ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ನಲ್ಲೂ ಜಾತಿ ತಾರತಮ್ಯ: ಆಕ್ರೋಶ ವ್ಯಕ್ತಪಡಿಸಿದ AWU

|
Google Oneindia Kannada News

ವಾಷಿಂಗ್‌ಟನ್‌, ಜೂ. 9: ಇತ್ತೀಚೆಗೆ ಗೂಗಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಅಮೆರಿಕದ ದಲಿತ ಹಕ್ಕುಗಳ ಕಾರ್ಯಕರ್ತೆ ತೆನ್ಮೋಳಿ ಸೌಂದರ್ಯರಾಜನ್‌ ಅವರ ಭಾಷಣವನ್ನು ಅಲ್ಲಿನ ಹಿಂದೂ ಸಹೋದ್ಯೋಗಿಗಳ ಒತ್ತಡದಿಂದ ನಿಷೇಧಿಸಲಾಗಿತ್ತು. ಹೀಗಾಗಿ ಆಲ್ಫಾಬೆಟ್ ವರ್ಕರ್ಸ್ ಯೂನಿಯನ್ (AWU) ಜಾತಿ ತಾರತಮ್ಯದ ಬಗ್ಗೆ ಆಕ್ರೋಶ ವ್ತಕಪಡಿಸಿದೆ. ಸದ್ಯ ಈ ಕುರಿತು ಮಾತನಾಡಿದ ತೆನ್ಮೋಳಿ ಸೌಂದರ್ಯರಾಜನ್‌ ಇದು ನಾನು ಭಾಷಣ ಮಾಡುವುದರ ಸಮಸ್ಯೆಯಲ್ಲ, ಬದಲಾಗಿ ನನ್ನ ಜಾತಿಯೇ ಇಲ್ಲಿ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ದಿ ನ್ಯೂಸ್‌ ಮಿನಿಟ್‌ನ ಧನ್ಯಾ ರಾಜೇಂದ್ರನ್‌ ಅವರು ತೆನ್ಮೋಳಿ ಸೌಂದರ್ಯರಾಜನ್‌ ಅವರನ್ನು ಸಂದರ್ಶನ ನಡೆಸಿದ್ದು, ಅವರು ಜಾತಿ ತಾರತಮ್ಯದ ಬಗ್ಗೆ ಗೂಗಲ್‌ ನಿಲುವನ್ನು ತಿಳಿಸಿದ್ದಾರೆ. ಗೂಗಲ್‌ ನಡೆದ ಕಾರ್ಯಕ್ರಮದಲ್ಲಿ ಗೂಗಲ್‌ನ ಹಿರಿಯ ವ್ಯವಸ್ಥಾಪಕಿ ತನುಜಾ ಗುಪ್ತಾ ಅವರು ಆಹ್ವಾನಿಸಿದ್ದರು. ಆದರೆ ಅಲ್ಲಿನ ಕೆಲವು ಹಿಂದೂ ಮೇಲ್ಜಾತಿಯ ಉದ್ಯೋಗಿಗಳು ದಲಿತ ಕಾರ್ಯಕರ್ತೆ ತೇನ್ಮೋಳಿ ಸೌಂದರ್ಯರಾಜನ್‌ ಅವರ ಭಾಷಣ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ತಮ್ಮ ಕಂಪನಿ ಆಂತರಿಕ ಮೇಲ್‌ಗಳಲ್ಲಿ ತೇನ್ಮೋಳಿ ಅವರ ಬಗ್ಗೆ ಅವಳು ಒಬ್ಬ ಹಿಂದೂ ವಿರೋಧಿ ಎಂದು ಬರೆದು ಹಂಚಿಕೊಂಡಿದ್ದರು.

ಭಾರತದಲ್ಲಿ 2021ರ ಉದ್ದಕ್ಕೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ವರದಿಭಾರತದಲ್ಲಿ 2021ರ ಉದ್ದಕ್ಕೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ವರದಿ

ತೆನ್ಮೋಳಿ ಸೌಂದರ್ಯರಾಜನ್‌ ಅವರ ಭಾಷಣ

ತೆನ್ಮೋಳಿ ಸೌಂದರ್ಯರಾಜನ್‌ ಅವರ ಭಾಷಣ

ಜನಾಂಗ, ಲಿಂಗ, ಲೈಂಗಿಕತೆ ಹಾಗೂ ಸಮಾನತೆ, ಜಾತಿ ಕುರಿತ ಸಮಸ್ಯೆಗಳ ಬಗೆಗೆ ಉದ್ದೇಶದ ಡೈವರ್ಸಿಟಿ ಇಕ್ವಿಟಿ ಇನ್‌ಕ್ಲೂಸಿವಿಟಿ ಎಂಬ ಈ ಕಾರ್ಯಕ್ರಮ ಗೂಗಲ್‌ನಲ್ಲಿ ನಡೆಯಲು ಸಿದ್ಧವಾಗಿತ್ತು. ಆದರೆ ಉದ್ಯೋಗಿಗಳ ನಿರಾಕರಣೆಯಿಂದ ಕಾರ್ಯಕ್ರಮಕ್ಕೆ ಅಡಚಣೆ ಉಂಟಾಗಿತ್ತು. ಈ ಬಗ್ಗೆ ಆಲ್ಫಾಬೆಟ್‌ ವರ್ಕಸ್‌ ಯುನಿಯನ್‌ ಆಕ್ರೋಶ ವ್ಯಕ್ತಪಡಿಸಿತ್ತು. ನಾವು ಸೌಂದರ್ಯ ರಾಜನ್‌ ಹಾಗೂ ತನುಜಾ ಗುಪ್ತಾ ಅವರ ಪರ ನಿಂತಿದ್ದೇವೆ. ಗೂಗಲ್‌ ಕಂಪನಿಯಲ್ಲಿ ಎಲ್ಲಾ ಎಚ್‌ಆರ್‌ ನೀತಿಗಳಿಗೆ ಜಾತಿಯನ್ನು ಸೇರಿಸುವುದು, ತೆನ್ಮೋಳಿ ಸೌಂದರ್ಯರಾಜನ್‌ ಅವರ ಭಾಷಣವನ್ನು ಮತ್ತೆ ಆಯೋಜಿಸುವುದು ಹಾಗೂ ಕಂಪನಿಯಲ್ಲಿ ಹೆಚ್ಚು ದಲಿತ ಹಾಗೂ ದಮನಿತ ವರ್ಗಗಳ ಬಗ್ಗೆ ಮಾತನಾಡುವ ಜನರನ್ನು ಆಹ್ವಾನಿಸುವುದು. ಕಂಪನಿಯಲ್ಲಿ ಜಾತಿ ತಾರತಮ್ಯದ ನಿವಾರಣೆಯ ಹಿನ್ನೆಲೆಯಲ್ಲಿ ಹೂಡಿಕೆ ಮಾಡುವ ಪ್ರತಿಜ್ಞೆಗೆ ಬದ್ಧರಾಗಿರುವುದು ಇವೇ ಮೊದಲಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.

ಘಟನೆಯ ನಂತರ ದಲಿತ ಕಾರ್ಯಕರ್ತೆ ತೆನ್ಮೋಳಿ ಸೌಂದರ್ಯರಾಜನ್‌ ಗೂಗಲ್‌ ಸಿಇಒ ಭಾರತೀಯರೇ ಆದ ಸುಂದರ್‌ ಪಿಚ್ಚೈ ಅವರಿಗೆ ನೇರವಾಗಿ ತಮ್ಮ ಭಾಷಣಕ್ಕೆ ಅವಕಾಶ ನೀಡುವಂತೆ ಕೋರಿದ್ದರು. ಆದರೆ ಈವರೆಗೂ ಸುಂದರ್‌ ಪಿಚ್ಚೈ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಉತ್ತಮ ಸ್ಥಾನದಲ್ಲಿ ಇದ್ದೇವೆ ಎಂಬ ಭಾವನೆ

ಉತ್ತಮ ಸ್ಥಾನದಲ್ಲಿ ಇದ್ದೇವೆ ಎಂಬ ಭಾವನೆ

ಘಟನೆ ಬಗ್ಗೆ ದಿ ನ್ಯೂಸ್‌ ಮಿನಿಟ್‌ನ ಸಂಪಾದಕಿ ಧನ್ಯಾ ರಾಜೇಂದನ್‌ ಅವರೊಂದಿಗೆ ವರ್ಚುವಲ್‌ ಆಗಿ ಮಾತನಾಡಿದ ತೆನ್ಮೋಳಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವ ಎರಡು ದಿನಗಳ ಮುಂಚೆ ಒಂದು ಜನರ ಗುಂಪು ಜಾತಿ ಹಾಗೂ ಮತೀಯ ಪೂರ್ವಗ್ರಹಪೀಡಿತ ಅಭಿಯಾನವನ್ನು ಶುರು ಮಾಡಿದ್ದರು. ಅಲ್ಲಿ ದಲಿತರ ಬಗ್ಗೆ ತುಂಬಾ ಕೆಟ್ಟದಾಗಿ ಹಾಗೂ ಅವಹೇಳನಕಾರಿಯಾಗಿ ಅಲ್ಲದೆ ಕಾನೂನುಬಾಹಿರವಾಗಿ ಮಾತನಾಡಿದ್ದರು. ಅವರಿಗೆ ತಾವು ದಕ್ಷಿಣ ಏಷ್ಯಾ ಮಾತ್ರವಲ್ಲದೆ ಅಮೆರಿಕಾದಲ್ಲಿ ಅನೇಕ ಉನ್ನತ ಸಂಸ್ಥೆಗಳಲ್ಲಿ ಉತ್ತಮ ಸ್ಥಾನದಲ್ಲಿ ಇದ್ದೇವೆ ಎಂಬ ಭಾವನೆ ಇದೆ ಎಂದು ಹೇಳಿದರು.

ಜಾತಿ ಸಮಾನತೆಯನ್ನು ತರಬೇಕಿದೆ

ಜಾತಿ ಸಮಾನತೆಯನ್ನು ತರಬೇಕಿದೆ

ತನುಜಾ ಗುಪ್ತಾ ಅವರ ರಾಜೀನಾಮೆ ನಂತರ ಗೂಗಲ್‌ ತಮ್ಮ ಕೆಲಸದ ಸ್ಥಳದಲ್ಲಿ ತಾರತಮ್ಯದ ವಿರುದ್ಧ ಸಾರ್ವಜನಿಕ ನೀತಿಯನ್ನು ತಂದಿದ್ದಾರೆ. ಈ ಮೂಲಕ ಜಾತಿ ತಾರತಮ್ಯದ ಬಗ್ಗೆತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗೂಗಲ್ ವಕ್ತಾರ ಶಾನನ್ ನ್ಯೂಬೆರಿ ಮಾತನಾಡಿ, ನಮ್ಮ ಬಳಗವನ್ನು ಒಟ್ಟುಗೂಡಿಸುವ ಮತ್ತು ಜಾಗೃತಿ ಮೂಡಿಸುವ ಬದಲು - ವಿಭಜನೆ ಮತ್ತು ದ್ವೇಷವನ್ನು ಸೃಷ್ಟಿಸುವ ಉದ್ದೇಶಿತ ಮಾತುಕತೆಯೊಂದಿಗೆ ಮುಂದುವರಿಯದಿರಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ತೇನ್ಮೋಳಿ ಅವರ ಪ್ರತಿಕ್ರಿಯೆಯ ಪ್ರತಿಯೊಂದು ವಿಧಾನವು ಅವರು ಜಾತಿ ಸಮಾನತೆಯನ್ನು ತರಬೇಕಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಗೂಗಲ್‌ನಲ್ಲಿ ಉನ್ನತ ನಾಯಕತ್ವದ ಸ್ಥಾನದಲ್ಲಿರುವ ಜನರು ಜಾತಿ ಎಂದರೇನು ಮತ್ತು ಈ ವಿಷಯದ ಬಗ್ಗೆ ಹೇಗೆ ಮಾತನಾಡಬೇಕು ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ವೇದಿಕೆಯಲ್ಲಿ ಯಾರು ಇರಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ. ತಾರತಮ್ಯದ ಬಗ್ಗೆ ಮಾಹಿತಿಯನ್ನು ಧೈರ್ಯವಾಗಿ ಹೇಳಬೇಖು ಎಂದು ಅವರು ಒತ್ತಿ ಹೇಳಿದರು.

ಜಾತಿಯತೆಯ ಪರಿಣಾಮಗಳನ್ನು ಎದುರಿಸುತ್ತಿವೆ

ತೆನ್ಮೋಳಿ ತಮ್ಮನ್ನು ಗೂಗಲ್ ಸಂಸ್ಥೆ ವಿಭಜಕ ಎಂದು ತೋರಿಸಿದ ಮೇಲೆ ಮಾತನಾಡಿ, ನಾವು ಯಾವುದೇ ವಿಭಜನೆ ಮಾಡುವುದಿಲ್ಲ. ಅದು ಈಗಾಗಲೇ ಆಗಿದೆ. ಕೆಲಸ ವಿವಿಧ ಸ್ಥಳಗಳು ಜಾತಿಯತೆಯ ಪರಿಣಾಮಗಳನ್ನು ಎದುರಿಸುತ್ತಿವೆ. ಜಾತಿಯತೆಯನ್ನು ಧೈರ್ಯ ಹಾಗೂ ಸಹಾನುಭೂತಿಯಿಂದ ಪರಿಹರಿಸಬಹುದು ಎಂದು ಹೇಳಿದರು. ಈ ಬಗ್ಗೆ ಸುಂದರ್‌ ಪಿಚ್ಚೈ ಅವರಿಗೂ ನೀವು ಜಾತಿ ಹಾಗೂ ತಾರತಮ್ಯದ ವಿರುದ್ಧ ನಿಲ್ಲಬೇಕು ಎಂದು ತಿಳಿಸಿದ್ದಾರೆ. ಈ ಮತಾಂಧತೆಯ ವಿರುದ್ಧ ಹೋರಾಡಲು ದಲಿತರು ಒಗ್ಗಟ್ಟಾಗಿದ್ದಾರೆ. ಆದರೆ ನಾನು ನಿಮ್ಮ ಕಂಪನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದರಿಂದ ನಾನು ಅಮಾನವೀಯತೆ ಮತ್ತು ಅಪಾಯವನ್ನು ಎದುರಿಸಬೇಕಾಯಿತು ಎಂದರು.

ಕೊನೆಯಲ್ಲಿ ತೆನ್ಮೋಳಿ ಸೌಂದರ್ಯರಾಜನ್‌ ಜಾತಿ ಹಾಗೂ ತಾರತಮ್ಯದ ಬಗ್ಗೆ ಮಾತನಾಡಲು ಅವಕಾಶಗಳು ಸಾಕಷ್ಟಿವೆ. ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವವನ್ನು ತಿಳಿಸಿದರು.

Recommended Video

300 ಅಡಿ ಆಳದ ಬೋರ್ವೆಲ್ ಗೆ ಬಿದ್ದಿದ್ದ 18 ತಿಂಗಳ ಮಗುವಿನ ರಕ್ಷಿಸಿದ ಭಾರತೀಯ ಸೇನೆ | OneIndia Kannada

English summary
At a recent event hosted by Google, Indian-born American Dalit rights activist Tenmoli Anegarajan's speech was banned under pressure from Hindu colleagues. Thus, the Alphabet Workers Union (AWU) has been outraged about caste discrimination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X