ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಜಾನ್ ಮುನ್ನಾದಿನ ಇರಾಕಿನಲ್ಲಿ ಭೀಕರ ಹತ್ಯಾಕಾಂಡ

By Prasad
|
Google Oneindia Kannada News

ಬಾಗ್ದಾದ್, ಇರಾಕ್, ಜುಲೈ. 18 : ಇರಾಕಿ ಶಿಯಾ ಮುಸ್ಲಿಂ ಪಾಲಿಗೆ ಶುಕ್ರವಾರ ಬ್ಲಾಕ್ ಫ್ರೈಡೆ. ಶಾಂತಿ, ಸಹಬಾಳ್ವೆಯ ಪವಿತ್ರ ಹಬ್ಬದ ಮುನ್ನಾದಿನ ಉಗ್ರರು ರಕ್ತದೋಕುಳಿಯಾಡಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರರು ದಯಾಲಾ ನಗರದ ಜನನಿಬಿಡ ಪ್ರದೇಶದಲ್ಲಿ ನಡೆಸಿರುವ ಭೀಕರ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠಪಕ್ಷ 120 ಜನರು ಹತ್ಯೆಯಾಗಿದ್ದು, ಇನ್ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ನಡೆಸಿರುವ ಅತ್ಯಂತ ಭೀಕರ ದಾಳಿ ಎಂದು ಪರಿಗಣಿಸಲಾಗಿದೆ.

ಪವಿತ್ರ ರಂಜಾನ್ ತಿಂಗಳ ಉಪವಾಸವನ್ನು ಅಂತ್ಯಗೊಳಿಸಿ ಮರುದಿನ ಹಬ್ಬದ ಸಂಭ್ರಮದಲ್ಲಿ ಇದ್ದಾಗ ಕಾರಿನಲ್ಲಿದ್ದ ಬಾಂಬ್ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಖಾನ್ ಬಾನಿ ಸಾದ್‌ನಲ್ಲಿರುವ ಹಲವಾರು ಕಟ್ಟಡಗಳು ಕೂಡ ನೆಲಸಮವಾಗಿವೆ. [ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು]

Car bomb kills hundreds in Iraq before Ramzan

ಇರಾಕ್‌ನ ಪಶ್ಚಿಮ ಮತ್ತು ಉತ್ತರ ಭಾಗಗಳನ್ನು ತನ್ನು ವಶಕ್ಕೆ ತೆಗೆದುಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿಯ ಹೊಣೆಯನ್ನು ಹೊತ್ತಿದ್ದಾರೆ. ಇವರ ಉಪಟಳವನ್ನು ವಿರೋಧಿಸುತ್ತಿದ್ದ ಶಿಯಾ ಮುಸ್ಲಿಂರೇ ಈ ಪ್ರದೇಶದಲ್ಲಿ ಹೆಚ್ಚಾಗಿರುವುದರಿಂದ ಖಾನ್ ಬಾನಿ ಸಾದ್ ಪ್ರದೇಶವನ್ನು ದಾಳಿಯ ಗುರಿಯನ್ನಾಗಿ ಉಗ್ರರು ಮಾಡಿಕೊಂಡಿದ್ದರು.

ಇರಾಕ್‌ನ ಉತ್ತರ ಭಾಗದಲ್ಲಿರುವ ಹವೀಜಾದಲ್ಲಿ ಸುನ್ನಿ ಮುಸ್ಲಿಂರ ಹತ್ಯೆಗೆ ಪ್ರತೀಕಾರವಾಗಿ ಶಿಯಾ ಮುಸ್ಲಿಂರ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ಸ್ಟೇಟ್ ಉಗ್ರರು ಟ್ವೀಟ್ ಮಾಡಿದ್ದಾರೆ. ಕಾರಿನಲ್ಲಿದ್ದ ಆತ್ಮಹತ್ಯಾ ದಾಳಿಕೋರ ಮೂರು ಟನ್ನಿನಷ್ಟು ಸ್ಫೋಟಗಳನ್ನಿಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ.

ಸತ್ತವರ ಅವಯವಗಳು ಸುತ್ತಲಿನ ಕಟ್ಟಡಗಳ ಮೇಲೆಲ್ಲ ಬಿದ್ದಿವೆ. ಶವಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಸತ್ತ ಮಕ್ಕಳ ದೇಹದ ಭಾಗಗಳನ್ನು ಕೆಲವರು ತರಕಾರಿ ಬುಟ್ಟಿಗಳಲ್ಲಿ ತುಂಬುತ್ತಿದ್ದುದು ಹೃದಯವಿದ್ರಾವಕವಾಗಿತ್ತು. ಬಂಧುಗಳ ಆಕ್ರಂದನವಂತೂ ಮುಗಿಲುಮುಟ್ಟಿದೆ.

ಈ ಘಟನೆ ನಡೆದ ನಂತರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಆ ಸ್ಥಳದಲ್ಲಿದ್ದ ಕಾರುಗಳ ಕಿಟಕಿಗಳನ್ನು ಪುಡಿಪುಡಿ ಮಾಡಿ ತಮ್ಮ ಕ್ರೋಧ ಹೊರಹಾಕಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

English summary
It is black Friday for Shia Muslims in Iraq. Just before Ramzan (Ramadan) Islamic State militants have killed hundreds of muslims in Dayala city by exploding car bomb. More than two hundred people have injured. It is considered as one of the deadliest attack by Islamic State militants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X