ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿಗೆಗಿದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧಿಕೃತ ನಿವಾಸ

|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 03: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಅಧಿಕೃತ ನಿವಾಸ ಬಾಡಿಗೆಗಿದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

2019ರ ಅಗಸ್ಟ್ ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಸರ್ಕಾರದ ಅಧಿಕೃತ ನಿವಾಸದಿಂದ ಸ್ವಂತ ಮನೆಗೆ ಶಿಫ್ಟ್ ಆಗಿದ್ದರು. ಬಳಿಕ ಈ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೀಗ ಪ್ರಧಾನಿ ನಿವಾಸ ಕಟ್ಟಡವನ್ನು ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದೆ.

ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 5.4 ರೂ. ಏರಿಕೆಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 5.4 ರೂ. ಏರಿಕೆ

ಇಮ್ರಾನ್ ಖಾನ್ ಅಧಿಕೃತ ನಿವಾಸವನ್ನು ಬಾಡಿಗೆ ನೀಡಲಿದ್ದಾರೆ. ಈ ಕುರಿತಾಗಿ ಖುದ್ದು ಇಮ್ರಾನ್ ಖಾನ್ ಅವರೇ ಹೀಗೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನ ಸುದ್ದಿ ಮೂಲಗಳಿಂದ ತಿಳಿದುಬಂದಿದೆ.

Cash-Strapped Imran Khan Puts Pakistan Prime Ministers Official Residence Up For Rent

ಯೂನಿವರ್ಸಿಟಿ ಮಾಡುತ್ತೇವೆ ಎಂದು ಹೇಳಿ ಇದೀಗ ಬಾಡಿಗೆಗೆ ನೀಡುತ್ತಿರುವುದ್ಯಾಕೆ ಎಂಬುದಕ್ಕೆ ಉತ್ತರ ಹಣಕಾಸಿನ ಕೊರತೆಯಾಗಿದೆ. ಈ ಹಿಂದೆ ಇಮ್ರಾನ್‍ಖಾನ್ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟದೆ ಸುದ್ದಿಯಾಗಿದ್ದರು. ಇದೀಗ ನಿವಾಸವನ್ನು ಬಾಡಿಗೆ ನೀಡುವ ನಿರ್ಧಾರಕ್ಕೆ ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಕಾಲ್ ಫೆಡೆರಲ್ ಕ್ಯಾಬಿನೆಟ್ ಆದೇಶ ಹೊರಡಿಸಿದೆ.

ಪಾಕಿಸ್ತಾನ ಪ್ರಧಾನಿ ಕಾರ್ಯಾಲಯ ಹೊಸದಾಗಿ ಹೊರಡಿಸಿರುವ ಪ್ರಕಟಣೆಯಲ್ಲಿ ನಿವಾಸ ಬಾಡಿಗೆಗೆ ನೀಡುವುದಾಗಿ ಹೇಳಿದೆ. ಆರ್ಥಿಕ ಸಂಕಷ್ಟ ಸರಿದೂಗಿಸಲು ಪಾಕಿಸ್ತಾನ ಸರ್ಕಾರ ಈ ರೀತಿ ತಂತ್ರಕ್ಕೆ ಇಳಿದಿರುವುದು ಇದೇ ಮೊದಲಲ್ಲ. ಕತ್ತೆ ವ್ಯಾಪಾರ ಸೇರಿದಂತೆ ಹಲವು ಮೂಲಗಳಿಂದ ಹಣ ಹೊಂದಿಸುವ ಕಾರ್ಯಕ್ಕೆ ಕೈಹಾಕಿದೆ. ಇದೀಗ ಬಾಡಿಗೆ ಮೂಲಕ ಹಣ ಪಡೆಯಲು ಮುಂದಾಗಿದೆ.

ಪ್ರಧಾನಿ ಅಧಿಕೃತ ನಿವಾಸವನ್ನು ಸ್ನಾತಕೋತ್ತರ ಸಂಸ್ಥೆಯನ್ನಾಗಿ ಪರಿವರ್ತಿಸುವುದಾಗಿ ಶಿಕ್ಷಣ ಸಚಿವ ಶಫ್‌ಖಾತ್ ಮೆಹಮ್ಮೂದ್ ಹೇಳಿದ್ದರು. ಪ್ರಧಾನಿ ನಿವಾಸ ಮಾತ್ರವಲ್ಲ, ಗರ್ವನರ್ ಕೂಡ ಅಧೀಕೃತ ನಿವಾಸ ತೊರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

ಬರುತ್ತಿದ್ದ ಆದಾಯಕ್ಕೆ ಕತ್ತರಿ ಬಿದ್ದ ಕಾರಣ ಇದೀಗ ಪ್ರಧಾನಿ ನಿವಾಸವನ್ನು ಬಾಡಿಗೆಗೆ ನೀಡಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಈಗಾಗಲೇ ಬಾಡಿಗೆಗೆ ಪ್ರಕಟಣೆ ಹೊರಡಿಸಲಾಗಿದೆ. ಕೊರೋನಾ ಸಂಕಷ್ಟದಲ್ಲಿ ದುಬಾರಿ ಮೊತ್ತಕ್ಕೆ ಯಾರು ಬಾಡಿಗೆ ಪಡೆಯುತ್ತಾರೆ ಎನ್ನುವ ಪ್ರಶ್ನೆಯೂ ಇದೀಗ ಎದುರಾಗಿದೆ.

ಪ್ರಧಾನಿ ನಿವಾಸವನ್ನು ವಿದ್ಯಾಸಂಸ್ಥೆಯನ್ನಾಗಿ ಪರಿವರ್ತಿಸಲು ಪಾಕಿಸ್ತಾನ ಸರ್ಕಾರ ಹಣದ ಕೊರತೆ ಎದುರಿಸಿತು. ಹೀಗಾಗಿ 2019ರಲ್ಲಿ ಈ ನಿವಾಸವನ್ನು ಮದುವೆ ಸೇರಿದಂತೆ ಸಮಾರಂಭಗಳ ಹಾಲ್ ಆಗಿ ಪರಿವರ್ತಿಸಲಾಯಿತು. 2019ರಲ್ಲಿ ಪಾಕಿಸ್ತಾನ ಸೇನಾ ಬ್ರಿಗೇಡಿಯರ್ ವಾಸೀಮ್ ಪುತ್ರಿ ಮದುವೆ ಸೇರಿದಂತೆ ಹಲವು ರಾಜಕೀಯ ನಾಯಕರ ಮದುವೆಗೆ ಪಾಕಿಸ್ತಾನಿ ಪ್ರಧಾನಿ ನಿವಾಸ ಸಾಕ್ಷಿಯಾಗಿತ್ತು.

ಪಾಕ್ ಪ್ರಧಾನಿ ಅಧಿಕೃತ ನಿವಾಸದಿಂದ ಆದಾಯ ಪ್ಲಾನ್ ಮಾಡಿರುವುದು ಹೊಸದಲ್ಲ. ಪ್ರಧಾನಿ ಇಮ್ರಾನ್ ಖಾನ್ ತಮ್ಮ ಅಧೀಕೃತ ನಿವಾಸದ ವಾರ್ಷಿಕ 470 ಮಿಲಿಯನ್ ನಿರ್ವಹಣೆ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು 2018ರಲ್ಲಿ ನಿವಾಸ ತೊರೆದಿದ್ದರು. ಈ ವೇಳೆ ಪಾಕಿಸ್ತಾನ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಮಾಡಿತ್ತು.

2019ರಲ್ಲಿ ಪ್ರಧಾನಿ ನಿವಾಸ ಒಂದಷ್ಟು ಆದಾಯ ತಂದಿದ್ದು ಸುಳ್ಳಲ್ಲ. ಆದರೆ 2020ರಲ್ಲಿ ಕೊರೋನಾ ವಕ್ಕರಿಸಿತು. ಪರಿಣಾಮ ಮದುವೆ ಸಮಾರಂಭಗಳೆಲ್ಲಾ ನಿಂತು ಹೋಯಿತು. ಇತ್ತ ಪ್ರಧಾನಿ ನಿವಾಸದಿಂದ ಬರುತ್ತಿದ್ದ ಆದಾಯವೂ ನಿಂತು ಹೋಯಿತು. ಕಳೆದೊಂದು ವರ್ಷದಿಂದ ಪ್ರಧಾನಿ ನಿವಾಸದಲ್ಲಿ ಯಾವ ಸಮಾರಂಭ ನಡೆದಿಲ್ಲ.

ಇತ್ತೀಚೆಗಷ್ಟೇ ಕೊರೊನಾ ಸಂಕಷ್ಟ ಎಂದು ಕಾರಣಕೊಟ್ಟು ಪೆಟ್ರೋಲ್ ದರವನ್ನು ಹೆಚ್ಚಳ ಮಾಡಿದ್ದರು. ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 5.4ರೂ. ಏರಿಕೆ ಮಾಡಿ ಇಮ್ರಾನ್ ಖಾನ್ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಲಾಕ್‌ಡೌನ್‌ಗೂ ಮುನ್ನವೂ ಪಾಕಿಸ್ತಾನ ಸರ್ಕಾರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು, ಆದರೆ ಕೊರೊನಾ ಸೋಂಕಿನಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ 5.4 ರೂ.ಗೆ ಏರಿಕೆ ಮಾಡಿ, ಡೀಸೆಲ್ ಬೆಲೆ 2.54ರಷ್ಟು ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲಿಯಂಉತ್ಪನ್ನಗಳ ಬೆಲೆ ಏರಿಕೆಯಾಗಿರುವುದರಿಂದ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 11.4 ರೂ. ಹೆಚ್ಚಿಸುವಂತೆ ಒಜಿಆರ್‌ಎ ಶಿಫಾರಸು ಮಾಡಿತ್ತು.

English summary
In a huge embarrassment for Imran Khan, the Pakistan Prime Minister's official resident is up for rent. In 2018, the ruling Tehreek-Pakistan Tehreek-e-Insaf (PTI) party had announced that Khan will vacate the lavish PM’s residence in Islamabad and the house will be turned into a campus of a postgraduate institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X