ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ಘೋಷಿಸಿಕೊಂಡ ಕ್ಯಾಟಲೋನಿಯಾ, ಸ್ಪೇನ್ ಇಬ್ಭಾಗ?

By Sachhidananda Acharya
|
Google Oneindia Kannada News

ಮಾಡ್ರಿಡ್, ಅಕ್ಟೋಬರ್ 27: ಸ್ಪೇನ್ ಆಡಳಿತದಿಂದ ಕ್ಯಾಟಲೋನಿಯಾ ಪ್ರತ್ಯೇಕ ರಾಷ್ಟ್ರ ಘೋಷಿಸಿಕೊಂಡಿದೆ. ಸ್ವಾಯತ್ತ ರಾಜ್ಯವಾಗಿದ್ದ ಕ್ಯಾಟಲೋನಿಯಾ ಸಂಸತ್ತು ಇಂದು ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಪರ ತೀರ್ಮಾನ ತೆಗೆದುಕೊಂಡಿದೆ.

ಸ್ವಾತಂತ್ರ್ಯ ದಿನದ ಸ್ಮರಣೆಯಲ್ಲಿ ಕತಲೂನ್ಯಾ ಸ್ವಾತಂತ್ರ್ಯ ಹೋರಾಟದ ಕಥೆ...ಸ್ವಾತಂತ್ರ್ಯ ದಿನದ ಸ್ಮರಣೆಯಲ್ಲಿ ಕತಲೂನ್ಯಾ ಸ್ವಾತಂತ್ರ್ಯ ಹೋರಾಟದ ಕಥೆ...

ಕ್ಯಾಟಲೋನಿಯಾದ 70 ಜನಪ್ರತಿನಿಧಿಗಳಲ್ಲಿ ಸ್ವಾತಂತ್ರ್ಯ ಹೊಂದುವ ಪರ ಮತದಾನ ಮಾಡಿದ್ದಾರೆ. ಈ ಮೂಲಕ ವಿಶ್ವಾಸ ಮತದಲ್ಲಿ ಕ್ಯಾಟಲೋನಿಯಾ ಸ್ವಾತಂತ್ರ್ಯ ಗೆದ್ದಿದೆ. 10 ಜನ ಜನಪ್ರತಿನಿಧಿಗಳು ಸ್ವಾತಂತ್ರ್ಯ ಹೊಂದುವ ವಿರುದ್ಧ ಮತದಾನ ಮಾಡಿದರೆ ಇಬ್ಬರು ಬ್ಯಾಲೆಟ್ ಗಳನ್ನು ಖಾಲಿ ಬಿಟ್ಟಿದ್ದಾರೆ.

Catalanonia parliament declares independence from Spain

ಶನಿವಾರ ಸಂಜೆ ಬಾರ್ಸಿಲೋನಾದಲ್ಲಿ ನಡೆದ ವಿಶ್ವಾಸಮತದಲ್ಲಿ ಈ ತೀರ್ಮಾನ ಹೊರ ಬಿದ್ದಿದೆ.

ಸ್ವಾತಂತ್ರ್ಯದ ಪರ ಮತದಾನ ಮಾಡುವ ಜನಪ್ರತಿನಿಧಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೇನ್ ಅಟಾರ್ನಿ ಜನರಲ್ ಹೇಳಿದ್ದರು. ಈ ಹಿನ್ನಲೆಯಲ್ಲಿ ಇಂದು ಗೌಪ್ಯ ಮತದಾನಕ್ಕೆ ಮೊರೆ ಹೋಗಲಾಗಿತ್ತು. ಗೌಪ್ಯ ಮತದಾನದಲ್ಲಿ ಪ್ರತ್ಯೇಕ ರಾಷ್ಟ್ರವಾಗುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಈ ತೀರ್ಮಾನದ ಬೆನ್ನಿಗೆ "ಮಾಡ್ರಿಡ್ (ಸ್ಪೇನ್ ರಾಜಧಾನಿ) ನಿಂದ ನೇರವಾಗಿ ಸ್ವಾಯತ್ತ ಕ್ಯಾಟನೋನಿಯಾದ ಆಡಳಿತವನ್ನು ನಿಯಂತ್ರಿಸುವುದಾಗಿ" ಸ್ಪೇನ್ ಹೇಳಿದೆ. ಮಾತ್ರವಲ್ಲ ನೇರ ನಿಯಂತ್ರಣಕ್ಕೆ ಕಾನೂನಿನಲ್ಲಿರುವ ಅವಕಾಶಕ್ಕೆ ಸ್ಪೇನ್ ಸಂಸತ್ತು ಒಪ್ಪಿಗೆ ನೀಡಿದೆ. ಈ ಮೂಲಕ ಪರೋಕ್ಷವಾಗಿ ಅಧ್ಯಕ್ಷೀಯ ಆಡಳಿತವನ್ನು ಅಲ್ಲಿ ಹೇರಿದೆ.

Catalanonia parliament declares independence from Spain

ಈ ಹಿಂದೆ ಕ್ಯಾಟಲೋನಿಯಾ ಪ್ರತ್ಯೇಕ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಜನಮತಗಣನೆ ನಡೆದಿತ್ತು. ಇದರಲ್ಲಿ ಕ್ಯಾಟಲೋನಿಯಾ ಪರ ಜನರು ಮತದಾನ ಮಾಡಿದ್ದರು. ಆದರೆ ಸ್ಪೇನ್ ಆಡಳಿತ ಇದನ್ನು ಒಪ್ಪಿರಲಿಲ್ಲ. ಇದೀಗ ಕ್ಯಾಟಲೋನಿಯಾ ಬಂಡಾಯದ ಬಾವುಟ ಹಾರಿಸಿದೆ.

English summary
The Catalan parliament has voted to declare independence from Spain.Seventy lawmakers voted in favour, 10 voted against, while two cast blank ballots.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X