ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್: ಪ್ರಬಲ ಬಾಂಬ್ ಸ್ಫೋಟದಲ್ಲಿ 8 ಮಂದಿ ಸಾವು

|
Google Oneindia Kannada News

ಕಾಬೂಲ್, ಡಿ. 20: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಕಾರು ಬಾಂಬ್ ಸ್ಫೋಟವಾಗಿದೆ. ಭಾನುವಾರ ಬೆಳಗ್ಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಕಾಬೂಲ್ ಮೇಲೆ ಸತತವಾಗಿ ಉಗ್ರರಿಂದ ಭಯೋತ್ಪಾದನಾ ಚಟುವಟಿಕೆಗಳು ತೀವ್ರಗೊಂಡಿವೆ. ಕಾಬೂಲ್ ಮೇಲೆ ಉಗ್ರರ ದಾಳಿಯಾಗಿದೆ. ದುರಾದೃಷ್ಟಕ್ಕೆ ನಾಗರಿಕರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಆಂತರಿಕ ಸಚಿವಾಲಯದ ವಕ್ತಾರ ತಾರೀಕ್ ಅರಿಯಾನ್ ಹೇಳಿದ್ದಾರೆ.

ಭಾರತವನ್ನು ಕಂಡರೆ ಭಯವಾಗುತ್ತಿದೆ, ನಮ್ಮನ್ನು ಕಾಪಾಡಿ ಎಂದ ಪಾಕಿಸ್ತಾನ..!ಭಾರತವನ್ನು ಕಂಡರೆ ಭಯವಾಗುತ್ತಿದೆ, ನಮ್ಮನ್ನು ಕಾಪಾಡಿ ಎಂದ ಪಾಕಿಸ್ತಾನ..!

ಸೆಪ್ಟೆಂಬರ್‌ 24ರಂದು ದಿಢೀರ್ ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗ್ಯಾಂಗ್ ದಾಳಿ ನಡೆಸಿ ಅಫ್ಘಾನಿಸ್ತಾನದ 28 ಪೊಲೀಸರು ಹಾಗೂ ಅರೆಸೇನಾ ಪಡೆ ಯೋಧರನ್ನು ಹತ್ಯೆ ಮಾಡಿತ್ತು. ಈ ಘಟನೆ ನಂತರ ಕೂಡ ಕೆಲವೇ ದಿನಗಳ ಅಂತರದಲ್ಲಿ ಹತ್ತಾರು ದಾಳಿಗಳನ್ನ ತಾಲಿಬಾನ್ ನಡೆಸಿದೆ.

Car bomb kills 8 in Afghanistan’s Kabul: Officials

ಡಿಸೆಂಬರ್ ಮೊದಲ ವಾರದಲ್ಲಿ ಶಂಕಿತ ತಾಲಿಬಾನ್ ಉಗ್ರರು ನಡೆಸಿದ ಕಾರ್ ಬಾಂಬ್ ದಾಳಿಯಲ್ಲಿ ಮೂವರು ಅಫ್ಘಾನಿಸ್ತಾನ ಪೊಲೀಸರು ಬಲಿಯಾಗಿ, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕಂದಹಾರ್‌ ಪೊಲೀಸ್ ಚೆಕ್‌ ಪಾಯಿಂಟ್ ಅನ್ನೇ ಟಾರ್ಗೆಟ್ ಮಾಡಿ ತಾಲಿಬಾನಿಗಳು ದಾಳಿ ನಡೆಸಿದ್ದರು.

ಸೆಪ್ಟೆಂಬರ್‌ನಲ್ಲಿ ತಾಲಿಬಾನ್ ಹಾಗೂ ಅಫ್ಘಾನಿಸ್ತಾನ ಸರ್ಕಾರದ ಮಧ್ಯೆ ಶಾಂತಿ ಒಪ್ಪಂದ ಮಾಡಿಸಲು ಅಮೆರಿಕ ಮುಂದಾಗಿತ್ತು. ಇದರ ಭಾಗವಾಗಿ ಮಾತುಕತೆಯೂ ನಡೆದಿತ್ತು. ಖತಾರ್‌ನ ರಾಜಧಾನಿ ದೋಹಾ ಶಾಂತಿ ಮಾತುಕತೆಗೆ ವೇದಿಕೆ ಒದಗಿಸಿತ್ತು.

ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಫ್ಘಾನಿಸ್ತಾನ ಸರ್ಕಾರಕ್ಕೆ ಸಾಥ್ ನೀಡುವ ಭರವಸೆ ಕೊಟ್ಟಿದ್ದರು.

English summary
A car bomb killed eight people and wounded more than 15 others in Kabul Sunday, officials said, the latest attack to rock the Afghan capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X