ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಮಾರಿ ಎಬೋಲಾಕ್ಕೆ ಕೆನಡಾ ಚುಚ್ಚುಮದ್ದು

|
Google Oneindia Kannada News

ನ್ಯೂಯಾರ್ಕ್, ಅ.19 : ಮಹಾಮಾರಿ ಎಬೋಲಾಕ್ಕೆ ಔಷಧ ಕಂಡುಹಿಡಿಯಲು ನಿರಂತರ ಪ್ರಯತ್ನಗಳು ನಡೆದಿರುವ ಬೆನ್ನಲ್ಲೇ ಕೆನಡಾ ತಾನೊಂದು ಚುಚ್ಚುಮದ್ದು ತಯಾರಿಸಿದ್ದೇನೆ ಎಂದು ಹೇಳಿಕೊಂಡಿದೆ. ಪ್ರಾಣಿಗಳ ಮೇಲೆ ಇದನ್ನು ಪ್ರಯೋಗಾತ್ಮಕವಾಗಿ ಪರೀಕ್ಷಿಸಲಾಗಿದ್ದು ಸಕಾರಾತ್ಮಕ ಫಲಿತಾಂಶ ಬಂದಿದೆ ಎಂದು ಹೇಳಿದೆ.

ಈ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ಅಗತ್ಯವಿದ್ದು ವಿಶ್ವ ಆರೋಗ್ಯ ಸಂಸ್ಥೆಯೂ ನೆರವು ನೀಡಲಿದೆ. ಮುಂದಿನ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ ಯುರೋಪ್ ಮತ್ತು ಆಫ್ರಿಕಾದ ಕೆಲ ಭಾಗಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.[ಮಹಾಮಾರಿ ಎಬೋಲಾ ತಡೆಗೆ ಒಬಾಮಾ ಸೂತ್ರ]

ebola

ಮಹಾಮಾರಿಗೆ ಇದುವರೆಗೆ 4500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಶಂಕಿತ ಸೋಂಕಿಗೆ 10 ಸಾವಿರಕ್ಕೂ ಅಧಿಕ ಜೀವಗಳು ಚಿಕಿತ್ಸೆ ಪಡೆಯುತ್ತಿವೆ. ರೋಗದ ಗುಣಲಕ್ಷಣದ ಆಧಾರದಲ್ಲಿ ಆಸ್ಪತ್ರೆ ಸೇರಿದ್ದ 9,216 ಜನರಲ್ಲಿ 4,555 ಜನ ಮೃತಪಟ್ಟಿದ್ದಾರೆ. ಪ್ರತಿದಿನ ಸಾವಿನ ಸಂಖ್ಯೆ ಏರುತ್ತಿರುವುದು ಆತಂಕ ಹೆಚ್ಚಾಗಿದೆ.

ಗಿನಿಯಾ, ಲೈಬೀರಿಯಾ ಹಾಗೂ ಸಿಯಾರಾ ಲಿಯೋನ್ನಲ್ಲಿ ರೋಗ ರುದ್ರತಾಂಡವವಾಡುತ್ತಿದೆ. ಇತ್ತ ಆಫ್ರಿಕಾ ಖಂಡದಿಂದ ಬೇರೆಡೆಗೆ ತೆರಳುತ್ತಿರುವರಲ್ಲೂ ರೋಗ ಶಂಕೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಅನೇಕ ದೇಶಗಳು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.[ಎಬೋಲಾ ಮಾರಿಗೆ ಅಮೆರಿಕಾದಲ್ಲಿ ಮೊದಲ ಬಲಿ]

ರೋಗಕ್ಕೆ ಔಷಧ ನೀಡುತ್ತೇನೆ ಎಂದು ಹೇಳಿಲ್ಲ
ಎಬೋಲಾಕ್ಕೆ ನಾನು ಔಷಧ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಎಂದು ಕೆಲ ಮಾಧ್ಯಮಗಳು ಇಂಥ ವರದಿ ಬಿತ್ತರಿಸಿ ಜನರನ್ನು ಹಾದಿ ತಪ್ಪಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ ಎಂದು ಯೋಗ ಗುರು ಬಾಬಾ ರಾಮ್ ದೇವ್ ಸ್ಪಷ್ಟಪಡಿಸಿದ್ದಾರೆ.

ಅಂತರ್ಜಾಲ ಮಾಧ್ಯಮವೊಂದು ನನ್ನ ಚಿತ್ರ ಬಳಸಿಕೊಂಡು ಇಂಥ ಪ್ರಚಾರ ಮಾಡಿಕೊಂಡಿದೆ. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ರಾಮ್ ದೇವ್ ಸ್ಪಷ್ಟಪಡಿಸಿದ್ದಾರೆ.

English summary
Canada's set to send its experimental Ebola vaccine to the World Health Organization, marking the first step toward clinically testing and possibly approving the drug. The latest World Health Organisation (WHO) figures show the Ebola outbreak in West Africa has killed more than 4,500 people across Liberia, Guinea and Sierra Leone, the three worst-hit countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X