಕೆ ಕ್ಸಿ ಜಿನ್ ಪಿಂಗ್ ಹೂಡಿರುವ ತಂತ್ರಗಾರಿಕೆ ಹೇಗಿದೆ?, ಕ್ಸಿ ಜಿನ್ ಪಿಂಗ್ ಅಧಿಕಾರ ವಿಸ್ತರಣೆಯು ಜಾಗತಿಕ ಮಟ್ಟದಲ್ಲಿ ಯಾವ ರೀತಿ ಪರಿಣಾಮ ಬೀರಬಲ್ಲದು?, ಕ್ಸಿ ಜಿನ್ ಪಿಂಗ್ ಅಧಿಕಾರ ವಿಸ್ತರಣೆಯ ಬಗ್ಗೆ ಅಂತಿಮ ತೀರ್ಮಾನ ಆಗುವುದು ಎಲ್ಲಿ? ಅದನ್ನು ತೀರ್ಮಾನಿಸುವ ಕಾಂಗ್ರೆಸ್ ವೇದಿಕೆಯು ಹೇಗಿದೆ? ಚೀನಾ ಮತ್ತು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭವಿಷ್ಯವೇನು ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಕ್ಸಿ ಜಿನ್ ಪಿಂಗ್ ಗೃಹಬಂಧನದ ವದಂತಿ

ಕ್ಸಿ ಜಿನ್ ಪಿಂಗ್ ಗೃಹಬಂಧನದ ವದಂತಿ

ಬೀಜಿಂಗ್‌ನಲ್ಲಿ ದಂಗೆ ಎದ್ದಿರುವುದರ ಕುರಿತು ಕೆಲವು ಭಾರತೀಯ ಮಾಧ್ಯಮಗಳಲ್ಲಿ ವದಂತಿಗಳು ಹಬ್ಬುತ್ತಿವೆ. ಇದರ ಹೊರತಾಗಿಯೂ ಕ್ಸಿ ಜಿನ್ ರಾಷ್ಟ್ರದ ಏಕಪಕ್ಷೀಯ ಉಸ್ತುವಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಸೇನಾ ಕಾರ್ಯಚಟುವಟಿಕೆಗಳು ಮತ್ತು ವಿಮಾನಗಳ ಸಾಮೂಹಿಕ ರದ್ಧತಿಯು ಕ್ಸಿ ಜಿನ್ ಪಿಂಗ್ ಗೃಹ ಬಂಧನದಲ್ಲಿ ಇರುವುದಕ್ಕೆ ಸಾಕ್ಷಿ ಎಂದು ಉಲ್ಲೇಖಿಸಲಾಗುತ್ತಿದೆ.

ಆದರೆ ಚೀನಾದ ರಾಜಕಾರಣ ಈಗ ಅಂದುಕೊಂಡಂತೆ ಇಲ್ಲ. ಚೈನೀಸ್ ಕಮ್ಯುನಿಷ್ಟ್ ಪಾರ್ಟಿಯ ಪ್ರಮುಖ ಘಟನೆಗಳ ಕುರಿತು ವದಂತಿಗಳು ಹರಡುತ್ತಿವೆ. ಇದರ ಮಧ್ಯೆ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ 200 ಶಾಶ್ವತ ಸದಸ್ಯರು, 170 ಪರ್ಯಾಯ ಸದಸ್ಯರು ಸೇರಿದಂತೆ ಒಟ್ಟು 2296 ಪ್ರತಿನಿಧಿಗಳು ಹಾಜರಾಗಲಿದ್ದಾರೆ. ಮೂರನೇ ಅವಧಿಯ ಆಳ್ವಿಕೆಯು ಕ್ಸಿ ಜಿನ್ ಪಿಂಗ್ ಅನ್ನು ರಬ್ಬರ್ ಸ್ಟಾಂಪ್ ರೀತಿ ಮಾಡುತ್ತದೆ, ಅಲ್ಲದೇ ಮಾವೋ ಝೆಡಾಂಗ್ ಆಳ್ವಿಕೆಯನ್ನೂ ಮೀರಿಸುವಂತೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಮೋದಿ ವಿರುದ್ಧ ಪುಟಿನ್ 'ಛೂ' ಬಾಣ; ರಷ್ಯಾ ಪರವಾಗಿ ಭಾರತಕ್ಕೆ ಬಂತಾ ಚೀನಾ!?ಮೋದಿ ವಿರುದ್ಧ ಪುಟಿನ್ 'ಛೂ' ಬಾಣ; ರಷ್ಯಾ ಪರವಾಗಿ ಭಾರತಕ್ಕೆ ಬಂತಾ ಚೀನಾ!?

ಪರಮಾಪ್ತ ನಾಯಕರಾಗಿ ಗುರುತಿಸಿಕೊಂಡ ಕ್ಸಿ ಜಿನ್ ಪಿಂಗ್

ಪರಮಾಪ್ತ ನಾಯಕರಾಗಿ ಗುರುತಿಸಿಕೊಂಡ ಕ್ಸಿ ಜಿನ್ ಪಿಂಗ್

ತಮ್ಮ ಅಧಿಕಾರವಧಿ ಅಂತ್ಯದ ಕಾಲದಲ್ಲೂ ಕ್ಸಿ ಜಿನ್ ಪಿಂಗ್ ಯಾವುದೇ ನಿಯಂತ್ರಣಗಳಿಲ್ಲದ ಪರಮಾಪ್ತ ನಾಯಕರಾಗಿ ಗುರುತಿಸಿಕೊಂಡಿದ್ದಾ. ಜಾರ್ಜ್ ಆರ್ವೆಲ್ ಉಲ್ಲೇಖಿಸಿದಂತೆ "ಎಲ್ಲಾ ಪ್ರಾಣಿಗಳು ಒಂದೇ ಆಗಿದ್ದರೂ, ಕೆಲವು ಪ್ರಾಣಿಗಳು ಇತರೆ ಪ್ರಾಣಿಗಳಿಗಿಂತ ಉತ್ತಮವಾಗಿರುತ್ತವೆ," ಸಾಲನ್ನು ಹೇಳಲಾಗುತ್ತಿದೆ. ಅಂದರೆ ಚೀನಾದಲ್ಲಿ ಈ ಹಂತದಲ್ಲಿ ಕ್ಸಿ ಜಿನ್ ಪಿಂಗ್ ಎದುರಿಗೆ ಸಮಾನಾಂತರ ಅಥವಾ ಅವರಿಗಿಂತ ಉತ್ತಮ ನಾಯಕರ ಸ್ಥಾನದಲ್ಲಿ ಯಾವೊಬ್ಬ ನಾಯಕರೂ ಗುರುತಿಸಿಕೊಂಡಿಲ್ಲ. ಚೀನಾದಲ್ಲಿ ಕ್ಸಿ ಜಿನ್ ಪಿಂಗ್ ರಿಗೆ ಸಮನಾದ ಮತ್ತೊಬ್ಬ ನಾಯಕರಿಲ್ಲ.

2018ಕ್ಕೂ ಪೂರ್ವದಲ್ಲಿ ಚೀನಾದ ಯಾವುದೇ ಅಧ್ಯಕ್ಷರು ಎರಡಕ್ಕಿಂತ ಹೆಚ್ಚು ಅವಧಿ ಅಧಿಕಾರದಲ್ಲಿ ಉಳಿಯುವಂತಿಲ್ಲ ಎಂಬ ಕಟ್ಟುನಿಟ್ಟಿನ ಕಾನೂನು ಜಾರಿಯಲ್ಲಿತ್ತು. ಆದರೆ ಇದೇ ಕ್ಸಿ ಜಿನ್ ಪಿಂಗ್ 2018ರಲ್ಲಿ ಈ ಮಿತಿಯನ್ನು ವಿಧಿಸುವ ಕಾನೂನನ್ನು ರದ್ದುಗೊಳಿಸಿದರು. ಇದರ ಪರಿಣಾಮವಾಗಿಯೇ ಕ್ಸಿ ಜಿನ್ ಪಿಂಗ್ ಇದೀಗ ಚೈನೀಸ್ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಮಿಲಿಟರಿ ಆಯೋಗದ (CMC) ಅಧ್ಯಕ್ಷೀಯ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮುಂದಿನ ತಿಂಗಳು ಕಮ್ಯೂನಿಸ್ಟ್ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ

ಮುಂದಿನ ತಿಂಗಳು ಕಮ್ಯೂನಿಸ್ಟ್ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ

ನವೆಂಬರ್ 2021ರಲ್ಲಿ ಕೇಂದ್ರ ಸಮಿತಿಯು ಹೊಸ ಯುಗಕ್ಕಾಗಿ ಚೀನೀ ಗುಣಲಕ್ಷಣಗಳೊಂದಿಗೆ ಕ್ಸಿ ಜಿನ್‌ಪಿಂಗ್ ಚಿಂತನೆಯನ್ನು ಅಂಗೀಕರಿಸಿತು. ಇದು "ನಮ್ಮ ಕಾಲದಲ್ಲಿ ಅತ್ಯುತ್ತಮವಾದ ಚೀನೀ ಸಂಸ್ಕೃತಿ ಮತ್ತು ನೀತಿಯನ್ನು ಸಾಕಾರಗೊಳಿಸುತ್ತದೆ ಮತ್ತು ಚೀನೀ ಸಂದರ್ಭಕ್ಕೆ ಮಾರ್ಕ್ಸ್‌ವಾದವನ್ನು ಅಳವಡಿಸಿಕೊಳ್ಳುವಲ್ಲಿ ಹೊಸ ಪ್ರಗತಿಯನ್ನು ಪ್ರತಿನಿಧಿಸುತ್ತದೆ" ಎಂದು ಪ್ರತಿಪಾದಿಸಿತು. ಮುಂದಿನ ತಿಂಗಳು ಪಕ್ಷದ ಸಂವಿಧಾನಕ್ಕೆ ಈ ಕುರಿತು ತಿದ್ದುಪಡಿ ತರುವುದು ಖಚಿತವಾಗಿದೆ.

ಈ ನಿರೀಕ್ಷಿತ ತಿದ್ದುಪಡಿಗಳು "ಕಾಮ್ರೇಡ್ ಕ್ಸಿ ಜಿನ್‌ಪಿಂಗ್ ಸ್ಥಾನವನ್ನು ಭದ್ರಪಡಿಸುತ್ತವೆ. "ಹೊಸ ಯುಗಕ್ಕಾಗಿ ಚೀನೀ ಸಮಾಜವಾದವು ಕ್ಸಿ ಜಿನ್ ಪಿಂಗ್ ಅತಿಕ್ರಮಣ ಸ್ಥಿತಿಯನ್ನು ಪಾಲಿಸುವ ಲೆಕ್ಕಾಚಾರವನ್ನು ಹಾಕಿಕೊಳ್ಳುತ್ತಿವೆ. ಇತರೆ ತಿದ್ದುಪಡಿಗಳು ಚೈನೀಸ್ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಿಎಂಸಿ ಅಧ್ಯಕ್ಷರ ಅವಧಿಗೆ ನಿಗದಿಪಡಿಸಿದ್ದ ಸಮಯ ಮಿತಿಯನ್ನು ತೆಗೆದು ಹಾಕಿದೆ. ಅದೇ ರೀತಿ 2018ರಲ್ಲಿ ಎರಡೂ ಹುದ್ದೆಗಳಿಗೆ ನಿಗದಿಪಡಿಸಿದ್ದ ಐದು ವರ್ಷಗಳ ಮಿತಿಯನ್ನು ರದ್ದುಗೊಳಿಸಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಹೊಸ ಕಾಲಮಿತಿಯನ್ನು ನಿಗದಿಪಡಿಸಿಲ್ಲ.

ಊಹಾಪೋಹ ಅಲ್ಲ; ಚೀನಾ ಅಧ್ಯಕ್ಷ ಜಿನ್‌ಪಿಂಗ್‌ರಿಗೆ ಸೆರೆಬ್ರಲ್ ಅನ್ಯೂರಿಸಂ ರೋಗಊಹಾಪೋಹ ಅಲ್ಲ; ಚೀನಾ ಅಧ್ಯಕ್ಷ ಜಿನ್‌ಪಿಂಗ್‌ರಿಗೆ ಸೆರೆಬ್ರಲ್ ಅನ್ಯೂರಿಸಂ ರೋಗ

ಕಾಂಗ್ರೆಸ್ ಸಮಾವೇಶದ ಧ್ಯೇಯವೇ ಕ್ಸಿ ಜಿನ್ ಪಿಂಗ್ ಪುನರ್ ಆಯ್ಕೆ

ಕಾಂಗ್ರೆಸ್ ಸಮಾವೇಶದ ಧ್ಯೇಯವೇ ಕ್ಸಿ ಜಿನ್ ಪಿಂಗ್ ಪುನರ್ ಆಯ್ಕೆ

ಚೀನಾದ ರಾಜಕೀಯ ಬೆಳವಣಿಗೆಗಳ ಕುರಿತು ಯುಎಸ್ಎ ಥಿಂಕ್-ಟ್ಯಾಂಕ್‌ನಲ್ಲಿ ಇರುವ ಜೇಮ್ಸ್ಟೌನ್ ಫೌಂಡೇಶನ್ ಹಿರಿಯರಾದ ಡಾಕ್ಟರ್ ವಿಲ್ಲಿ ವೋ-ಲ್ಯಾಪ್ ಲ್ಯಾಮ್ ತಮ್ಮದೇ ರೀತಿಯಲ್ಲಿ ಅವಲೋಕನ ಮಾಡಿದ್ದಾರೆ. "ಆಶ್ಚರ್ಯಕರ ಘಟನೆಗಳನ್ನು ಸಾಮಾನ್ಯವಾಗಿ ಪ್ರಬಲ ವ್ಯಕ್ತಿಗಳು ದ್ವೇಷಿಸುತ್ತಾರೆ, ಅದರ ಜೊತೆ ಮುನ್ನೆಚ್ಚರಿಕೆ ರೀತಿಯಲ್ಲಿ ಅವುಗಳ ಬಗ್ಗೆ ತಿಳಿದುಕೊಂಡು ಅಂತರ ಕಾಯ್ದುಕೊಲ್ಳುತ್ತಾರೆ. ಹೀಗಾಗಿ ಬ್ಲ್ಯಾಕ್ ಸ್ವಾನ್ ಬಗ್ಗೆ ಸರ್ವೋಚ್ಛ ನಾಯಕ ಕ್ಸಿ ಜಿನ್ ಪಿಂಗ್ ಪದೇ ಪದೆ ಎಚ್ಚರಿಕೆ ವಹಿಸಿದ್ದಾರೆ.

21ನೇ ಶತಮಾನದ ಮಾವೋ ಝೆಡಾಂಗ್ ಅವರಿಗೆ ರಾಷ್ಟ್ರದ ಕೃತಕ ಬುದ್ಧಿಮತ್ತೆಯ ನೆರವಿನ ಸಾಮೂಹಿಕ ಕಣ್ಗಾವಲು ಉಪಕರಣದ ಬಗ್ಗೆ ದೃಢವಾದ ವಿಶ್ವಾಸವಿದೆ. ಆದ್ದರಿಂದ ಬ್ಯಾಂಕ್ ಮತ್ತು ರಿಯಲ್ ಎಸ್ಟೇಟ್‌ಗಳು ಮತ್ತು ಸಂಬಂಧಿತ ಹಗರಣಗಳ ಬಗ್ಗೆ ಜನರು ದಂಗೆಯೆದ್ದರೂ ಕ್ಸಿ ಜಿನ್ ಪಿಂಗ್ ಯಾವುದೇ ರೀತಿ ದೃತಿಗೆಡಲಿಲ್ಲ. ಬದಲಿಗೆ 20ನೇ ಕಾಂಗ್ರೆಸ್‌ ಸಮಾವೇಶಕ್ಕೂ ಮುಂಚಿತವಾಗಿ ಸಿಬ್ಬಂದಿ ವ್ಯವಸ್ಥೆಗಳನ್ನು ಅಂತಿಮಗೊಳಿಸಿದರು. ಆ ಮೂಲಕ ತಮ್ಮ ಬಣದ ಪ್ರಾಬಲ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ತೆರೆದುಕೊಂಡರು. ಇದರ ಜೊತೆಗೆ ವಿರೋಧಿ ಬಣಗಳು ಮತ್ತು ಪಕ್ಷದ ಹಿರಿಯರನ್ನು ಸಮಾಧಾನಪಡಿಸಲು ಸಾಕಷ್ಟು ಅವಕಾಶವನ್ನು ಸೃಷ್ಟಿಸಿದರು. ಅದಾಗ್ಯೂ, ಕ್ಸಿ ಜಿನ್ ಪಿಂಗ್ ಪ್ರದರ್ಶಿಸುವ ಮಾವೋವಾದಿ ಮರುಸ್ಥಾಪನೆ ಮತ್ತು ಅವರ US-ವಿರೋಧಿ ಮತ್ತು ಪಾಶ್ಚಿಮಾತ್ಯ ವಿರೋಧಿ ನಿಲುವುಗಳಿಂದ ಕೆಲವರು ವಿಚಲಿತರಾಗಿದ್ದಾರೆ.

"ಚೀನಾದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಯಾವುದೇ ರೀತಿಯ ಸೃಜನಾತ್ಮಕ ಹೊಸ ಆಲೋಚನೆಗಳು ಗೋಚರಿಸುವುದಿಲ್ಲ. ಕಾಂಗ್ರೆಸ್‌ನ ಮುಖ್ಯ ಉದ್ದೇಶವೆಂದರೆ ಕ್ಸಿ ಅನ್ನು ಶ್ಲಾಘಿಸುವುದು, ಮೂರನೇ ಅವಧಿಗೆ ಅವರನ್ನು ಆಯ್ಕೆ ಮಾಡುವುದೇ ಆಗಿದೆ. ಮಾವೋ ಅವಧಿಯ ತಪ್ಪುಗಳು ಮರುಕಳಿಸುವುದನ್ನು ತಡೆಯಲು ಪರಿಚಯಿಸಲಾದ ಸಾಮೂಹಿಕ ನಾಯಕತ್ವದ ನೀತಿಯನ್ನು ತ್ಯಜಿಸುವುದು ಸೇರಿದಂತೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವೆಲ್ಲಾ ಕ್ಸಿ ಜಿನ್ ಪಿಂಗ್ ತಮ್ಮ ಅಂಗೈಯಲ್ಲಿ ಹಿಡಿದುಕೊಳ್ಳಲು ಸ್ಕೆಚ್ ಹಾಕುತ್ತಿದ್ದಾರೆ.

ಪ್ರೀಮಿಯರ್ ಲಿ ಕೆಕಿಯಾಂಗ್ ನೇತೃತ್ವದ ಕಮ್ಯುನಿಸ್ಟ್ ಯೂತ್ ಲೀಗ್ ಬಣ ಹಾಗೂ ಈ ಹಿಂದೆ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ನೇತೃತ್ವದ ಶಾಂಘೈ ಬಣಗಳ ಉಪಸ್ಥಿತಿ ಹೊರತಾಗಿ ಹಣಕಾಸು, ವಿದೇಶಾಂಗ ನೀತಿ, ಸಿಬ್ಬಂದಿ ಮತ್ತು ಸಿದ್ಧಾಂತದಂತಹ ಕ್ಷೇತ್ರಗಳ ಮೇಲೆ ಅವರ ಹಿಡಿತವು 20ನೇ ಪಕ್ಷದ ಕಾಂಗ್ರೆಸ್ ಸಮಾವೇಶದ ನಂತರ ಮತ್ತಷ್ಟು ಪ್ರಬಲಗೊಳ್ಳುತ್ತದೆ.

ಪೊಲಿಟಿಕಲ್ ಬ್ಯುರೋ ಸಮಿತಿ ಕುರಿತು ಉಲ್ಲೇಖ

ಪೊಲಿಟಿಕಲ್ ಬ್ಯುರೋ ಸಮಿತಿ ಕುರಿತು ಉಲ್ಲೇಖ

ಏಳು ಸದಸ್ಯರ ಪೊಲಿಟಿಕಲ್ ಬ್ಯೂರೋ ಸ್ಥಾಯಿ ಸಮಿತಿ ಮತ್ತು 25 ಸದಸ್ಯರ ಪೊಲಿಟಿಕಲ್ ಬ್ಯೂರೋ ರಚನೆಯ ಬಗ್ಗೆ ಕೇಂದ್ರ ಸಮಿತಿಯು ನಿರ್ಧರಿಸುತ್ತದೆ. ಕಮ್ಯುನಿಸ್ಟ್ ಯೂತ್ ಲೀಗ್ ಫ್ಯಾಕ್ಷನ್ ಸದಸ್ಯ ಲಿ ಮತ್ತು ವೈಸ್ ಪ್ರೀಮಿಯರ್ ಆಗಿರುವ ಹು ಚುನ್ಹುವಾ ಪ್ರಮುಖವಾಗಿ ಉಳಿದಿದ್ದಾರೆ. ಆದಾಗ್ಯೂ, ಒಬ್ಬರು ಕಣ್ಮರೆಯಾಗುವ ಸಾಧ್ಯತೆಯಿದ್ದು, ಅಕ್ಟೋಬರ್‌ನಲ್ಲಿ ನಡೆಯುವ ಕಾಂಗ್ರೆಸ್‌ ಸಮಾವೇಶದ ನಂತರ ಎರಡೂ ಸಮಿತಿಗಳು ಉಳಿಯುವುದಿಲ್ಲ.

ಸದ್ಯಕ್ಕೆ ಲಿ ನಿವೃತ್ತಿ ಹೊಂದಿದರೆ ಅಥವಾ ಹು ಚುನ್ಹುವಾಗೆ ಸ್ಥಾನವನ್ನು ನೀಡದಿದ್ದರೆ, ಇದರಿಂದ ಪೊಲಿಟಿಕಲ್ ಬ್ಯುರೋದ ಸ್ಥಾಯಿ ಸಮಿತಿಯು ಸಂಪೂರ್ಣವಾಗಿ ಕ್ಸಿ ಜಿನ್ ಪಿಂಗ್ ಪ್ರಾಬಲ್ಯಕ್ಕೆ ಸೇರಿಕೊಳ್ಳುತ್ತದೆ ಎಂಬ ಆತಂಕವು ಬೆನ್ನು ಬಿಡದೇ ಕಾಡುತ್ತಿದೆ. ಇದರ ಮಧ್ಯೆದಲ್ಲೇ ಕ್ಸಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮೂವರು ಅಭ್ಯರ್ಥಿಗಳಾಗಿದ್ದಾರೆ. ಮೂರು ಖಾಲಿ ಇರುವ ಕಮಿಟಿ ಸೀಟುಗಳಿಗಾಗಿ ಕೈ ಕಿ, ಲಿ ಕಿಯಾಂಗ್, ಚೆನ್ ಮಿನರ್ ಮತ್ತು ಡಿಂಗ್ ಕ್ಸುಕ್ಸಿಯಾಂಗ್ ಆಗಿದ್ದಾರೆ. ಈ ರೀತಿಯ ಜೋಡಣೆಯು ಐಕ್ಯತೆಯನ್ನು ಖಾತ್ರಿಪಡಿಸುವುದಿಲ್ಲ. ಮಾವೋ ಅಡಿಯಲ್ಲಿ ಭಿನ್ನಾಭಿಪ್ರಾಯವಿದ್ದು, ಕ್ಸಿ ಸ್ಥಾನಕ್ಕಾಗಿ ಪೈಪೋಟಿ ನಡೆಯುವುದು ಪಕ್ಕಾ ಆಗಿದೆ. ಲಿ ಅವರು ಪ್ರಧಾನ ಮಂತ್ರಿಯಾಗಿ ನಿವೃತ್ತರಾದರೆ, ಬಹುಶಃ 2013-18ರಲ್ಲಿ ವೈಸ್ ಪ್ರೀಮಿಯರ್ ಆಗಿದ್ದ ಜನಪ್ರಿಯ ಚೀನೀ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್ ಅಧ್ಯಕ್ಷ ವಾಂಗ್ ಯಾಂಗ್ ಬದಲಿಯಾಗಬಹುದು.

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್ ಪಿಂಗ್ ನಂತರ ಯಾರು?

ಚೀನಾ ಅಧ್ಯಕ್ಷ ಸ್ಥಾನಕ್ಕೆ ಕ್ಸಿ ಜಿನ್ ಪಿಂಗ್ ನಂತರ ಯಾರು?

ಚೀನಾದ ಗಣ್ಯರು ಕ್ಸಿ ವಿರುದ್ಧ ದಂಗೆ ಏಳುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿದೆ. ಆದರೆ ವಾಸ್ತವದಲ್ಲಿ ಗಣ್ಯರು ದೇಶದಿಂದ ಪಲಾಯನ ಮಾಡುವ ಸಾಧ್ಯತೆಯಿದ್ದು, ದಂಗೆ ಏಳುವುದರ ಬದಲಿಗೆ ತಮ್ಮನ್ನು ತಾವು ಬೇರೆಡೆ ಸ್ಥಾಪಿಸಿಕೊಳ್ಳುತ್ತಾರೆ. ಅದೇ ರೀತಿ ಎಲ್ಲರ ಮೇಲೆ ಕ್ಸಿ ಜಿನ್ ಪಿಂಗ್ ಕಣ್ಗಾವಲು ಇರಿಸಿದ್ದಾರೆ. ಆಂತರಿಕ ಭದ್ರತಾ ಪಡೆಗಳೊಂದಿಗೆ ಸುತ್ತುವರಿದುಕೊಂಡಿದ್ದಾರೆ. ಆದ್ದರಿಂದ 1989ರಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನಾ ಚಳುವಳಿಗಳನ್ನು ನಡೆಸುವುದು ಕಷ್ಟವಾಗುತ್ತದೆ. ಮುಂದಿನ ಅವಧಿಯಲ್ಲಿ ಕ್ಸಿ ವಿರುದ್ಧ ಸಾರ್ವಜನಿಕ ಕುಂದುಕೊರತೆಗಳು ಬೆಳೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. 69 ವರ್ಷ ವಯಸ್ಸಿನ ಕ್ಸಿ ಕನಿಷ್ಠ ಇನ್ನೂ ಐದು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುತ್ತಾರೆ. 2022 ಅಲ್ಲದೇ 2032ರವರೆಗೂ ಅಧಿಕಾರದಲ್ಲಿ ಉಳಿಯುವ ಸಂಭವಗಳು ಹೆಚ್ಚಾಗಿವೆ. ಆದ್ದರಿಂದಲೇ ತಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಘೋಷಿಸುವುದಕ್ಕೆ ಸಾಕಷ್ಟು ಸಮಯವಿದ್ದು, ಸದ್ಯಕ್ಕೆ ತನ್ನ ನಂತರದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬುದನ್ನು ಹೇಳುವುದಕ್ಕೆ ಅವರು ಧೈರ್ಯ ಮಾಡಿಲ್ಲ.

ಕ್ಸಿ ಜಿನ್ ಪಿಂಗ್ ಅವರಿಗೆ ಉತ್ತರಾಧಿಕಾರಿ ಆಯ್ಕೆಯ ಮನಸ್ಸಿಲ್ಲವೇ?

ಕ್ಸಿ ಜಿನ್ ಪಿಂಗ್ ಅವರಿಗೆ ಉತ್ತರಾಧಿಕಾರಿ ಆಯ್ಕೆಯ ಮನಸ್ಸಿಲ್ಲವೇ?

ದಿ ಜೇಮ್ಸ್ಟೌನ್ ಫೌಂಡೇಶನ್‌ನ ಮುಖ್ಯ ಸಂಪಾದಕ ಜಾನ್ ಎಸ್. ವ್ಯಾನ್ ಔಡೆನಾರೆನ್ ಈ ಕುರಿತು ಮಾತನಾಡಿದ್ದಾರೆ. "ರಾಜಪ್ರಭುತ್ವವಲ್ಲದ ಏಕಪಕ್ಷೀಯ ರಾಜ್ಯಗಳನ್ನು ಪೀಡಿಸುವ ಉತ್ತರಾಧಿಕಾರ ಸಮಸ್ಯೆಯನ್ನು ಪರಿಹರಿಸಲು ಕ್ಸಿ ಜಿನ್ ಪಿಂಗ್ ಅಸಮರ್ಥತೆ ಅಥವಾ ಇಷ್ಟವಿಲ್ಲದಿರುವುದು PRC ವ್ಯವಸ್ಥೆಯಲ್ಲಿ ಅಪಾರ ಅನಿಶ್ಚಿತತೆಯನ್ನು ತೋರುತ್ತದೆ. ಉನ್ನತ-ನಾಯಕತ್ವದ ಹುದ್ದೆಗಳಿಗೆ ಉತ್ತರಾಧಿಕಾರ ಪ್ರಕ್ರಿಯೆಗಳನ್ನು ಸಾಂಸ್ಥಿಕಗೊಳಿಸಲು 1990 ಮತ್ತು 2000ರ ದಶಕದಲ್ಲಿ ಮಾಡಿದ ಅತ್ಯಂತ ಸಾಧಾರಣ ಪ್ರಗತಿಯನ್ನು ಕ್ಸಿ ಜಿನ್ ಪಿಂಗ್ ತಮ್ಮ ಅವಧಿಯಲ್ಲಿ ಹಿಂದಿಕ್ಕಿದ್ದಾರೆ. ಇದಲ್ಲದೇ ಕ್ಸಿ ತನ್ನ ಎರಡನೇ ದಶಕದ ಅಧಿಕಾರವನ್ನು ಪ್ರಾರಂಭಿಸುತ್ತಿದ್ದಂತೆ ಸ್ಪಷ್ಟ ಉತ್ತರಾಧಿಕಾರಿಯ ಕೊರತೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ.

"ಮಾವೋ ಝೆಡಾಂಗ್ ಹಲವಾರು ಬಾರಿ ಪ್ರಯತ್ನಿಸಿದಂತೆ ಕ್ಸಿ ಉತ್ತರಾಧಿಕಾರಿಯನ್ನು ಸ್ವಯಂ-ಆಯ್ಕೆ ಮಾಡಿದರೂ ಸಹ ರಾಜಕೀಯ ಪ್ರಭಾವವನ್ನು ಹೊಂದಿರುವ ನಾಯಕನೇ ಅಧಿಕಾರವನ್ನು ತೆಗೆದುಕೊಳ್ಳುತ್ತಾನೆ. ಪಕ್ಷದ ಗಣ್ಯರು ಸೈದ್ಧಾಂತಿಕ ಅಥವಾ ಕಾರ್ಯತಂತ್ರದ ದಿಕ್ಕಿನಲ್ಲಿ ಚಲಿಸಬೇಕು, ಅದು ಚೀನಾದ ಬಗ್ಗೆ ಕ್ಸಿ ದೃಷ್ಟಿಗೆ ವಿರುದ್ಧವಾಗಿದೆ," ಎಂದು ವ್ಯಾನ್ ಔಡೆನಾರೆನ್ ಹೇಳಿದ್ದಾರೆ.

ಪ್ರಸ್ತುತ ಶಿಷ್ಟಾಚಾರಗಳ ಅಡಿಯಲ್ಲಿ ಪಕ್ಷದ 22ನೇ ಕಾಂಗ್ರೆಸ್‌ನ ಸಮಾವೇಶದಲ್ಲಿ ಅಧಿಕಾರವನ್ನು ವಹಿಸಿಕೊಳ್ಳಲು ಈ ಇಬ್ಬರು ನಾಯಕರಿಗೆ ಸಾಧ್ಯವಾಗುವುದಿಲ್ಲ. ಮತ್ತೊಂದೆಡೆ ಸಂಭಾವ್ಯ ಉತ್ತರಾಧಿಕಾರಿ ಅಭ್ಯರ್ಥಿಗಳು 1970ರ ದಶಕದಲ್ಲಿ ಜನಿಸಿದ ಏಳನೇ ತಲೆಮಾರಿನವರೇ ಆಗಿದ್ದಾರೆ. ಮಧ್ಯಮ ಶ್ರೇಣಿಯ ಅಧಿಕಾರಿಗಳು ಆಗಿರುವುದರ ಹಿನ್ನೆಲೆ ರಾಜಕೀಯ ವೇದಿಕೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿಲ್ಲ.

ಕ್ಸಿ ಆಯ್ಕೆಯಿಂದ ಮಾತ್ರ ಯುಎಸ್ ವಿರುದ್ಧ ಪೈಪೋಟಿ ಸಾಧ್ಯ

ಕ್ಸಿ ಆಯ್ಕೆಯಿಂದ ಮಾತ್ರ ಯುಎಸ್ ವಿರುದ್ಧ ಪೈಪೋಟಿ ಸಾಧ್ಯ

ಯುಎಸ್ಎ ಜೊತೆಗಿನ ಆರ್ಥಿಕ, ಭೌಗೋಳಿಕ ರಾಜಕೀಯ ಮತ್ತು ತಾಂತ್ರಿಕ ಸ್ಪರ್ಧೆಯಿಂದಾಗಿ ಶೀತಲ ಸಮರವು ಹೆಚ್ಚಾಗಿ ಅಭಿವೃದ್ಧಿಗೊಂಡಿದೆ. ಯುಎಸ್ ನೇತೃತ್ವದ ಜಾಗತಿಕ ಕ್ರಮವನ್ನು ಕಸಿದುಕೊಳ್ಳಲು, ಸ್ಥಾಪಿತ ನಿಯಮಗಳು ಮತ್ತು ರೂಢಿಗಳನ್ನು ತಲೆಕೆಳಗಾಗಿ ಮಾಡಲು, ಮಿಲಿಟರಿ ನೆಲೆಗಳನ್ನು ಸ್ಥಾಪಿಸಲು ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಅಕ್ರಮವಾಗಿ ಭೂಪ್ರದೇಶವನ್ನು ಪಡೆಯಲು ಚೈನೀಸ್ ಕಮ್ಯೂನಿಸ್ಟ್ ಪಾರ್ಟಿಯ ಪ್ರಯತ್ನಗಳು ಮತ್ತು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣಕ್ಕೆ ನೀಡಿದ ನಿರಂತರ ಬೆಂಬಲದಿಂದ ಚೀನಾವನ್ನು ಒಂದು ಹಾದಿಯಲ್ಲಿ ಇರಿಸಿದೆ.

ಚೀನಾವು ತನ್ನನ್ನು ಎಲ್ಲಕ್ಕಿಂತ ಹೆಚ್ಚು ಅಧಿಕಾರದಿಂದ ಪ್ರತ್ಯೇಕಿಸಿಕೊಂಡಿದೆ. 20ನೇ ಕಾಂಗ್ರೆಸ್ ಸಮಾವೇಶದ ನಂತರದಲ್ಲಿ ಯುಎಸ್ಎ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಬಹುದು. ಕ್ಸಿ ತಮ್ಮ ಕೋರ್ಸ್ ಅನ್ನು ನಿಗದಿಪಡಿಸಿದ್ದು, ಮೂರನೇ ಅವಧಿಯನ್ನು ಸುರಕ್ಷಿತವಾಗಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದಾರೆ. ಅದೇನೇ ಇದ್ದರೂ, ಪ್ರಪಂಚದ ಉಳಿದ ಭಾಗಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗದೊಂದಿಗೆ ಬದುಕಲು ಕಲಿತಿವೆ. ಇದರಿಂದ ಚೀನಾ ಈಗ ಕೊರೊನಾವೈರಸ್ ಅನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಒಳಗೊಂಡಂತೆ ಕ್ಸಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದ್ದಾರೆ.

English summary
20th Party Congress : Chairman Xi Jinping will extend his term in power for another 5 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X