ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಸ್ಟ ರಿಕಾದಲ್ಲಿ ತುರ್ತು ಭೂಸ್ಪರ್ಶದ ವೇಳೆ ಇಬ್ಭಾಗವಾದ ಕಾರ್ಗೋ ವಿಮಾನ

|
Google Oneindia Kannada News

ಕೋಸ್ಟ ರಿಕಾ (ಅಮೆರಿಕಾ) ಏಪ್ರಿಲ್ 8: ಕೋಸ್ಟ ರಿಕಾದಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ಕಾರ್ಗೋ ವಿಮಾನ ಗುರುವಾರ ಇಬ್ಭಾಗವಾದ ದುರಂತ ಸಂಭವಿಸಿದೆ. ಅಪಘಾತದಲ್ಲಿ ಸ್ಯಾನ್ ಜೋಸ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.

ಜರ್ಮನ್ ಲಾಜಿಸ್ಟಿಕ್ಸ್ DHL ನ ಹಳದಿ ಬಣ್ಣದ ವಿಮಾನ ಅಪಘಾತಕ್ಕೆ ಒಳಗಾಗಿದೆ. ತುರ್ತು ಲ್ಯಾಂಡಿಂಗ್ ಆಗುತ್ತಿದ್ದಂತೆ ಬೃಹತ್ ಹೊಗೆ ಹೊರಹೊಮ್ಮಿದೆ. ಕೂಡಲೇ ಅದು ಸ್ಥಗಿತಗೊಂಡಿದೆ. ಲ್ಯಾಂಡ್ ಆಗುತ್ತಿದ್ದಂತೆ ವಿಮಾನದ ಹಿಂದಿನ ಚಕ್ರಗಳು ರಸ್ತೆ ಬದಿ ಜಾರಿ ವಿಮಾನ ನಿಂತುಕೊಂಡಿದೆ. ಜೊತೆಗೆ ವಿಮಾನದಿಂದ ಹೊಗೆ ಬರಲು ಆರಂಭವಾಗಿದೆ. ಈ ಅಪಘಾತದಲ್ಲಿ ವಿಮಾನದ ಹಿಂಭಾಗ ಮುರಿದು ಹೋಗಿದೆ. ಘಟನೆಯ ದೃಶ್ಯಗಳು ವೈರಲ್ ಆಗಿವೆ.

ಇಬ್ಬರು ಸಿಬ್ಬಂದಿಗಳು ವಿಮಾನದಲ್ಲಿ ಸುರಕ್ಷಿತವಾಗಿರುವುದು ತಿಳಿದು ಬಂದಿದೆ ಎಂದು ಕೋಸ್ಟರಿಕಾದ ಅಗ್ನಿಶಾಮಕ ದಳದ ಮುಖ್ಯಸ್ಥ ಹೆಕ್ಟರ್ ಚೇವ್ಸ್ ಹೇಳಿದ್ದಾರೆ. ಘಟನೆ ನಡೆದ ಬಳಿಕ ವಿಮಾನವನ್ನು ತಪಾಸಣೆಗಾಗಿ ಕಳುಹಿಸಲಾಗಿದೆ ಎಂದು ರೆಡ್ ಕ್ರಾಸ್ ಕಾರ್ಯಕರ್ತ ಗೈಡೋ ವಾಸ್ಕ್ವೆಜ್ ಹೇಳಿದ್ದಾರೆ.

Cargo airplane broke up during an emergency landing in Costa Rica; Video

ಸ್ಯಾನ್ ಜೋಸ್‌ನ ಹೊರಗಿನ ಜುವಾನ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಬೋಯಿಂಗ್-757 ವಿಮಾನ 25 ನಿಮಿಷಗಳ ನಂತರ ಯಾಂತ್ರಿಕ ಕಾರಣದಿಂದಾಗಿ ತುರ್ತು ಲ್ಯಾಂಡಿಂಗ್‌ಗಾಗಿ 10:30 am (1630 GMT)ಕ್ಕೆ ಕೋಸ್ಟರಿಕಾದಲ್ಲಿ ಲ್ಯಾಂಡ್ ಆಗಿದೆ. ಬಳಿಕ ಈ ಅಪಘಾತ ಸಂಭವಿಸಿದೆ. ಜೊತೆಗೆ ಘಟನೆಯ ಬಳಿಕೆ ವಿಮಾನ ನಿಲ್ದಾಣವನ್ನು ಸಂಜೆ 6:00 ಗಂಟೆಯವರೆಗೆ ಮುಚ್ಚಲಾಗಿತ್ತು.

Cargo airplane broke up during an emergency landing in Costa Rica; Video

ಹೈಡ್ರಾಲಿಕ್ ಸಮಸ್ಯೆಯ ಬಗ್ಗೆ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ವಿಮಾನವನ್ನು ಹಾರಾಟ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಇದು ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

Recommended Video

RCBಯ ಹೊಸ ಹಾಡು ಬರೆದದ್ದು ಯಾರು ಗೊತ್ತಾ | Oneindia Kannada

English summary
A cargo airplane slid off the runway and broke in half during an emergency landing San Jose's international airport in Costa Rica. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X