ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ ಕಾನ್ಫರೆನ್ಸ್‌ ನಡೆಯುತ್ತಿರುವಾಗಲೇ ಮೂತ್ರ ವಿಸರ್ಜಿಸಿದ ಕೆನಡಾ ಸಂಸದ

|
Google Oneindia Kannada News

ಕೆನಡಾ ಸರ್ಕಾರದ ಸಭೆಯಲ್ಲಿ ಬೆತ್ತಲಾಗಿ ಓಡಾಡಿದ್ದ ಸಂಸದ ಈಗ ಮೂತ್ರ ವಿಸರ್ಜಿಸಿ ಸುದ್ದಿಯಾಗಿದ್ದಾರೆ.

ಸರ್ಕಾರದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಸಂಸದ ವಿಲಿಯಂ ಆಮೋಸ್ ಸಭೆ ನಡೆಯುತ್ತಿರುವಾಗಲೇ ಕಾಫಿ ಲೋಟದಲ್ಲಿ ಮೂತ್ರ ವಿಸರ್ಜಿಸಿ ಸುದ್ದಿಲ್ಲಿದ್ದಾರೆ.

ವಿಡಿಯೋ ಸಭೆಯಲ್ಲಿ ಬೆತ್ತಲಾಗಿ ಕಾಣಿಸಿಕೊಂಡ ಸಂಸದವಿಡಿಯೋ ಸಭೆಯಲ್ಲಿ ಬೆತ್ತಲಾಗಿ ಕಾಣಿಸಿಕೊಂಡ ಸಂಸದ

ಕೆಲ ತಿಂಗಳ ಹಿಂದೆ ನಡೆದಿದ್ದ ಸರ್ಕಾರಿ ಸಭೆಯಲ್ಲೇ ಸಂಪೂರ್ಣ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಕೆನಡಾ ಸಂಸದರ ಈ ವರ್ತನೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಅವರ ಮಾನಸಿಕ ಆರೋಗ್ಯದ ಬಗ್ಗೆ ಪರೀಕ್ಷೆಯಾಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.

Canadian Politician Caught On Camera Urinating During Virtual Parliament Session

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಮೋಸ್ ಸಭೆ ನಡೆಯುತ್ತಿರುವುದು ಹಾಗೂ ಕ್ಯಾಮರಾ ಆನ್‌ ಆಗಿರುವುದು ನನ್ನ ಗಮನದಲ್ಲಿರಲಿಲ್ಲ, ಆದರೂ ಇದರಿಂದ ಮುಜುಗರವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಕೇಳಿಕೊಂಡಿದ್ದಾರೆ.

ಈ ಹಿಂದೆ ಸಭೆಯಲ್ಲಿ ನಗ್ನರಾಗಿ ಕಾಣಿಸಿಕೊಂಡಿದ್ದಕ್ಕೂ ಸ್ಪಷ್ಟನೆ ನೀಡಿದ್ದ ಸಂಸದ ವರ್ಕೌಟ್ ಮುಗಿಸಿಕೊಂಡು ಬಂದು ಬಟ್ಟೆ ಬದಲಾಯಿಸುತ್ತಿರುವಾಗ ಹಾಗಾಯಿತು ಎಂದು ಹೇಳಿದ್ದರು.

ಸಂಸದರ ವರ್ತನೆಯು ಆಡಳಿತಾರೂಢ ಲಿಬರಲ್ ಪಕ್ಷದ ಮನೋಭಾವವನ್ನು ತೋರಿಸುತ್ತದೆ, ಯಾವುದನ್ನೂ ಗಂಭೀರವಾಗಿ ಸರ್ಕಾರ ಪರಿಗಣಿಸುತ್ತಿಲ್ಲ ಎನ್ನುವುದು ತಿಳಿಯುತ್ತದೆ, ಇದರಿಂದಲೇ ಸಂಸದರು ಸಭೆಯಲ್ಲಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಮೋದ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ಪ್ರಧಾನಿ ಜಸ್ಟಿನ್ ಟ್ರೂಡೊ ಪ್ರಧಾನಿ ಸಂಸದರ ವಿರುದ್ಧ ಕ್ರಮ ಜರುಗಿಸಬೇಕೆಂದು ಎಲ್ಲೆಡೆ ಆಗ್ರಹ ಕೇಳಿಬರುತ್ತಿದೆ.

English summary
A Canadian lawmaker has apologized after being caught urinating on camera during virtual parliamentary proceedings, just weeks after he appeared naked during a video call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X