ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪತ್ನಿಗೆ ಕೊರೊನಾ ಸೋಂಕು

|
Google Oneindia Kannada News

ಒಟ್ಟಾವಾ, ಮಾರ್ಚ್ 13: ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಪತ್ನಿ ಸೋಫಿ ಗ್ರೆಗೊಯಿರ್ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಪ್ರಧಾನಿ ಟ್ರುಡೊ ಆರೋಗ್ಯವಂತರಾಗಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಟ್ರುಡೊ ಪತ್ನಿ ಗ್ರೆಗೊಯಿರ್ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಟ್ರುಡೊ ಅವರು ಸ್ವಯಂ ಪ್ರೇರಿತರಾಗಿ 14 ದಿನಗಳ ಪ್ರತ್ಯೇಕವಾಸದಲ್ಲಿರಲಿದ್ದಾರೆ.

ಅಮೇರಿಕಾದ ಪ್ರಖ್ಯಾತ ನಟ ಮತ್ತು ಪತ್ನಿಗೆ ಕೊರೊನಾ ವೈರಸ್ ಪಾಸಿಟಿವ್!ಅಮೇರಿಕಾದ ಪ್ರಖ್ಯಾತ ನಟ ಮತ್ತು ಪತ್ನಿಗೆ ಕೊರೊನಾ ವೈರಸ್ ಪಾಸಿಟಿವ್!

ಸೋಫಿ ಅವರು ಬ್ರಿಟನ್ ನಿಂದ ಒಟ್ಟವಾಗೆ ಬರುತ್ತಿದ್ದಂತೆ ಜ್ವರ ಕಾಣಿಸಿಕೊಂಡಿದೆ. ತಕ್ಷಣ ಕೊರೊನಾವೈರಸ್ ಇರುವ ಶಂಕೆಯಿಂದ ಪರೀಕ್ಷೆ ಮಾಡಿದ್ದಾಗ ಸೋಂಕು ತಗುಲಿರುವುದು ಪತ್ತೆಯಾಗಿದೆ. 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

Canadian PM Justin Trudeau’s wife Sophie tests positive for coronavirus

ಕೆನಡಾದಲ್ಲಿ 140ಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಆದರೆ 11 ಮಂದಿ ಗುಣಮುಖರಾಗಿದ್ದಾರೆ. ಮಾರಣಾಂತಿಕ ಕೊರೊನಾ ವೈರಸ್ ಅಪ್ಡೇಟ್: ಅಂಕಿ-ಅಂಶಗಳ ಪ್ರಕಾರ 4,973ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. 114 ರಾಷ್ಟ್ರಗಳಲ್ಲಿ 1,34,681ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಕೊರೊನಾ ವೈರಸ್ ಹರಡಿಸಿದ ಚೀನಾದ ಹುಬೈ ಪ್ರದೇಶದಲ್ಲಿಯೇ 3,170 ಮಂದಿ ಸೋಂಕಿಗೆ ಬಲಿಯಾಗಿದ್ದರೆ, ಚೀನಾದಲ್ಲಿ ಒಟ್ಟು 80,797 ಜನರಿಗೆ ಸೋಂಕು ತಗಲಿರುವ ಬಗ್ಗೆ ವರದಿಯಾಗಿದೆ. ಯುಎಸ್ಎನಲಿ 1727 ಪ್ರಕರಣ ದಾಖಲಾಗಿದ್ದು, 41 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ವಿಶ್ವದೆಲ್ಲೆಡೆ ಸೇರಿ 69, 142 ಮಂದಿ ಗುಣಮುಖರಾಗಿದ್ದಾರೆ.

English summary
Canadian Prime Minister Justin Trudeau’s wife Sophie Gregoire Trudeau has tested positive for coronovirus, a spokesman for the prime minister said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X