ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಯೆಜ್ ಕಾಲುವೆ: 6 ದಿನಗಳ ಬಳಿಕ ಕೊನೆಗೂ ತೇಲಿದ ಹಡಗು

|
Google Oneindia Kannada News

ಕೈರೋ, ಮಾರ್ಚ್ 29: ಕಳೆದ ಆರು ದಿನಗಳಿಂದ ಸುಯೆಜ್ ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿಕೊಂಡು ಸಂಚಾರ ದಟ್ಟಣೆಗೆ ಕಾರಣವಾಗಿದ್ದ 'ಎವರ್ ಗ್ರೀನ್' ಕಂಟೇನರ್ ಹಡಗು ಸೋಮವಾರ ಕೊನೆಗೂ ಜಲಮಾರ್ಗದಲ್ಲಿ ಮರಳಿನ ರಾಶಿಯ ಹಿಡಿತದಿಂದ ಮುಕ್ತಗೊಳ್ಳುವಲ್ಲಿ ಯಶಸ್ವಿಯಾಗಿದೆ. ಹಡಗಿನಿಂದ ಉಂಟಾಗಿದ್ದ ಬಿಕ್ಕಟ್ಟು ಈಜಿಪ್ಟಿನ ಸಿಬ್ಬಂದಿಯ ಸತತ ಪ್ರಯತ್ನದ ಫಲವಾಗಿ ನಿವಾರಣೆಯಾಗಿದೆ.

ವಿಶ್ವದ ಅತ್ಯಂತ ಮುಖ್ಯ ಜಲಮಾರ್ಗ ವಿಶ್ವದ ಅತ್ಯಂತ ಮುಖ್ಯ ಜಲಮಾರ್ಗ "ಸೂಯೆಜ್ ಕಾಲುವೆ" ಹಿಂದಿದೆ ರೋಚಕ ಇತಿಹಾಸ

ಹಡಗು ಸಿಲುಕಿಕೊಂಡಿರುವ ಭಾಗದಲ್ಲಿನ ಮರಳನ್ನು ತೆರವುಗೊಳಿಸಿ ಅದನ್ನು ಮತ್ತೆ ತೇಲುವಂತೆ ಮಾಡುವ ಕಾರ್ಯಾಚರಣೆಯನ್ನು ಪುನರಾರಂಭಿಸುತ್ತಿರುವುದಾಗಿ ಸುಯೆಜ್ ಕಾಲುವೆ ಪ್ರಾಧಿಕಾರ ತಿಳಿಸಿತ್ತು. ಹಡಗನ್ನು ಭಾಗಶಃ ಹೂಳಿನಿಂದ ಮುಕ್ತಗೊಳಿಸಲಾಗಿದ್ದು, ಅದನ್ನು ನೇರಗೊಳಿಸಲು ಪ್ರಯತ್ನ ನಡೆಸಲಾಗಿತ್ತು.

Cargo Ship blocking The Suez Canal Has Been Re-Floated

ಕಳೆದ ಆರು ದಿನಗಳಿಂದ ಸುಮಾರು 450 ಹಡಗುಗಳು ಮುಂದೆ ಸಾಗಲಾಗದೆ ಸಂಚಾರ ದಟ್ಟಣೆ ಉಂಟಾಗಿದೆ. ಇಷ್ಟು ಹಡಗುಗಳನ್ನು ಸತತವಾಗಿ ಈ ಕಿರಿದಾದ ಮಾರ್ಗದ ಮೂಲಕ ಕಳುಹಿಸುವುದು ಕಷ್ಟಸಾಧ್ಯ. ಹೀಗಾಗಿ ಸಂಪೂರ್ಣ ಸಂಚಾರ ಸಹಜ ಸ್ಥಿತಿಗೆ ಬರಲು ಎಷ್ಟು ಸಮಯ ಬೇಕಾಗಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

Recommended Video

CD ವಿಚಾರವಾಗಿ ಪ್ರಶ್ನೆ ಮಾಡೋದೇ ತಪ್ಪಾ ! | Mithun Rai | Oneindia Kannada

ಹಡಗನ್ನು ಮರಳಿನಿಂದ ಮುಕ್ತಗೊಳಿಸಿ ಪುನಃ ತೇಲುವಂತೆ ಮಾಡಲು 18 ಮೀಟರ್ ಆಳದವರೆಗೆ 27,000 ಕ್ಕೂ ಅಧಿಕ ಕ್ಯೂಬಿಕ್ ಮರಳು ತೆಗೆಯಲಾಗಿದೆ. ಮರಳು ತೆರವುಗೊಳಿಸಿ ಹಡಗನ್ನು ಜಲಮಾರ್ಗದೊಳಗೆ ಮರಳಿಸಲು ಮಂಗಳವಾರದ ಒಳಗೆ ಸಾಧ್ಯವಾಗದೆ ಹೋದರೆ ಹಡಗಿನಿಂದ ಸರಕುಗಳನ್ನು ಇಳಿಸುವ ಕಾರ್ಯ ಆರಂಭಿಸಲು ತೀರ್ಮಾನಿಸಲಾಗಿತ್ತು. ಹಡಗಿನ ಮುಂಭಾಗ ಹಾನಿಗೊಳಗಾಗಿದೆ. ಹೀಗಾಗಿ ಹಡಗು ಸಹಜ ಸಂಚಾರಕ್ಕೆ ಅನುಕೂಲಕರ ಸ್ಥಿತಿಯಲ್ಲಿದೆಯೇ ಎನ್ನುವುದು ಖಚಿತವಾಗಿಲ್ಲ.

English summary
Cargo ship blocking the Suez Canal has been re-floated after six days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X