ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗೆ ನಲುಗುತ್ತಿದ್ದ ಮಗುವನ್ನು ಕಾಪಾಡಿದ ಬೆಕ್ಕು ಮಾಶಾ!

By Prasad
|
Google Oneindia Kannada News

ಈ ಜಗತ್ತೇ ಹೀಗೆ. ಏನಾದರೂ ವಿಸ್ಮಯಗಳು ಸಂಭವಿಸುತ್ತಲೇ ಇರುತ್ತವೆ. ಈ ವಿಸ್ಮಯಗಳೆಲ್ಲ ನಮ್ಮಿಂದಲೇ ಆಗಿದ್ದು ಎಂಬ ಭ್ರಮೆಯಲ್ಲಿ ಮಾನವರಿರುತ್ತಾರೆ. ಆದರೆ, ಮಾನವೀಯತೆ ಎಂಬುದು ಮಾನವರ ಸ್ವತ್ತು ಮಾತ್ರವಲ್ಲ, ನಮಗೂ ಮಾನವೀಯತೆ ಇದೆ ಎಂದು ಮನೆಮಠವಿಲ್ಲದ ಬೆಕ್ಕೊಂದು ಸಾಬೀತು ಮಾಡಿದೆ.

ಬಟ್ಟೆ ಹಾಕಿಕೊಂಡವರೇ ಬೆದರುವಂಥ ಚಳಿ, ಅದೂ ರಷ್ಯಾದ ಒಬ್ನಿಸ್ಕ್ ಎಂಬ ಪ್ರಾಂತ್ಯದಲ್ಲಿ. ಬೀದಿಬದಿಯಲ್ಲಿ ರಟ್ಟಿನ ಡಬ್ಬಿಯೊಂದರಲ್ಲಿ ಅಮ್ಮನ ಪ್ರೀತಿಯಿಂದ ವಂಚಿತನಾಗಿದ್ದ ಕೇವಲ 12 ವಾರಗಳ ಮಗು ಚಳಿ ತಡೆಯಲಾರದೆ ಕೀರಲುತ್ತಿತ್ತು. ಅದನ್ನು ಯಾರಾದರೂ ಗಮನಿಸಿದರೋ ಬಿಟ್ಟರೋ ತಾಯಿ ಹೃದಯದ ಬೆಕ್ಕು ಮಾಶಾ ಗಮನಿಸಿತ್ತು.

Cat saves baby from freezing in Russia

ಟಂಗನೆ ಡಬ್ಬಿಯೊಳಗೆ ನೆಗೆದು ಪುಷ್ಕಳವಾಗಿ ಬೆಳೆದಿದ್ದ ಕೂದಲಿನ ಸಹಾಯದಿಂದ ಮಗುವನ್ನು ಮಾಶಾ ಬೆಚ್ಚಗಿಟ್ಟಿದೆ. ಅಷ್ಟು ಮಾಡಿದ್ದಲ್ಲದೆ, ಮೀಯಾಂವ್ ಮೀಯಾಂವ್ ಅಂತ ದಾರಿಹೋಕರನ್ನು ಸೆಳೆಯಲು ಯತ್ನಿಸಿದೆ. ಅದೃಷ್ಟವಶಾತ್ ಪ್ರತಿದಿನ ಮಾಶಾಗೆ ಹಾಲು ನೀಡುತ್ತಿದ್ದ ನೆರೆಯಾಕೆ ಇರ್ನಾ ಲಾವೋರಾ ಬೆಕ್ಕಿನ ಅರಚುವಿಕೆಯನ್ನು ಗಮನಿಸಿದ್ದಾರೆ. ಅನುಮಾನ ಬಂದು ಹತ್ತಿರ ಹೋಗಿ ನೋಡಿದಾಗ ಡಬ್ಬಿಯಲ್ಲಿ ಮಗು!

ಕೂಡಲೆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. "ಮರಗಟ್ಟುವ ಚಳಿಯಲ್ಲಿ ಕೆಲವೇ ಗಂಟೆ ಮಾತ್ರ ಮಗು ಇದ್ದಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ. ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಇತ್ತು. ಥ್ಯಾಂಕ್ಸ್ ಟು ಮಾಶಾ" ಅಂತ ಆಸ್ಪತ್ರೆಯ ಸಿಬ್ಬಂದಿ ಹೇಳಿರುವುದಾಗಿ ಸೆಂಟ್ರಲ್ ಯುರೋಪಿಯನ್ ನ್ಯೂಸ್ ಪ್ರಕಟಿಸಿದೆ. ಇಂಥ ಪ್ರಾಣಿಗಳಿಗೆ ಪ್ರಶಸ್ತಿಗಳನೇನಾದರೂ ಕೊಡುತ್ತಾರಾ?

Cat saves baby from freezing in Russia

ಈ ಕುರಿತು ಮಾತಾಡಿರುವ ಇರ್ನಾ, "ಬೆಕ್ಕು ತುಂಬಾ ಫ್ರೆಂಡ್ಲಿ. ಬೆಕ್ಕು ಅರಚುವುದನ್ನು ಕೇಳಿದಾಗ, ಬೆಕ್ಕಿಗೇ ಏನೋ ಗಾಯವಾಗಿರಬಹುದು ಅಂದುಕೊಂಡಿದ್ದೆ. ಆದರೆ, ಮಗುವಿಗೆ ತಾಯ್ತನದ ಅಪ್ಪುಗೆ ನೀಡಿ, ಅದನ್ನು ಚಳಿಯಿಂದ ಕಾಪಾಡಿದ್ದು... ನಿಜಕ್ಕೂ... ಐ ಹ್ಯಾವ್ ನೋ ವರ್ಡ್ಸ್" ಎಂದಿದ್ದಾರೆ. [ಚೆನ್ನೈನಲ್ಲಿ ಅಗ್ನಿ ಶಿಶು, ವೈದ್ಯ ಲೋಕದ ಅಚ್ಚರಿ!]

ಮಗುವನ್ನೇನೋ ಆಸ್ಪತ್ರೆಯವರು ಆರೈಕೆ ಮಾಡಿ ಕಾಪಾಡಿರಬಹುದು. ಆದರೆ, ಆ ಮಗುವನ್ನು ಬಿಟ್ಟಿರಲು ಬೆಕ್ಕು ಮಾಶಾಗೆ ಸಾಧ್ಯವೆ? ಮಗುವನ್ನು ಆಸ್ಪತ್ರೆಗೆ ಸಾಗಿಸುವಾಗಮಾಶಾ ಕೂಡ ಆಂಬ್ಯುಲೆನ್ಸನ್ನು ಹಿಂಬಾಲಿಸಿದೆ. ಆಸ್ಪತ್ರೆ ತಲುಪುವುದು ಸಾಧ್ಯವಾಗದಿದ್ದರೂ, ಆಂಬ್ಯುಲೆನ್ಸ್ ಬರುವುದನ್ನು ಅನೇಕ ಗಂಟೆಗಳ ಕಾಲ ಕಾಯುತ್ತಲೇ ಇತ್ತು ಎಂದು ಅಕ್ಕಪಕ್ಕದವರು ಹೇಳಿದ್ದಾರೆ. ಮಗುವನ್ನು ಹೆತ್ತ ಆ ತಾಯಿ ಎಲ್ಲಿದ್ದಾಳೋ? [Photo and video courtesy : RUPTLYTV]

English summary
Homeless cat Masha saves abandoned baby in freezing cold, mothers it in Russia. The unusual incident happened in Obninsk, Russia, as per report published by Central European News. The child is doing well under care of hospital. Thanks to Masha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X